Advertisements

ಡಾ. ರಾಜ್ ಕುಮಾರ್ ಅವರು ಕಟ್ಟಿಸಿದ ಗಾಜನೂರಿನ ಮನೆ ಹೇಗಿದೆ ಗೊತ್ತಾ? ಆದರೆ ಅಣ್ಣಾವ್ರು ಈ ಮನೆ ಬಿಡಲು ಈ ವ್ಯಕ್ತಿಯೇ ಕಾರಣ..

Cinema

ನಮಸ್ತೆ ಸ್ನೇಹಿತರೆ, ಗಾಜನೂರು ಎಂಬ ಚಿಕ್ಕ ಹಳ್ಳಿಯಿಂದ ನಕ್ಷತ್ರ ಹುಟ್ಟಿ ಬಂದು ಆರು ಕೋಟಿ ಕನ್ನಡಿಗರ ಹೃದಯದಲ್ಲಿ ಮಿನುಗುತ್ತದೆ ಎಂದು ಯಾರು ತಾನೆ ಊಹಿಸಲು ಸಾಧ್ಯ ಹೇಳಿ. ಚಿಕ್ಕ ವಯಸ್ಸಿನಲ್ಲೇ ವಿದ್ಯಾಭ್ಯಾಸ ಅರ್ಧಕ್ಕೆ ನಿಲ್ಲಿಸಿ ನಟನೆಯ ಬಗ್ಗೆ ಆಸಕ್ತಿ ಬೆಳೆಸಿಕೊಂಡು.. ನಾಟಕಗಳ ಮಧ್ಯೆ ಬಾಂಧವ್ಯ ಬೆಳೆಸಿಕೊಂಡು, ನಂತರ ಕನ್ನಡದ ಸೂಪರ್ ಸ್ಟಾರ್ ಆಗಿ ಬೆಳೆದ ಡಾ.ರಾಜ್ ಕುಮಾರ್ ಕನ್ನಡದ ಸಿನಿ ರಸಿಕರ ಮಹಾರಾಜ. ಪ್ರತಿಯೊಬ್ಬರಿಗೂ ಜೀವನದಲ್ಲಿ ಒಂದು ಆಸೆ ಇರುತ್ತದೆ..

Advertisements

ಅದು ಏನೆಂದರೆ ಈ ಪ್ರಪಂಚಕ್ಕೆ ತನ್ನನ್ನು ಪರಿಚಯಿಸಿದ ತನ್ನ ಹುಟ್ಟೂರಿನಲ್ಲಿ ಒಂದು ಒಳ್ಳೆಯ ಮನೆ ಕಟ್ಟಬೇಕು ಅನ್ನೋದು. ಯಾಕೆಂದರೆ ನಾವು ಎಲ್ಲೇ ಇದ್ದರೂ, ಎಷ್ಟೇ ದೊಡ್ಡ ಮಟ್ಟಕ್ಕೆ ಬೆಳೆದರು ನಮ್ಮ ಮನಸ್ಸು ಹುಟ್ಟೂರಿನ ಕಡೆ ಸೆಳೆಯುತ್ತಿರುತ್ತದೆ. ಅಲ್ಲಿ‌ನ ನೆನಪುಗಳು ನಮ್ಮನ್ನ ಕಾಡುತ್ತಿರುತ್ತವೆ.. ಆಗೆ ಡಾ.ರಾಜ್ ಕುಮಾರ್ ಅವರಿಗೂ ಕೂಡ. ತಮ್ಮ ಹುಟ್ಟೂರಿನಲ್ಲಿ ಒಂದು ಸುಂದರ ಮನೆಯನ್ನು ಕಟ್ಟಬೇಕು ಅನ್ನೋದು ದೊಡ್ಡ ಆಶಯವಾಗಿತ್ತು.. ಕೊನೆಗೂ ತಮ್ಮ ಅಭಿರುಚಿಗೆ ತಕ್ಕಂತೆ ಕನಸಿನ ಮನೆಯನ್ನ ಗಾಜನೂರಿನ ಫಾರ್ಮ್ ಹೌಸ್ ನಲ್ಲಿ ಕಟ್ಟುತ್ತಾರೆ ಡಾ.ರಾಜ್ ಕುಮಾರ್. ಇದೇ ನೋಡಿ ಡಾ.ರಾಜ್ ಕಟ್ಟಿಸಿದ ಗಾಜನೂರಿನ ಮನೆ..

ಸುಂದರ ಪರಿಸರ ಮಧ್ಯೆ ಇರುವ ಈ ಮನೆ, ಈ ಸ್ಥಳ ಅಂದರೆ ಅಣ್ಣಾವ್ರಿಗೆ ತುಂಬಾ ಪ್ರೀತಿ. ಸಮಯ ಸಿಕ್ಕಾಗಲೆಲ್ಲಾ ಇಲ್ಲಿಗೆ ಬಂದು ಸಾಮಾನ್ಯ ವ್ಯಕ್ತಿಯಂತೆ ಜಮೀನಿನಲ್ಲಿ‌ ಹೋಡಾಡಿಕೊಂಡು ಎಲ್ಲರೊಂದಿಗೆ ಬೆರೆತು  ಒಂದಷ್ಟು ದಿನ ಇಲ್ಲೇ ಇದ್ದು ಹೋಗುತ್ತಿದ್ದರು.. ಮುಂದೆ ಹೆಚ್ಚು ದಿನಗಳ ಕಾಲ ಇಲ್ಲೇ ಇರಲು ಬಯಸಿದ್ರೂ ಆದರೆ ಅವರ ಆಸೆಗೆ ಕಲ್ಲು ಹಾಕಿದವನು ಕಾಡುಗಳ್ಳ ವೀರಪ್ಪನ್.  ಅಣ್ಣಾವ್ರು ಇದೇ ಮನೆಯಲ್ಲಿ ಇದ್ದಾಗ ಬಂದು ಅ’ಪಹರಿ’ಸಿದ.. ಡಾ.ರಾಜ್ ಹುಟ್ಟಿದ ಈ ಮನೆಯನ್ನ ಜೋಪಾನವಾಗಿ ಕಾಪಾಡಿಕೊಂಡು ಬಂದಿದ್ದಾರೆ. ಪುನಿತ್ ರಾಜಕುಮಾರ್ ಇತ್ತೀಚಿಗೆ ಗಾಜ‌ನೂರಿಗೆ ಬೇಟಿಕೊಟ್ಟು ತಂದೆಯ ಜೊತೆಗಿನ ಹಳೆಯ ನೆನಪುಗಳನ್ನ ಮೆಲುಕು ಹಾಕಿಕೊಂಡರು.