Advertisements

ಇನ್ನೆನು ಇವನ ಜೀವನ ಮುಗಿತು ಅಷ್ಟೇ ಅಂದವರ ಮಧ್ಯೆ ಸಲಗ ಎದ್ದು ಬಂದಿದ್ದೆಗೇ ಗೊತ್ತಾ?

Cinema

ಕನ್ನಡ ಸಿನಿಮಾರಂಗದಲ್ಲಿ ಇದೀಗ ಕರಿಚಿರತೆ ಎಂದೇ ಪ್ರಖ್ಯಾತಿ ಪಡೆದ ನಟ ದುನಿಯಾ ವಿಜಯ್. ಇವರು ಬಿದ್ದು ಎದ್ದು ಸಾಧನೆ ಉತ್ತುಂಗದಲ್ಲಿದ್ದಾರೆ. ಇವರ ಏಳುಬೀಳಿನ ಜೀವನ ನೋಡಿದರೆ, ಇವರು ಮತ್ತೆಂದು ಸಿನಿಮಾ ಇಂಡಸ್ಟ್ರಿಗೆ ಮರಳಿ ಬರುವುದಿಲ್ಲವೇನೋ ಎಂಬ ಪ್ರಶ್ನೆಗಳು ಹುಟ್ಟಿದವು. ಇದೀಗ ವಿಜಯ ಎಲ್ಲರೂ ನೋಡುವಂತೆ ಮೇಲೆ ಎದ್ದಿದ್ದಾರೆ. ಹಾಗಾದರೆ ಅವರ ಸಾಧನೆಯ ದಾರಿ, ಜೀವನದ ಏಳು-ಬೀಳುಗಳು ಹೇಗಿದ್ದವು? ಎಂದು ಈ ಲೇಖನದ ಮೂಲಕ ತಿಳಿಸುತ್ತೇವೆ. ಇದನ್ನು ಪೂರ್ಣವಾಗಿ ಓದಿ. ಇವರ ಮೊದಲ ಹೆಸರು ಬಿಹಾರ್ ವಿಜಯ್ ಕುಮಾರ್. ಇವರು ಮೂಲತಹ ಬೆಂಗಳೂರಿನವರು. ಇಲ್ಲಿಯ ಆನೇಕಲ್ ತಾಲೂಕಿನ ಕುಂಬಾರ ಹಳ್ಳಿಯ ರುದ್ರಪ್-ಪ ನಾರಾಯಣಮ್ಮ ಮೂರನೇ ಮಗನಾಗಿ 1974ರ ಜನೆವರಿ 20ರಂದು ಜನಿಸಿದರು. ಇವರ ಮನೆಯವರು ಹಾಗೂ ಸ್ನೇಹಿತರು ಇವರನ್ನು ಪ್ರೀತಿಯಿಂದ ಕುಮಾರ್ ಎಂದು ಕರೆಯುತ್ತಿದ್ದರು ಇವರದು ಬಡತನದ ಕುಟುಂಬ. ಉಳಿದ ಮೂವರು ಹೆಣ್ಣುಮಕ್ಕಳು. ಇವರಿಗೆ ವಿಜಯ ಓರ್ವನೆ ಪುತ್ರ. ಇವರು ಅಮ್ಮನ ಮುದ್ದಿನ ಮಗನಾಗಿದ್ದರು.

Advertisements

ಕುಮಾರ್ಗೆ ಓದಿನಲ್ಲಿ ಆಸಕ್ತಿ ಇರಲಿಲ್ಲ ಗೆಳೆಯರೊಂದಿಗೆ ಗುಡ್ಡ ಬೆಟ್ಟಗಳನ್ನು ಸುತ್ತುತ್ತಿದ್ದರು. ಹೀಗಾಗಿ ವಿದ್ಯೆಯಿಂದ ಇವರು ದೂರ ಉಳಿದರು. ಇವರು ಬಾಲ್ಯದಿಂದಲೂ ಉಕ್ಕಿನ ದೇಹವನ್ನು ಹೊಂದಿದ್ದರು. ಹೌದು.. ದೇಹದ ಮನಸ್ಸನ್ನು ಗಟ್ಟಿ ಮುಟ್ಟಿ ಗಳಿಸಿಕೊಂಡು ವಿಜಯ್ ದೇಹದಾಡ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದರು ರಾಷ್ಟ್ರಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದರು. ರಾಷ್ಟ್ರ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಲು ವಿಜಯ್ ಹರಸಾಹಸ ಪಟ್ಟಿದ್ದರು. ತಮ್ಮ ಬಡತನದ ಸ್ಥಿತಿಯಲ್ಲಿಯೂ ವಿಜಯ್ ತುಂಬಾ ಕಷ್ಟ ಪಟ್ಟು ರಾಷ್ಟ್ರಮಟ್ಟದ ಸ್ಪರ್ಧೆ ಯಾಗಿದ್ದರು. ಆದರೆ ಇಲ್ಲಿ ದ್ವಿತೀಯ ಸ್ಥಾನ ಪಡೆದಿದ್ದ ರಿಂದ ಇವರು ಸಂಪೂರ್ಣವಾಗಿ ಆಸಕ್ತಿಯನ್ನು ಕಳೆದುಕೊಂಡು ತಮ್ಮ ಗಮನವನ್ನು ಸ್ಟಾಂಡ್ ಕಡೆಗೆ ತಿರುಗಿಸಿಕೊಂಡರು. ಇವರು 1992ರಲ್ಲಿ ಆಕ್ಷನ್ ಮೂರ್ತಿ ಎಂಬುವರಲ್ಲಿ ಜಿಮ್ನಾಸ್ಟಿಕ್ ನ್ನು ಸು.1992 ರಿಂದ ಹತ್ತು ವರ್ಷಗಳ ಕಾಲ ತರಬೇತಿ ಪಡೆದರು ಗುರುಗಳ ಸಲಹೆಯಂತೆ ಹಲವಾರು ಸಿನಿಮಾದಲ್ಲಿ ಸ್ಟಂಟ್ಮ್ಯಾನ್ ಆಗಿ ಆಕ್ಟ್ ಮಾಡಿದರು.


ವಿಜಯ್ ಅವರಿಗೆ ತೆರೆಯ ಹಿಂದೆ ನಟಿಸುವ ಬದಲು ತೆರೆಯ ಮೇಲೆ ನಟಿಸುವ ಆಸೆ ಕನಸಿತ್ತು. ಇವರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಪ್ರತಿದಿನ ಮೂಳೆಗಳನ್ನು ಮುರಿದು ಕೊಂಡೆ ಮನೆಗೆ ಬರುತ್ತಿದ್ದರು. ಆದರೆ ಸಿನಿಮಾದಲ್ಲಿ ಅಭಿನಯಿಸುವ ಚಲ ಮಾತ್ರ ಬಿಡಲಿಲ್ಲ. ಸ್ಟಂಟ್ ಮ್ಯಾನ್ ಆಗಿ ತೆರೆಹಿಂದೆ ಆಕ್ಟ್ ಮಾಡುತ್ತಿರುವಾಗ ಸಿನಿಮಾ ಒಂದರ ಹೀರೋ ಆಗುವ ಅವಕಾಶ ವಿಜಯ್ ಅವರಿಗೆ ದೊರೆಯಿತು. ಹೌದು ಇವರ ಮೊದಲ ಚಿತ್ರ “ಸೂರಿ ದುನಿಯಾ “. ಈ ಚಿತ್ರ ಎಲ್ಲೆಡೆ ಸದ್ದು ಮಾಡಿತು. ವಿಜಯ್ಗೆ ಇದು “ದುನಿಯಾ ವಿಜಯ್” ಎಂಬ ಹೆಸರನ್ನು ಸಹ ತಂದುಕೊಟ್ಟಿತ್ತು. ನಂತರ ‘ಚಂಡ ‘, ‘ಕರಿಚಿರತೆ’,
‘ಜರಾಸಂಧ’ ಹೀಗೆ ಇವರು ನಟರಾಗಿ ನಟನೆಯಲ್ಲಿ ಮುಂದುವರೆದರು. ಇದೀಗ ಸ್ಯಾಂಡಲ್ವುಡ್ ನ ಸ್ಟಾರ್ ನಟರಲ್ಲಿ ಒಬ್ಬರಾಗಿದ್ದಾರೆ. ಇವರ ಹತ್ತು ವರ್ಷಗಳ ಸ್ಟಂಟ್ ತರಬೇತಿ ಇವರನ್ನು ಕೈಹಿಡಿಯಿತು ಇದೀಗ ಸಲಗ ಚಿತ್ರದ ಮೂಲಕ ಮತ್ತೆ ಸಾಧನೆಯ ಉತ್ತುಂಗದಲ್ಲಿ ನಿಂತಿದ್ದಾರೆ.ಇವರ ಸಿನಿಮಾ ಹೀಗೆ ಮುಂದುವರೆಯಲಿ ಎಂದು ಆಶಿಸೋಣ.