ಡ್ರೋನ್ ಪ್ರತಾಪ್ ಅವರು ನಾನು ಡ್ರೋನ್ ತಯಾರಿಸದ್ದೇನೆ, ಅನೇಕ ದೇಶಗಳಿಗೆ ತೆರಳಿದ್ದೇನೆ ಹಾಗೂ ಪ್ರಶಸ್ತಿಗಳನ್ನು ಪಡೆದಿದ್ದೇನೆ ಎಂದು ಹೇಳಿಕೊಂಡಿದ್ದನು. ಇಡೀ ಕರ್ನಾಟಕವೇ ಮಾತ್ರ ಅಲ್ಲ ದೇಶ ನಂಬಿತ್ತು ಆದರೆ ಎಲ್ಲರ ನಂಬಿಕೆಗೆ ಮಸಿ ಬಳಿದಿದ್ದಾನೆ. ಡ್ರೋನ್ ಪ್ರತಾಪ್ ಡ್ರೋನ್ ಹಾರಿಸಿಲ್ಲ ಕಾಗೆ ಹಾರಿಸದ್ದಾನೆ ಎಂದು ಜನರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ಆದರೆ ಇದೀಗ ಮತ್ತೋಂದು ವಿಷಯದಲ್ಲಿ ಪ್ರತಾಪ್ ಟೀಕೆಗೆ ಗುರಿಯಾಗಿದ್ದಾರೆ.

ಇನ್ನೂ ಇದೆಲ್ಲದರ ನಡುವೆ ಕ್ವಾರಂಟೈನ್ ಉಲ್ಲಂಘನೆ ಮಾಡಿ ನ್ಯೂಸ್ ಚಾನಲ್ ಗೆ ತೆರಳಿ ಸಂದರ್ಶನದಲ್ಲಿ ಬಾಗಿಯಾಗಿದ್ದರು. ನಂತರ ಇವರ ವಿರುದ್ಧ ದೂರು ದಾಖಲಾಗಿ ಮೈಸೂರಿನ ಪೋಲಿಸ್ ಪ್ರತಾಪ್ ಅವರನ್ನು ವಶಕ್ಕೆ ಪಡೆದಿದ್ದಾರೆ ಎಂಬು ಸುದ್ದಿ ಹರಿದಾಡಿತ್ತು. ಇದರ ಬೆನ್ನಲ್ಲೇ ಟ್ಟೀಟರ್ ನಲ್ಲಿ ಕಾಣಿಸಿಕೊಂಡಿರುವ ಪ್ರತಾಪ್ ಅವರು. ನೆಟ್ಟಿಗರ ಪ್ರಶ್ನೆಗಳಿಗೆ ಉತ್ತರವನ್ನು ನೀಡುವ ಮೂಲಕ ಸಾರ್ವಜನಿಕರನ್ನು ಸಂಪರ್ಕದಲ್ಲಿಟ್ಟುಕೊಳ್ಳುವ ಪ್ರಯತ್ನ ಮಾಡುತಿದ್ದಾರೆ.

ಇಂದು ಆನೇಕ ಟ್ವೀಟಿಗರ ಪ್ರಶ್ನೆಗಳಿಗೆ ಉತ್ತರವನ್ನು ನೀಡಿ ಮತ್ತೆ ಟೀಕೆಗಳಿಗೆ ಒಳಗಾಗಿದ್ದಾರೆ ಹೌದು. ಟ್ಟೀಟರ್ ನಲ್ಲಿ ಒಬ್ಬರು ಪ್ರತಾಪ್ ಅವರಿಗೆ ನೀವು ಬಿಜೆಪಿಗೆ ಸೇರಿಬಿಡಿ, ನಿಮ್ಮ ಪಾಪಗಳೆಲ್ಲ ನಾಶವಗಾತ್ತದೆ ಎಂದಿದ್ದರೆ, ಇದಕ್ಕೆ ರಿಪ್ಲೇ ಮಾಡಿರುವ ಪ್ರತಾಪ್ ಸಾಧ್ಯನೇ ಇಲ್ಲ ನಾನು ರಾಹುಲ್ ಗಾಂದಿ ಅಭಿಮಾನಿ ಎಂದು ಉತ್ತರಿಸುವ ಮೂಲಕ ಮೋದಿ ಅಭಿಮಾನಿಗಳ ಕಣ್ಣಿಗೆ ಗುರಿಯಾಗಿದ್ದಾರೆ.

ಮತ್ತೊಬ್ಬರು ಡ್ರೋನ್ ಗೆ ಸಂಬಂಧಿಸಿದ ಲಿಫ್ಟ್ ಆ್ಯಂಡ್ ಡ್ರ್ಯಾಗ್ ಎಂದರೇನು ಎಂಬ ಪ್ರಶ್ನೆಯನ್ನು ಕೇಳಿ ಪ್ರತಾಪ್ ಅವರನ್ನು ಕಾಲೆಳೆದಿದ್ದಾರೆ. ಇದಕ್ಕೆ ಪ್ರತ್ಯುತ್ತರ ನೀಡಿದ ಪ್ರತಾಪ್ ನಿಮಗೆ ಗೊತ್ತಿದ್ದರೇ ನಿವೇ ಯಾಕೆ ಹೇಳಬಾರದು ಎಂದು ಪ್ರತಿಕ್ರಿಯಿಸಿದ್ದು. ಆಕ್ರೋಶಕ್ಕೆ ಗುರಿಯಾಗಿದ್ದಾರೆ.