Advertisements

ತಮ್ಮ ಹೊಸ ಜೀವನದ ಬಗ್ಗೆ ಸಿಹಿ ಸುದ್ದಿ ತಿಳಿಸಿದ ವಿಜಯ್ ದಂಪತಿಗಳು.. ಖುಷಿಯಲ್ಲಿರುವ ವಿಜಯ್ ಕುಟುಂಬ!

Cinema

ನಮಸ್ಕಾರ ಸ್ನೇಹಿತರೆ ಕರಿ ಚಿರತೆ ದುನಿಯಾ ವಿಜಯ ಎಂದೆ ಕನ್ನಡ ಸಿನೆಮಾ ಇಂಡಸ್ಟ್ರೀಯಲ್ಲಿ ಹೆಸರುಗಳಿಸಿದ್ದ ವಿಜಯ ಹಳೆ ಪಾತ್ರೆ ಹಳೆ ತಗಡಾ ಸಾಂಗ್ ಹಾಗೂ ದುನಿಯಾ ಸಿನೆಮಾದ ನಂತರ ಖ್ಯಾತಿ ಪಡೆದ ನಟ. ಸದ್ಯ ಅವರೇ ಖುದ್ದಾಗಿ ನಿರ್ದೇಶನ ಮಾಡಿ ನಟಿಸಿದ್ದ ಸಲಗ ಸಿನೆಮಾದ ಭರ್ಜರಿ ಬಿಡುಗಡೆಯ ಮಧ್ಯದಲ್ಲಿ ತಮ್ಮ ಪತ್ನಿ ಕೀರ್ತಿ ವಿಜಯ ಅವರೊಂದಿಗೆ ಹೊಸ ಸಿಹಿ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ.

[widget id=”custom_html-3″]

ಹಾಗಾದರೆ ದುನಿಯಾ ವಿಜಯ್ ಹಂಚಿಕೊಂಡ ಆ ಸಿಹಿ ಸುದ್ದಿಯೇನು ಅಂತೀರಾ ಹಾಗಿದ್ದರೆ ನೋಡಿ.. ತಾನು ಒಂದು ಉತ್ತಮ ಸಿನೆಮಾ ನಿರ್ದೇಶನ‌ ಮಾಡಬೇಕೆಂದು ಕನಸ್ಸು ಕಂಡಿದ್ದ ದುನಿಯಾ ವಿಜಯ್ ಸಲಗದ ಸಿನೆಮಾದ ನಿರ್ದೇಶನದ‌ ಮೂಲಕ ನನಸ್ಸು ಮಾಡಿಕೊಂಡಿದ್ದಾರೆ. ನಾಲ್ಕೈದು ವರ್ಷದಿಂದ ಈ‌ ಸಿನೆಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು ಈಗ ಚಿತ್ರ ತೆರೆಕಂಡು ಉತ್ತಮ ಮಟ್ಟದ ಯಶಸ್ಸು ಸಂಪಾದಿಸಿಕೊಂಡಿದೆ.

[widget id=”custom_html-3″]

[widget id=”custom_html-3″]

Advertisements

[widget id=”custom_html-3″]

ಇವರ ಈ ಸಾಲು ಯಶಸ್ಸಿನ ಮಧ್ಯ ವಿಜಯ್ ತಮ್ಮ ತಂದೆ ತಾಯಿ ಇಬ್ಬರನ್ನು ಕಳೆದುಕೊಂಡು ನೋವಿನಲ್ಲಿದ್ದರು. ತಮ್ಮ ತಂದೆ ತಾಯಿಯ ‌ನೆನಪಿಗಾಗಿ ಅವರು ತಮ್ಮ ಜಮೀನಲ್ಲಿ ಗುಡಿಯೊಂದನ್ನು ನಿರ್ಮಾಣ ಮಾಡಿ ಪ್ರತಿಮೆಗಳನ್ನು ನಿರ್ಮಿಸಿ ಪೂಜಿಸುತ್ತಿದ್ದಾರೆ ದುನಿಯಾ ವಿಜಯ್.. ಮಾಧ್ಯಮ ಒಂದರಲ್ಲಿ ‌ಸಲಗ ಸಿನೆಮಾದ ಸಕ್ಸಸ್ ಕುರಿತಾಗಿ ಮಾತನಾಡಿದ ವಿಜಯ್ ಸಿನೆಮಾ ನೋಡಲು ನನ್ನ ತಾಯಿ ಇರಬೇಕಿತ್ತು. ಅವರು ನನ್ನೆಲ್ಲ ಕಷ್ಟಗಳನ್ನು ನೋಡಿದವರು. ನನ್ನ ಏಳಿಗೆ ನೋಡವ ಸಮಯದಲ್ಲಿ ನನ್ನ ಜೊತೆಗಿಲ್ಲದ್ದು ನಿಜಕ್ಕೂ ನೋವನ್ನುಂಟು ಮಾಡುತ್ತದೆ ಎಂದರು. ಇನ್ನು ಅವರ ಈ‌ ಜರ್ನಿಯಲ್ಲಿ ಪತ್ನಿ ಕೀರ್ತಿ ವಿಜಯ ತಮ್ಮ ಎಲ್ಲ‌ ಕೆಲಸದಲ್ಲಿ ಸಾಥ್ ನೀಡಿದ್ದಾರೆ ಎಂದು ತಿಳಿಸಿದರು.

[widget id=”custom_html-3″]

ಕೆಲ ವರ್ಷಗಳ ಹಿಂದೆ ವಿಜಯ್ ತಮ್ನ ಮೊದಲ‌ ಹೆಂಡತಿ ನಾಗರತ್ನ ಹಾಗೂ ಮಗಳು ನೀಡದ್ದ ದೂರಿನಿಂದಾಗಿ ವಿಜಯ್ ಹಾಗೂ ಅವರ ಪತ್ನಿ ಕೀರ್ತಿ ಪೋಲಿಸ್ ಠಾಣೆಯ ಮೆಟ್ಟೆಲ್ಲೆರುವಂತಾಗಿತ್ತು. ಅದಷ್ಟೆ ಅಲ್ಲದೆ ಇದು ಮಾಧ್ಯಮಗಳಲ್ಲಿ ಬಹುಮಟ್ಟದ ಸುದ್ದಿಯಾಗಿದ್ದು ನೋಡಿದ್ದೇವೆ. ಆದರ ಈಗ ಸಮಯ ಬದಲಗಿದೆ ಅದೆಲ್ಲದರಿಂದ ಹೊರಬಂದ ವಿಜಯ ಸಾಲು ಸಾಲಾಗಿ ಹಿಡಿದ ಕೆಲಸಗಳಲ್ಲಿ ಸಕ್ಸಸ್ ಕಂಡಿದ್ದಾರೆ. ಇದಷ್ಟೆ ಅಲ್ಲದೆ ಸಲಗ ಚಿತ್ರೀಕರಣದ ‌ಕುರಿತಾಗಿ ತಮ್ಮ ಅನುಭವಗಳನ್ನು ಕಲರ್ಸ್ ಕನ್ನಡದಲ್ಲಿ ಜೊತೆಯಾಗಿ ತಮ್ಮ ಅನುಭವ ಹಂಚಿಕೊಂಡಿರುವ ಜೊತೆಗೆ ವಿಜಯ ಹಾಗೂ ಪತ್ನಿ‌ ಕೀರ್ತಿ ಹೊಸ ವರ್ಷದ ಶುಭಾಶಯ ತಿಳಿಸುತ್ತಾ ಮತ್ತೊಂದು ಸಿಹಿ ಸುದ್ದಿಯನ್ನು ತರೆ ಮೇಲೆ ಹಂಚಿಕೊಂಡಿದ್ದಾರೆ..

[widget id=”custom_html-3″]

ಹೌದು ದುನಿಯಾ ವಿಜಯ್ ಈಗ ತೆಲುಗು ಚಿತ್ರರಂಗದತ್ತ ಮುಖ ಮಾಡಿದ್ದಾರೆ. ತೆಲುಗಿನ ಟಾಪ್ ಸಿನೆಮಾ ನಿರ್ಮಾಣ ಸಂಸ್ಥೆಯಾದ ಮೈತ್ರಿ ಮೂವಿ‌ ಮೇಕರ್ಸ ಸಂಸ್ಥೆ ನಿರ್ಮಾಣ ಮಾಡುತ್ತಿರುವ NBK 137 ಚಿತ್ರದಲ್ಲಿ ವಿಜಯ ಅಭಿನಯಿಸಲಿದ್ದಾರೆ. ಇನ್ನು ಈ ಚಿತ್ರಕ್ಕೆ ತಕ್ಕಂತೆ ಪಾತ್ರಕ್ಕೆ ಹೊಂದಿಕೊಳ್ಳುವಂತೆ ತಮ್ಮ ಲುಕ್ನ್ನು ಕೂಡ ಬದಲಾಯಿಸಿಕೊಂಡಿದ್ದಾರೆ. ಈ ಹಿನ್ನಲೆಯಲ್ಲಿ ಮೈತ್ರಿ ಮೂವಿ ಸಂಸ್ಥೆಗೆ ಧನ್ಯವಾದವನ್ನು ಕೂಡ ವಿಜಯ್ ತಿಳಿಸಿದ್ದಾರೆ. ಇನ್ನು ಈ‌ ಕುರಿತಾಗಿ ಪತ್ನಿ ಕೀರ್ತಿ ಕೂಡ ‌ಮೈತ್ರಿ ಮೂವಿಗೂ ಧನ್ಯವಾದ ತಿಳಿಸಿ ಪೋಸ್ಟ್ ಮಾಡಿದ್ದಾರೆ. ಒಟ್ಟಾರೆ ಈ ಹೊಸ ವರ್ಷ ದುನಿಯಾ ವಿಜಯ್ ಅವರ ಬಾಳಲ್ಲಿ ಯಶಸ್ಸು ಹೀಗೆ ಚಿಗುರೊಡೆಲೆಯಲ್ಲಿ‌ ಎಂಬುವುದು ಅಭಿಮಾನಿಗಳ‌ ಹಾರೈಕೆ..

[widget id=”custom_html-3″]