Advertisements

ಕೊನೆಗೂ ಪೋಲಿಸರ ವಶವಾದ ಡ್ರೋಣ್ ಪ್ರತಾಪ್. ಒಂದಲ್ಲ ಎರಡು ಪ್ರಕರಣ.

News

ಕ್ವಾರಂಟೈನ್ ನಿಯಮ ಉಲ್ಲಂಘನೆ ಮೀರಿ ಮನೆಯಿಂದ ಹೊರಗಡೆ ಬಂದ ಡ್ರೋನ್ ಪ್ರತಾಪ್ ಅವರನ್ನು ಪೋಲಿಸರು ವಶಕ್ಕೆ ಪಡೆದಿಕೊಂಡಿದ್ದಾರೆ. ಪ್ರತಾಪ್ ಮೈಸೂರಿನಲ್ಲಿ ಇದ್ದಾನೆ ಎಂಬ ಮಾಹಿತಿ ಸಿಕ್ಕ ನಂತರ ಬೆಂಗಳೂರಿನ ತಲಘಟ್ಟಪುರದ ಪೋಲಿಸರು ಇತನನ್ನು ವಶಕ್ಕೆ ಪಡೆದಿದ್ದಾರೆ.

Advertisements

ಪ್ರತಾಪ್ ಅವರು ಹೊರ ಜಿಲ್ಲೆಗಳಿಗೆ ಬೇಟಿ ನೀಡಿದ್ದರು. ತದನಂತರ ಕೆಲವು ದಿನಗಳ ಹಿಂದೆಯಷ್ಟೇ ಬೆಂಗಳೂರಿಗೆ ಆಗಮಿಸಿದ್ದರು. ಅಪಾರ್ಟ್‌ಮೆಂಟ್ ಒಂದರಲ್ಲಿ ವಾಸವಿದ್ದ ಪ್ರತಾಪ್ ಬಿಬಿಎಂಪಿ ಅಧಿಕಾರಿಗಳ ಸೂಚನೆಯಂತೆ ಕ್ವಾರಂಟೈನ್ ಆಗಿದ್ದರು‌.

ಪ್ರತಾಪ್ ಅವರಿಗೆ ಕೈಗೆ ಸೀಲ್ ಸಹ ಹಾಕಿದ್ದರು ಆದರೆ ಪ್ರತಾಪ್ ಅವರು ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಬಾಗಿಯಾಗಿದ್ದರು. ನಂತರ ಪ್ರತಾಪ್ ಅವರು ಪೋನ್ ಸುಚ್ ಆಪ್ ಮಾಡಿಕೊಂಡು ಕೈಸಿಗದೆ ತಲೆ ಮರೆಸಿಕೊಂಡಿದ್ದರು. ಈ ಬಗ್ಗೆ ಪೋಲಿಸರು ಪ್ರಕರಣವನ್ನು ದಾಖಲಿಸಿಕೊಂಡು ಪ್ರತಾಪ್ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ

ಪ್ರತಾಪ್ ಅವರು ಎರಡು ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ‌. ಮೊದಲನೆಯದು ಕ್ವಾರಂಟೈನ್ ನಿಯಮಗಳನ್ನು ಉಲ್ಲಂಘನೆ ಮಾಡಿರುವುದು‌. ಎರಡನೆಯದು ಪೋನ್ ಸ್ವಿಚ್ ಆಪ್ ಮಾಡಿ ತಲೆಮರೆಸಿಕೊಂಡಿರುವುದು. ಇದೂ ಕೂಡ ಕ್ವಾರಂಟೈನ್ ನಿಯಮ ಉಲ್ಲಂಘನೆಗೆ ಕಾರಣವಾಗಿದ್ದು ಪ್ರತಾಪ್ ಅವರನ್ನು ವಶಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.