Advertisements

ಡ್ರೀಮ್ ಗರ್ಲ್ ಹೇಮಾಮಾಲಿನಿಯ ಪ್ರೀತಿ ನಿವೇದನೆಯನ್ನ ತಿರಸ್ಕರಿಸಿದ್ದ ಕನ್ನಡದ ಖ್ಯಾತ ನಟ !

Cinema

ಬಾಲಿವುಡ್ ಚಿತ್ರರಂಗದ ಕನಸಿನ ರಾಣಿಯೆಂದೆ ಖ್ಯಾತರಾದವರು ನಟಿ ಹೇಮಾಮಾಲಿನಿ. ಈ ಸ್ಪುರಧ್ರೂಪಿ ನಟಿಯ ಪ್ರೀತಿಯನ್ನ ಗಳಿಸುವುದ್ಕೋಸ್ಕರ ದೊಡ್ಡ ದೊಡ್ಡ ಖ್ಯಾತ ನಟರೇ ಪ್ರಯತ್ನ ಪಟ್ಟಿದ್ದರು. ಆದರೆ ನಟಿ ಹೇಮಮಾಲಿನಿ ಮತ್ತು ಅವರ ಕುಟುಂಬ ಮಾತ್ರ ಕನ್ನಡದ ಖ್ಯಾತ ನಟರೊಬ್ಬರ ಬಗ್ಗೆ ಒಲವು ತೋರಿದ್ದು ಹೇಮಾಮಾಲಿನಿಯನ್ನ ಮದುವೆಯಾಗು ಎಂದು ಕೇಳಿದ್ದರು. ಆದರೆ ಆ ನಟ ಈ ಸಂಬಂಧಕ್ಕೆ ಒಪ್ಪದೇ ಹಿಂದೂ ಮುಂದೆ ನೋಡದೆ ಬೇಡ ಎಂದು ತಿರಸ್ಕರಿಸಿದ್ದರು. ಹಾಗಾದ್ರೆ ಚಂದನವನದ ಆ ಖ್ಯಾತ ನಟ ಯಾರೆಂದು ನೋಡೋಣ ಬನ್ನಿ..

Advertisements

ಕನ್ನಡ ಸಾಹಿತ್ಯ ಲೋಕಕ್ಕೆ ತಮ್ಮದೇ ಆದ ಅಪಾರ ಕೊಡುಗೆಯನ್ನ ಕೊಟ್ಟ ಧೀಮಂತ ಸಾಹಿತಿ ಇವರು. ಅವರೇ ನಟ, ನಿರ್ದೇಶಕ ಗಿರೀಶ್ ಕಾರ್ನಾಡ್ . ಅವರ ಆಲೋಚನೆಗಳು ಏನೇ ಇದ್ದರೂ, ಅದನ್ನೆಲ್ಲಾ ಪಕ್ಕಕ್ಕೆ ಸರಿಸಿ ನೋಡುವುದಾದರೆ ಅವರು ಕನ್ನಡ ಸಾಹಿತ್ಯ ಕಂಡ ಅದ್ಭುತ ಸಾಹಿತಿ. ಬಾಲಿವುಡ್ ಚಿತ್ರರಂಗದಲ್ಲಿ ಡ್ರೀಮ್ ಗರ್ಲ್ ಎಂದು ಖ್ಯಾತರಾಗಿದ್ದ ನಟಿ ಹೇಮಾಮಾಲಿನಿಯನ್ನ ಮದುವೆಯಾಗುವುದನ್ನ ತಿರಸ್ಕರಿಸಿದವರು. ಆದರೆ ಇದೆಲ್ಲಾ ಆಗಿದ್ದೆಗೆ ಎಂದು ಮುಂದೆ ತಿಳಿಯೋಣ..ಅದು ಹಿಂದಿ ಚಿತ್ರರಂಗದಲ್ಲಿ ನಟಿ ಹೇಮಮಾಲಿನಿ ತಮ್ಮ ಅದ್ಭುತ ನಟನೆಯಿಂದ ಟಾಪ್ ಹೀರೋಯಿನ್ ಆಗಿ ಮಿಂಚುತ್ತಿದ್ದ ಕಾಲಘಟ್ಟ ಅದು.

ಅದೇ ವೇಳೆ ನಟ, ಸಾಹಿತಿ ಗಿರೀಶ್ ಕಾರ್ನಾಡ್ ಅವರು ಪುಣೆ ಫಿಲಂ ಇನ್ಸ್ಟಿಟ್ಯೂಟ್ ನಲ್ಲಿ ವಿದ್ಯಾರ್ಥಿಯಾಗಿದ್ದರು. ಇನ್ನು ಇವರನ್ನ ಬಹಳ ಸಮೀಪದಿಂದ ನೋಡಿದ್ದ ಹೇಮಾಮಾಲಿನಿಯವರ ತಾಯಿ ಜಯ ಚಕ್ರವರ್ತಿ ಅವರು ಗಿರೀಶ್ ಕಾರ್ನಾಡ್ ಅವರ ಬಗ್ಗೆ ತುಂಬಾ ಅಭಿಮಾನ ಹೊಂದಿದ್ದರು. ಗಿರೀಶ್ ಕಾರ್ನಾಡ್ ಅವರನ್ನ ತಮ್ಮ ಅಳಿಯನನ್ನಾಗಿ ಮಾಡಿಕೊಳ್ಳಬೇಕೆಂಬುದು ಅವರ ಆಶಯವಾಗಿತ್ತು. ಇದೇ ಕಾರಣದಿಂದಲೋ ಏನೋ ಜಯ ಅವರು ನಿರ್ಮಾಣ ಮಾಡುತ್ತಿದ್ದ ಚಿತ್ರವೊಂದರಲ್ಲಿ ಮುಖ್ಯವಾದ ಪಾತ್ರ ಮಾಡುವಂತೆ ಕಾರ್ನಾಡ್ ರನ್ನ ಒತ್ತಾಯ ಮಾಡುತ್ತಾರೆ. ಮತ್ತೊಂದು ಕಡೆ ಹೇಮಾಮಾಲನಿಯವರಲ್ಲೂ ಕೂಡ ಕಾರ್ನಾಡ್ ಅವರ ಮೇಲೆ ಪ್ರೀತಿ ಚಿಗುರಿತ್ತು.

ರತ್ನದೀಪ್ ಎಂಬ ಚಿತ್ರವೊಂದರ ಚಿತ್ರೀಕರಣ ನಡೆಯುತ್ತಿದ್ದ ಸಮಯ. ಈ ಚಿತ್ರದಲ್ಲಿ ಕಾರ್ನಾಡ್ ಮಾತು ಹೇಮಮಾಲಿನಿ ಜೋಡಿಯಾಗಿ ನಟಿಸಿದ್ದರು. ಇನ್ನು ಇದೆ ವೇಳೆ ಕಾರ್ನಾಡ್ ಅವರ ಬಳಿ ಮಾತನಾಡಿದ ಹೇಮಮಾಲಿನಿ ನಾವಿಬ್ಬರೂ ಮದುವೆಯಾಗುತ್ತಿದ್ದೇವೆ ಎಂಬ ಸುದ್ದಿ ನ್ಯೂಸ್ ಪೇಪರ್ ಗಳಲ್ಲಿ ಬರುತ್ತಿದೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯ ಏನೆಂದು ನೇರವಾಗಿ ಕೇಳುತ್ತಾರೆ. ಇದಕ್ಕೆ ಉತ್ತರಿಸಿದ ಗಿರೀಶ್ ಕಾರ್ನಾಡ್ ಅವರು ಪತ್ರಿಕೆಗಳಲ್ಲಿ ಏನೇ ಬರಲು ಅದು ನನಗೆ ಮುಖ್ಯವಲ್ಲ. ಆದರೆ ನಾನು ಮದುವೆಯಾಗುತ್ತಿರುವ ಹುಡುಗಿಯ ಹೆಸರು ಸರಸ್ವತಿ ಎಂದು. ಅವರು ಅಮೆರಿಕಾದಲ್ಲಿದ್ದಾರೆ ಎಂದು ಹೇಮಾಮಾಲಿನಿಯವರ ಪ್ರೀತಿ ನಿವೇದನೆ ಮತ್ತು ಮದುವೆ ಪ್ರಪೋಸಲ್ ತಿರಸ್ಕಾರ ಮಾಡುತ್ತಾರೆ.

ಇನ್ನು ಈ ಸರಸ್ವತಿ ಎಂಬುವವರನ್ನ ಇಂಗ್ಲೆಂಡ್ ನ ಪಾರ್ಟಿಯೊಂದರಲ್ಲಿ ಭೇಟಿ ಮಾಡಿದ್ದ ಗಿರೀಶ್ ಕಾರ್ನಾಡ್ ಅವರು ಅವರನ್ನೇ ಪ್ರೀತಿಸಿ ಕೆಲ ವರ್ಷಗಳ ಬಳಿಕ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ಈಗ ಕಾರ್ನಾಡ್ ಅವರು ಜೀವಂತವಾಗಿ ಇಲ್ಲದಿದ್ದರೂ ಅವರ ಸಾಹಿತ್ಯಗಳ ಮೂಲಕ ಅಜರಾಮರವಾಗಿದ್ದಾರೆ. ಸ್ನೇಹಿತರೇ, ಗಿರೀಶ್ ಕಾರ್ನಾಡ್ ಅವರು ನಟಿಸಿದ್ದ ಯಾವ ಕನ್ನಡ ಸಿನಿಮಾ ನಿಮಗೆ ಇಷ್ಟ ಎಂಬುದರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..