Advertisements

ಡ್ರೋಣ್ ಪ್ರತಾಪ್ ಮೇಲೆ ಎಪ್ ಐ ಆರ್, ಪ್ರತಾಪ್ ಗಾಗಿ ಹುಡುಕಾಟ, ಸಿಕ್ಕಿದ್ದೆಲ್ಲಿ‌.

News

ಡ್ರೋಣ್ ಪ್ರತಾಪ್ ಅವರ ವಿರುದ್ದ ಕೇಸ್ ದಾಖಲಾಗಿದೆ ಹೌದು ಕ್ವಾರಂಟೀನ್ ನಿಯಮವನ್ನು ಉಲ್ಲಂಘಿಸಿರುವ ಕಾರಣ ತಲಘಟ್ಟಪುರ ಪೋಲಿಸ್ ಟಾಣೆಯಲ್ಲಿ ಕೇಸ್ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಪೋಲಿಸರು ಮತ್ತು ಬಿಬಿಎಂಪಿ ಹೋಂ ಕ್ವಾರಂಟಿನ್ ಸಿಟಿಜನ್ ವತಿಯಿಂದ ಪ್ರತಾಪ್ ಅವರನ್ನ ಹುಡುಕಾಟ ಮಾಡಲಾಗಿತ್ತು.

Advertisements

ಡ್ರೋಣ್ ಪ್ರತಾಪ್ ಡ್ರೋಣ್ ತಯಾರಿಸಿರುವ ಹಾಗೂ ಪ್ರಶಸ್ತಿಗಳನ್ನು ಪಡೆದಿರುವ ಸುಳ್ಳಿನ ಹೇಳಿಕೆಯ ಆರೋಪದಡಿ ಇತ್ತೀಚಿಗೆ ಬಾರಿ ಸುದ್ದಿಯಲ್ಲಿ ಇದ್ದಾರೆ. ಪ್ರತಾಪ್ ನಗರದ ತಲಘಟ್ಟಪುರದ ಅಪಾರ್ಟ್​​ಮೆಂಟ್​​ ಒಂದರಲ್ಲಿ ಹುಳಿದುಕೊಂಡಿದ್ದರು. ಜುಲೈ 15 ರಂದು ಹೈದರಾಬಾದ್ ನಿಂದ ಬೆಂಗಳೂರಿಗೆ ಬಂದಿದ್ದರು. ಈ ಹಿನ್ನೆಲೆ ಪ್ರತಾಪ್ ಅವರನ್ನ 14 ದಿನಗಳ ಕಾಲ ಹೋಂ ಕ್ವಾರಂಟಿನ್ ಮಾಡಿತ್ತು.

ಅದರೆ ಕ್ವಾರಂಟೀನ್ ಆದ ಮರುದಿನವೇ ಖಾಸಗಿ ಸಂದರ್ಶನಕ್ಕೆ ಪ್ರತಾಪ್ ಅವರು ಆಗಮಿಸಿದ್ದರು. ಈಗ ಪ್ರತಾಪ್ ಅವರು ಕ್ವಾರಂಟಿನ್ ನಿಯಮ ಉಲ್ಲಂಘನೆ ಮಾಡಿರುವ ಕಾರಣ ಬಿಬಿಎಂಪಿ ಅಧಿಕಾರಿಗಳು ಪೋಲಿಸ್ ಸ್ಟೇಷನ್ ನಲ್ಲಿ ದೂರನ್ನು ದಾಖಲಿಸಿದ್ದಾರೆ. ಪೋಲಿಸರು ಎಪ್ ಐ ಆರ್ ದಾಖಲಿಸಿಕೊಂಡಿದ್ದು ಬಿಬಿಎಂಪಿ ಅವರ ಜೊತೆ ಪ್ರತಾಪ್ ಅವರನ್ನ ಹುಡುಕುವ ಕಾರ್ಯಚರಣೆ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಕ್ವಾರಂಟೀನ್ ಇರುವಂತೆ ಅಧಿಕಾರಿಗಳು ಪ್ರತಾಪ್​ಗೆ ಸೂಚನೆ ನೀಡಿದ್ದಾರೆ. ಅಲ್ಲದೇ ಆತನನ್ನು ಮೈಸೂರಿನಿಂದ ಕರೆ ತಂದು ಸಾಂಸ್ಥಿಕ ಕ್ವಾರಂಟೀನ್​ ಮಾಡಲು ಬಿಬಿಎಂಪಿ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಇನ್ನು ಕ್ವಾರಂಟೀನ್​ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಪ್ರತಾಪ್​ ವಿರುದ್ಧ ತಲಘಟ್ಟಪುರ ಪೊಲೀಸ್​​ ಠಾಣೆಯಲ್ಲಿ ದೂರು ದಾಖಲಾಗಿದೆ.

ಬೆಂಗಳೂರಿನಲ್ಲೇ ಕ್ವಾರಂಟೀನ್ ಇರುವಂತೆ ಬಿಬಿಎಂಪಿ ಅಧಿಕಾರಿಗಳು ಪ್ರತಾಪ್ ಅವರಿಗೆ ತಿಳಿಸಿದ್ದಾರೆ‌. ಅಲ್ಲದೇ ಮೈಸೂರಿನಿಂದ ಕರೆತಂದು ಕ್ವಾರಂಟಿನ್ ಮಾಡಲು ಆಧಿಕಾರಿಗಳು ಸಿದ್ಧತೆ ನಡೆಸಿದ್ಧಾರೆ.