Advertisements

ಬೀಚ್ ಬಳಿ ಈಕೆ ಮಾಡಿದ ಒಂದೇ ಒಂದು ಐಡಿಯಾಗೆ ಜಗತ್ತಿನಾದ್ಯಂತ ಮೆಚ್ಚುಗೆ ! ಆಕೆ ಮಾಡಿದ್ದೇನು ಗೊತ್ತಾ ?

Inspire

ನಮಸ್ತೇ ಸ್ನೇಹಿತರೇ, ನಾವು ಮಾನವರು ಏನನ್ನಾದರೂ ತಡೆದುಕೊಳ್ಳುತ್ತೇವೆ. ಆದರೆ ಹಸಿವನ್ನ ತಡೆದುಕೊಂಡು ಬದುಕಲು ಸಾಧ್ಯವಿಲ್ಲ. ಆದರೆ ಒಂದೊತ್ತಿನ ಊಟಕ್ಕೂ ಪರದಾಡುವ ಲಕ್ಷಾಂತರ ಮಂದಿ ನಮ್ಮ ನಡುವೆಯೇ ಇದ್ದಾರೆ. ಇನ್ನು ಊಟ ಇಲ್ಲದೆ ಹಸಿವಿನಿಂದ ಸಾ’ಯುವವರು ಸಹ ಇದ್ದಾರೆ. ಆದರೆ ಇದೆ ವೇಳೆ ಅಷ್ಟೇ ಊಟವನ್ನ ವೇಸ್ಟ್ ಮಾಡಿ ಬಿಸಾಡುವವರು ಇದ್ದಾರೆ ಕೂಡ. ಹೌದು, ಸಭೆ ಸಮಾರಂಭಗಳಲ್ಲೋ ಅಥ್ವಾ ಬೇರೆ ಯಾವುದೊ ಸ್ಥಳಗಳಿಗೆ ಹೋದಾಗ ಅಲ್ಲಿ ಊಟವನ್ನ ಅರ್ಧ ತಿಂದು ಕಸದ ತೊಟ್ಟಿಗೆ ಬಿಸಾಡುವವರೇ ಹೆಚ್ಚು. ಹೀಗೆ ಪ್ರತೀ ದಿನ ಟನ್ ಗಟ್ಟಲೆ ಆಹಾರವನ್ನ ನಾವೇ ವೇಸ್ಟ್ ಮಾಡುತ್ತಿದ್ದೇವೆ. ಆದರೆ ಎಲ್ಲವನ್ನು ಕೂಡ ಸರ್ಕಾರಗಳೇ ಮಾಡಲು ಸಾಧ್ಯವಿಲ್ಲ. ಹಾಗಾಗಿ ಕೆಲವೊಬ್ಬರು ಮಾತ್ರ ಧೈರ್ಯದಿಂದ ಮುಂದೆ ಬಂದು ಒಳ್ಳೆಯ ಕೆಲಸಗಳ ಪ್ರಾರಂಭ ಮಾಡುತ್ತಾರೆ.

ಅಂತಹವರಲ್ಲಿ ಒಬ್ಬರು ಈ ಮಹಿಳಾ ಡಾಕ್ಟರ್. ಚೆನ್ನೈನ ಆಸ್ಪತ್ರೆಯೊಂದರಲ್ಲಿ ವೈದ್ಯೆ ಆಗಿರುವ ಈಕೆಯ ಹೆಸರು ಫಾತಿಮಾ ಎಂದು. ಹಾಗೊಂದು ದಿನ ಇವರು ಪತ್ರಿಕೆ ಓದುವ ವೇಳೆ ನಮ್ಮಲಿರುವ ಜನಸಂಖ್ಯೆಗಿಂತ ಎರಡು ಪಟ್ಟು ಊಟವನ್ನ ವೇಸ್ಟ್ ಮಾಡುತ್ತಿರುವ ಬಗ್ಗೆ ಈಕೆ ಲೇಖನಿಯೊಂದರ ಮೂಲಕ ತಿಳಿಯುತ್ತಾರೆ. ಇನ್ನು ಈ ವಿಷಯ ತುಂಬಾನೇ ಕಾಡಿತ್ತು ಫಾತಿಮಾಗೆ. ಆಗ ತುಂಬಾ ಯೋಚನೆ ಮಾಡಿದ ಬಳಿಕ ಅವರಿಗೆ ಆಲೋಚನೆಯೊಂದು ಹೊಳೆಯುತ್ತದೆ ಅದರಂತೆ ಒಂದು ನಿರ್ಧಾರಕ್ಕೆ ಕೂಡ ಬರುತ್ತಾರೆ. ಹೌದು, ‘ಕಮ್ಮ್ಯುನಿಟಿ ಫ್ರಿಡ್ಜ್’ ಎಂಬ ಪ್ಲಾನ್ ಒಂದನ್ನ ಮಾಡಿದ ಫಾತಿಮಾ ಅದನ್ನ ಕಾರ್ಯರೂಪಕ್ಕೆ ಕೂಡ ತರುತ್ತಾರೆ. ಅದರಂತೆ ಚೆನ್ನೈನ ಎಡ್ವರ್ಡ್ ಬೀಚ್ ಬಳಿ ದೊಡ್ಡದಾದ ಫ್ರಿಡ್ಜ್ ಒಂದನ್ನ ಕೊಂಡು ತಂದು ಅಲ್ಲಿ ಇಟ್ಟರು.

Advertisements

ಹೀಗೆ ಮಾಡಲು ಅದರ ಹಿಂದೆ ಫಾತಿಮಾ ಅವರ ಒಳ್ಳೆಯ ಉದ್ದೇಶ ಕೂಡ ಇದೆ. ಹೌದು, ತುಂಬಾ ಜನ ಉಳಿದ ಊಟವನ್ನ ಕಸದ ಡಬ್ಬಿಗೆ ಹಾಕುತ್ತಾರೆ. ಇನ್ನೂ ಕೆಲವು ಜನ ತಮಗೆ ಇಷ್ಟ ಇಲ್ಲದ ಊಟವನ್ನ ಯಾರಿಗೆ ಕೊಡುವುದು ಎಂದು ತಿಳಿಯದೆ ಬಿಸಾಡುವವರು ಇದ್ದಾರೆ. ಮದುವೆ ಸೇರಿದಂತೆ ಸಮಾರಂಭಗಳಲ್ಲಿ ಕೂಡ ಉಳಿದ ಊಟವನ್ನ ಬಿಸಾಡುತ್ತಾರೆ. ಆದರೆ ಹೀಗೆ ಮಾಡದೆ ಅಂತಹವರು ಆ ಊಟವನ್ನ ತಂದು ಈ ಫ್ರಿಡ್ಜ್ ನಲ್ಲಿ ಇಡಬಹುದಾಗಿದೆ. ಇನ್ನು ಈ ಕಮ್ಮ್ಯುನಿಟಿ ಫ್ರಿಡ್ಜ್ ನಲ್ಲಿರುವ ಊಟವನ್ನ ಹಸಿವಿನಿಂದ ಇರುವವರು, ಆಹಾರದ ಅವಶ್ಯಕತೆ ಇರುವವರು ಬಂದು ತಮಗೆ ಬೇಕಾದ ಊಟವನ್ನ ತೆಗೆದುಕೊಂಡು ಎಷ್ಟು ಬೇಕೋ ಅಷ್ಟು ತಿನ್ನಬಹುದಾಗಿದೆ. ಇದಕ್ಕಾಗಿ ಅವರು ಹಣವನ್ನ ಕೊಡುವ ಅವಶ್ಯಕತೆ ಇಲ್ಲ. ಡಾ. ಫಾತಿಮಾ ಅವರ ಈ ವಿಧಾನವಂತೂ ಅಭೂತಪೂರವ ಯಶಸ್ಸು ಕಾಣುತ್ತಿದೆ. ಇನ್ನು ಇದು ಎಷ್ಟರ ಮಟ್ಟಿಗೆ ಯಶಸ್ಸು ಕಂಡಿದೆ ಎಂದರೆ ಶಾಲಾ ಮಕ್ಕಳು ಸೇರಿದಂತೆ ಜನರು ಸಹ ಪ್ರತಿ ದಿನ ಯಾವುದೊ ಒಂದು ಆಹಾರವನ್ನ ತಂದು ಈ ಫ್ರಿಡ್ಜ್ ನಲ್ಲಿ ಇಡುತ್ತಿದ್ದಾರೆ.

ಹಾಗೆಯೆ ತಾವು ಉಪಯೋಗ ಮಾಡದೆ ಇರುವ ಚಪ್ಪಲಿ ಬಟ್ಟೆ ಸೇರಿದಂತೆ ಹಲವಾರು ವಸ್ತುಗಳನ್ನ ಅಲ್ಲಿ ತಂದಿಡುತ್ತಿದ್ದಾರೆ. ಇನ್ನು ಫಾತಿಮಾ ಅವರು ಮಾಡಿದ ಒಂದು ಐಡಿಯಾ ಹಾಗು ಅವರ ದಿಟ್ಟ ನಿರ್ಧಾರದಿಂದ ಎಷ್ಟೋ ಜನರ ಹಸಿವನ್ನ ನೀಗಿಸಲು ಕಾರಣವಾಗಿದೆ. ಇನ್ನು ಈ ಅದ್ಭುತ ಯೋಜನೆ ಬೆಂಗಳೂರಿನಲ್ಲಿ ಸಹ ಕಾರ್ಯಗತಗೊಂಡಿದೆ. ಎಷ್ಟೋ ಜನ ಒಂದೊತ್ತಿನ ಊಟಕ್ಕೂ ಪರದಾಡುವವರು, ಎಷ್ಟೋ ರಾತ್ರಿ ಬರೀ ನೀರು ಮಾತ್ರ ಕುಡಿದು ಮಲಗುವವರು, ಈ ಫ್ರಿಡ್ಜ್ ನಲ್ಲಿರುವ ಆಹಾರವನ್ನ ತಿಂದು ತಮ್ಮ ಹಸಿವನ್ನ ನೀಗಿಸಿಕೊಳ್ಳುತ್ತಿದ್ದಾರೆ. ನಮಗೆ ಹೆಚ್ಚಾಗಿ ಉಳಿದ ಊಟ ಬೇರೆಯವರನ್ನ ಹಸಿವನ್ನ ನೀಗಿಸಿ ಹೊಟ್ಟೆ ತುಂಬಿಸುತ್ತೆ ಅನ್ನುವುದಾದರೆ ಅದಕ್ಕಿಂತ ಬೇರೆ ಏನು ಬೇಕು ಹೇಳಿ. ಒಟ್ಟಿನಲ್ಲಿ ಇಂತಹದೊಂದು ಅಭೂತಪೂರ್ವ ಆಲೋಚನೆ ಮಾಡಿ ಅದನ್ನ ಕಾರ್ಯರೂಪಕ್ಕೆ ತಂದು ಹಸಿವಿನಿಂದಿರುವ ಎಷ್ಟೋ ಸಾವಿರರು ಜನರ ಹೊಟ್ಟೆ ತುಂಬುವಂತೆ ಮಾಡಿದ ಡಾ. ಫಾತಿಮಾ ಅವರಿಗೆ ಕೋಟಿ ಕೋಟಿ ವಂದನೆಗಳು.

Leave a Reply

Your email address will not be published. Required fields are marked *