Advertisements

ಹೋಟೆಲ್ ನಲ್ಲಿ ಸಪ್ಲಯರ್ ಕೆಲಸ ಮಾಡುತ್ತಿದ್ದ ಹುಡುಗ ಸ್ಯಾಂಡಲ್ವುಡ್ ನಲ್ಲಿ ಸ್ಟಾರ್ ನಟನಾಗಿ ಬೆಳೆದದ್ದು ಹೇಗೆ ಗೊತ್ತಾ ?

Cinema

ನಮಸ್ತೇ ಸ್ನೇಹಿತರೇ, ಸಿನಿಮಾದಲ್ಲಿ ನಟಿಸುವ ಕನಸನ್ನ ಹೊತ್ತು ಹೋಟೆಲ್ ನಲ್ಲಿ ಕ್ಲೀನರ್, ಸಪ್ಲಯರ್ ಆಗಿ ಜೂನಿಯರ್ ಕಲಾವಿದನಾಗಿ, ಫೈಟರ್ ಮಾಸ್ಟರ್ ಗೆ ಅಸಿಸ್ಟೆಂಟ್ ಆಗಿ ಕೆಲಸ ಮಾಡಿದ ಆ ವ್ಯಕ್ತಿ ಇಂದು ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟನಾಗಿ ಬೆಳೆದಿದ್ದಾರೆ ಬ್ಲಾಕ್ ಕೋಬ್ರಾ ಖ್ಯಾತಿಯ ವಿಜಯ್. ನಾಯಕ ನಟನಾಗಿ ಅಭಿನಯಿಸಿದ ತಮ್ಮ ಮೊದಲ ಚಿತ್ರ ‘ದುನಿಯಾ’ದಿಂದ ಬೆಸ್ಟ್ ಆಕ್ಟರ್ ಅವಾರ್ಡ್ ಪಡೆದ ಕರಿಚಿರತೆ ಎಂದೇ ತಮ್ಮ ಅಭಿಮಾನಿಗಳಿಂದ ಕರೆಯಿಸಿಕೊಳ್ಳುವ ದುನಿಯಾ ವಿಜಯ್ ಬಣ್ಣದ ಲೋಕಕ್ಕೆ ಕಾಲಿಡುವ ಮುನ್ನ ತುಂಬಾ ಕಷ್ಟಗಳನ್ನಅನುಭವಿಸಿ ಇಂದು ಚಂದನವನದಲ್ಲಿ ಒಬ್ಬ ಸ್ಟಾರ್ ನಟನಾಗಿ ಗುರುತಿಸಿಕೊಂಡಿದ್ದಾರೆ. ಹಾಗಾದ್ರೆ ಅವರ ಕಷ್ಟದ ದಿನಗಳು ಹೇಗಿದ್ದವು ಎಂಬುದರ ಬಗ್ಗೆ ನೋಡೋಣ ಬನ್ನಿ..

ದುನಿಯಾ ವಿಜಯ್ ಅವರ ಮೂಲ ಹೆಸರು ವಿಜಯ್ ಕುಮಾರ್ ಎಂದು. ಅವರ ಮನೆಯಲ್ಲಿ ಇವರನ್ನ ಇಂದಿಗೂ ಕುಮಾರ್ ಅಂತಲೇ ಕರೆಯುತ್ತಾರೆ. ನಟ ವಿಜಯ್ ಹುಟ್ಟಿದ್ದು ೧೯೭೪ ಜನವರಿ ೨೦ರಂದು. ರುದ್ರಪ್ಪ ಮತ್ತು ನಾರಾಯಣಮ್ಮ ದಂಪತಿಗಳ ಮೂರನೆಯ ಪುತ್ರನೇ ಈ ದುನಿಯಾ ವಿಜಯ್ ಅವರು. ಇನ್ನು ತಂದೆ ರುದ್ರಪ್ಪ ತೀರಾ ಬಡಕುಟುಂಬದವರು. ಕೂಲಿ ಕೆಲಸ ಮಾಡಿಕೊಂಡು ಮಕ್ಕಳನ್ನ ಸಾಕುತ್ತಿದ್ದ ಅವರು ಮಕ್ಕಳನ್ನ ಓದಿಸುವ ಸಲುವಾಗಿ ಶಾಲೆಗೆ ಕಳುಹಿಸುತ್ತಾರೆ. ಆದರೆ ಓದಿನಲ್ಲಿ ಆಸಕ್ತಿ ಇಲ್ಲದ ದುನಿಯಾ ವಿಜಯ್ ಶಾಲೆಗೆ ಸರಿಯಾಗಿ ಹೋಗದ ಕಾರಣ ತನ್ನ ತಂದೆಯಿಂದ ಹೊ’ಡೆತ ತಿಂದಿರುತ್ತಾರೆ. ಹೀಗೆ ಹಲವು ಶಾಲೆಗಳನ್ನ ಬದಲಾಯಿಸಿದ ವಿಜಯ್ ಅಂತೂ ಇಂತೂ ಕೊನೆಗೆ ಪದವಿಯನ್ನ ಪಡೆದುಕೊಳ್ಳುತ್ತಾರೆ.

Advertisements

ಇನ್ನು ಚಿಕ್ಕಂದಿನಿಂದಲೇ ತಂದೆಯ ಜೊತೆ ಯೋಗ ಮಾಡುತ್ತಿದ್ದ ದುನಿಯಾ ವಿಜಯ್ ಗೆ ಆಗಿನಿಂದಲೇ ತಾನು ಬಾಡಿ ಬಿಲ್ಡ್ ಮಾಡಬೇಕೆಂಬ ಆಸಕ್ತಿ ಅವರಲ್ಲಿ ಚಿಗುರಿತ್ತು. ಚಿಕ್ಕಂದಿನಿಂದಲೇ ಸೂಪರ್ ಸ್ಟಾರ್ ನಟ ರಜನೀಕಾಂತ್ ಅವರನ್ನ ಅಭಿಮಾನಿಯಾಗಿ ಆರಾಧಿಸುತ್ತಿದ್ದ ದುನಿಯಾ ವಿಜಯ್ ಅವರನ್ನ ನೋಡಲೇಬೇಕೆಂಬ ಹಠ ತೊಟ್ಟು ಚೆನ್ನೈಗೆ ಹೋಗುತ್ತಾರೆ. ಆದರೆ ಅಲ್ಲಿಗೆ ಹೋದ ಮೇಲೆ ಹಣ ಇಲ್ಲದ ಕಾರಣ ರೆಸ್ಟೋರೆಂಟ್ ಒಂದರಲ್ಲಿ ಸಪ್ಲಯರ್ ಕೆಲಸ ಮಾಡಿ ಸ್ವಲ್ಪ ಹಣ ಸಿಕ್ಕ ಮೇಲೆ ರಜನಿಯವರನ್ನ ನೋಡಲು ಅವರ ಮನೆಯ ಬಳಿ ಹೋಗುತ್ತಾರೆ. ಆದರೆ ರಜನೀಕಾಂತ್ ಅವರ ಮನೆಯ ಸಿಬ್ಬಂದಿಗಳು ನೀನೊಬ್ಬ ಸಾಮಾನ್ಯ ಹುಡುಗ, ನಿನ್ನನ್ನ ಮನೆಯ ಒಳಗಡೆ ಬಿಡೋದಿಲ್ಲ ಹೋಗು ಎಂದು ಸಿಬ್ಬಂದಿಗಳು ಹೇಳಿದ ಬಳಿಕ ತುಂಬಾ ಬೇಜಾರಾದ ನಟ ವಿಜಯ್ ಅವರು ನಾನು ಕೂಡ ಸಿನಿಮಾ ರಂಗದಲ್ಲಿ ಸ್ಟಾರ್ ನಟನಾಗಿ ಬೆಳೆದು ಬಳಿಕವೇ ರಜನೀಕಾಂತ್ ಅವರನ್ನ ಭೇಟಿ ಮಾಡುವೆ ಎಂದು ನಿರ್ಧಾರ ಮಾಡಿ ಅಲ್ಲಿಂದ ಬೆಂಗಳೂರಿಗೆ ಹಿಂದಿರುಗುತ್ತಾರೆ. ಇದರ ಬಳಿಕ ದುನಿಯಾ ವಿಜಯ್ ಅವರ ಜೀವನದಲ್ಲಿ ಏನೆಲ್ಲಾ ಆಯ್ತು ? ಅವರು ಸ್ಯಾಂಡಲ್ವುಡ್ ನಲ್ಲಿ ಸ್ಟಾರ್ ಆಗಿ ಬೆಳೆದಿದ್ದು ಹೇಗೆ ಎಂಬುದರ ಬಗ್ಗೆ ತಿಳಿಯಲು ಈ ವಿಡಿಯೋ ನೋಡಿ..