Advertisements

ವಿಶ್ವ ವಿದ್ಯಾಲಯದ ಕುಲಪತಿಗಳೇ ವಿಧ್ಯಾರ್ಥಿಗಳ ಶೂ ಪಾಲಿಶ್ ಮಾಡಿದ ರಿಯಲ್ ಸ್ಟೋರಿ !

Inspire

ಆ ವಿಶ್ವ ವಿದ್ಯಾಲಯದ ಕುಲಪತಿಗಳು ತುಂಬಾ ಕಟ್ಟುನಿಟ್ಟು. ಶಿಸ್ತು ಮತ್ತು ಶುಚಿಗೆ ತುಂಬಾ ಪ್ರಾಮುಖ್ಯತೆ ಕೊಡುತ್ತಿದ್ದರು. ವಿದ್ಯಾರ್ಥಿಗಳು ದಿನವೂ ಶುಚಿಯಾದ ಬಟ್ಟೆ ಧರಿಸಿ ಕಾಲೇಜಿಗೆ ಬರಬೇಕು ಮತ್ತು ಕಾಲಿಗೆ ಹಾಕಿದ ಶೂ ಗಳನ್ನು ಚೆನ್ನಾಗಿ ಪಾಲಿಶ್ ಮಾಡಿರಬೇಕು ಎಂದು ಹೇಳುತ್ತಿದ್ದರು. ಕೆಲವರು ಈ ಶಿಸ್ತನ್ನು ಪಾಲಿಸಿದರೆ ಇನ್ನೂ ಕೆಲವರು ಕುಲಪತಿಗಳ ಮಾತನ್ನು ಲೆಕ್ಕಿಸದೇ ಪಾಲಿಶ್ ಆಗಿಲ್ಲದ ಶೂ ಗಳನ್ನ ಧರಿಸಿ ಕಾಲೇಜಿಗೆ ಬರುತ್ತಿದ್ದರು. ಅವರು ಸ್ವಚತೆಯನ್ನು ಕೂಡ ಪಾಲಿಸುತ್ತಿರಲಿಲ್ಲ. ಇದರಿಂದ ಬೇಸರಗೊಂಡ ಕುಲಪತಿಗಳು ವಿದ್ಯಾರ್ಥಿಗಳಿಗೆ ತಕ್ಕ ಪಾಠ ಕಲಿಸಬೇಕೆಂದು ತೀರ್ಮಾನಿಸಿದರು.

Advertisements

ಅದಕ್ಕಾಗಿ ಅವರು ವಿಧ್ಯಾರ್ಥಿಗಳಿಗೆ ಯಾವುದೇ ಶಿಕ್ಷೆ ವಿಧಿಸಲಿಲ್ಲ. ಬದಲಿಗೆ ಶೂ ಪಾಲಿಶ್ ಮಾಡುವವರ ವೇಷದಲ್ಲಿ ಕಾಲೇಜಿನ ಪ್ರವೇಶದ್ವಾರದಲ್ಲಿ ಕುಳಿತು ಸ್ವತಃ ಅವರೇ ವಿಧ್ಯಾರ್ಥಿಗಳ ಬೂಟುಗಳಿಗೆ ಪಾಲಿಶ್ ಮಾಡಿದರು. ಕಾಲೇಜು ಗೇಟಿನ ಬಳಿ ಕುಳಿತಿರುವುದು ತಮ್ಮ ಕುಲಪತಿಗಳು ಎಂದು ತಿಳಿದಾಗ ವಿಧ್ಯಾರ್ಥಿಗಳಿಗೆ ತಮ್ಮ ಅಶಿಸ್ತಿನ ಬಗ್ಗೆ ತಮಗೇ ನಾಜಿಕೆಯಾಯಿತು. ಆ ದಿನದಿಂದ ವಿಧ್ಯಾರ್ಥಿಗಳು ಶುಚಿಯಾದ ಬಟ್ಟೆ, ಪಾಲಿಶ್ ಮಾಡಿದ ಶೂ ಧರಿಸಿ ಶಿಸ್ತಿನಿಂದ ಕಾಲೇಜಿಗೆ ಬರಲು ಪ್ರಾರಂಭಿಸಿದರು.

ಅಂದಹಾಗೆ ವಿದ್ಯಾರ್ಥಿಗಳಿಗೆ ಶಿಕ್ಷೆ ಕೊಡದೆ ವಿನಮ್ರತೆಯಿಂದಲೇ ಪಾಠ ಕಲಿಸಿದ ಆ ಕುಲಪತಿಗಳು ಬೇರೆಯಾರೂ ಅಲ್ಲ. ನಮ್ಮ ಭಾರತ ದೇಶದ ಮಾಜಿ ರಾಷ್ಟ್ರಪತಿಗಳಾದ ಡಾ. ಜಾಕಿರ್ ಹುಸೇನ್. ಅವರು ದೆಹಲಿಯ ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದ ಕುಲಪತಿಗಳಾದ್ದಾಗ ನಡೆದ ಘಟನೆಯಿದು. ಜಾಕಿರ್ ಹುಸೇನ್ ರವರು ಭಾರತೀಯ ಶಿಕ್ಷಣದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಬಿಹಾರದ ರಾಜ್ಯಪಾಲರಾಗಿ, ಭಾರತದ ಉಪರಾಷ್ಟ್ರಪತಿಗಳಾಗಿ, ರಾಷ್ಟ್ರ ಪತಿಗಳಾಗಿ ದೇಶಕ್ಕೆ ಸೇವೆ ಸಲ್ಲಿಸಿದ್ದಾರೆ. ದೆಹಲಿಯ ಜಾಮಿಯಾ ಮಿಲಿಯಸ್ ವಿಶ್ವವಿದ್ಯಾಲಯದ ಸ್ಥಾಪಕರು ಕೂಡ ಇವರೇ. ಇವರ ಸರಳ ಸಜ್ಜನಿಕೆಯ ಶಿಸ್ತು ಶುಚಿತ್ವ ಕ್ಕೆ ಮಹತ್ವ ನೀಡುವ ವ್ಯಕ್ತಿತ್ವದಿಂದ ಜನ ಮಾನಸದಲ್ಲಿ ಅವರು ಇಂದಿಗೂ ಚಿರವಾಗಿದ್ದಾರೆ.