Advertisements

ಡ್ರೋನ್ ಪ್ರತಾಪ್ ಸಿನಿಮಾ ಮಾಡಲು ಮುಂದಾಗಿದ್ದ ನಿರ್ದೇಶಕ. ಹಣ ವಾಪಸ್ ಕೊಡಪ್ಪ ಎಂದು ಮನವಿ, ಪ್ರತಾಪ್ ಎಷ್ಟು ಲಕ್ಷ ಬೇಡಿಕೆ ಇಟ್ಟಿದ್ದ ಗೊತ್ತಾ.

News

ಈ ಹಿಂದೆ ಯುವ ವಿಜ್ಞಾನಿ ಡ್ರೋನ್ ಪ್ರತಾಪ್ ಅವರ ಸಾಧನೆಗಳನ್ನು ನೋಡಿ ಇನ್ನೂ ನಾಲ್ಕು ಜನರಿಗೆ ಸ್ಪೂರ್ತಿಯಾಗಲಿ ಎಂಬ ಆಸೆಯಿಂದ ಚಿತ್ರ ಮಾಡಲು ಚಿಂತನೆ ಮಾಡಿದ್ದೆ ಆದರೆ. ಇದೀಗ ಇತ್ತೀಚಿನ ದಿನಗಳಲ್ಲಿ ಡ್ರೋನ್ ಪ್ರತಾಪ್ ವಿಷಯಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಗೊಂದಲಗಳು ಉಂಟಾಗಿ. ಚಿತ್ರವನ್ನು ಮಾಡಲು ಕೈ ಬಿಟ್ಟಿದ್ದೇನೆ, ಪ್ರತಾಪ್ ನೀವು ತೆಗೆದುಕೊಂಡ ಹಣವನ್ನು ದಯವಿಟ್ಟು ನನಗೆ ಹಿಂದಿರುಗಿಸಿ ಎಂದು ನಿರ್ದೇಶಕ ರಾಜಶೇಖರ್ ಅವರು ತಿಳಿಸಿದ್ದಾರೆ.

Advertisements

ಈ ಹಿಂದೆ ರಾಜಶೇಖರ್ ಅವರು ಅಮೃತವಾಣಿ, ಬರ್ಫಿ, ಪೆರೋಲ್ ಚಿತ್ರಗಳನ್ನು ನಿರ್ದೇಶಿಸಿದ್ದರು. ಕೆಲವು ತಿಂಗಳುಗಳ ಹಿಂದೆ ಡ್ರೋನ್ ಪ್ರತಾಪ್ ಅವರ ಸಾಧನೆಗಳನ್ನು ನೋಡಿ ಈ ಯುವ ವಿಜ್ಞಾನಿಯ ಕುರಿತು ಚಿತ್ರ ಮಾಡಬೇಕೆಂದು ರಾಜಶೇಖರ್ ಅವರು ಮುಂದಾಗಿದ್ದರು‌. ಪ್ರತಾಪ್ ಅವರನ್ನು ಬೇಟಿ ಮಾಡಿಯೂ ಸಹ ಈ ವಿಷಯದ ಬಗ್ಗೆ ಮಾತನಾಡಿದ್ದರು. ಈಗ ಚಿತ್ರವನ್ನು ಮಾಡುವ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.

ಪ್ರತಾಪ್ ಅವರ ಕಥೆಯ ಚಿತ್ರವನ್ನು ಮಾಡುತ್ತಿರುವುದರಿಂದ ಹಣದ ವಿಚಾರದಲ್ಲಿ ಒಪ್ಪಂದವಾಗಿತ್ತು‌. ಹೌದು 2 ಲಕ್ಷ ಸಂಭಾವನೆ ಮತ್ತು ಚಿತ್ರದಲ್ಲಿ ಬಂದ ಲಾಭದಲ್ಲಿ 20 ಪರ್ಸೆಂಟ್ ಕೊಡಬೇಕೆಂದು ಮಾತನಾಡಿದ್ದರು. ಮುಂಚಿತವಾಗಿ ಒಂದು ಲಕ್ಷ ಹಣವನ್ನುರಾಜಶೇಖರ್ ಪ್ರತಾಪ್ ಅವರಿಗೆ ನೀಡಿದ್ದರು‌. ಆದರೆ ಆರು ತಿಂಗಳುಗಳ ಹಿಂದೆ, ಚಿತ್ರ ತಡವಾಗುತ್ತಿದೆ ಬೇರೊಬ್ಬರು ಚಿತ್ರ ಮಾಡುವುದಕ್ಕೆ ಮುಂದೆ ಬಂದಿದ್ದಾರೆ ಎಂದು ಡ್ರೋನ್ ಪ್ರತಾಪ್ ತಿಳಿಸಿದ್ದರು.

ನಾನು ಅವರ ಚಿತ್ರವನ್ನು ಮಾಡಲು ಸಾಕಷ್ಟು ತಯಾರಿ ಮಾಡಿಕೊಂಡಿದ್ದೆ. ನೋವಾದರೂ ಬಿಟ್ಟುಕೊಟ್ಟೇ. ಚಿತ್ರ ಮಾಡುವ ಯೋಚನೆಯನ್ನೇ ಬಿಟ್ಟಿದ್ದೇನೆ‌. ದಯವಿಟ್ಟು ನಮ್ಮ ಹಣವನ್ನು ಕೊಡಿ ಎಂದು ಪ್ರತಾಪ್ ಅವರಿಗೆ ಮನವಿಯನ್ನು ಮಾಡಿದ್ದೇನೆ ಎಂದು ಏನ್ನುತ್ತಾರೆ ನಿರ್ದೇಶಕ ರಾಜಶೇಖರ್ ಅವರು.