Advertisements

ದುಷ್ಟ ದುರ್ಯೋಧನನಿಗೆ ಸ’ತ್ತ ಮೇಲೆ ಸ್ವರ್ಗ ಪ್ರಾಪ್ತಿಯಾಗಿದ್ದೇಗೆ ! ಇದರ ಹಿಂದಿದ್ದ ರಹಸ್ಯವಾದರೂ ಏನು ಗೊತ್ತಾ ?

Adyathma

ನಮಸ್ತೇ ಸ್ನೇಹಿತರೇ, ಪುಣ್ಯದ ಕೆಲಸಗಳನ್ನ ಮಾಡಿದವರಿಗೆ ಸ್ವರ್ಗ ಹಾಗೂ ಪಾಪದ ಕೆಳಸಗಳನ್ನ ಮಾಡಿದವರಿಗೆ ನರಕ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಹಿಂದೂಗಳಲ್ಲಿ ಇದೆ. ಆದರೆ ಮಹಾನ್ ಕಾವ್ಯ ಮಹಾಭಾರತದಲ್ಲಿ ಇದಕ್ಕೆ ತದ್ವಿರುದ್ದ ಎಂಬಂತೆ ಕೆಲವೊಂದು ಘಟನೆಗಳು ನಡೆದಿರುವುದನ್ನ ನಾವು ಓದಿರುತ್ತೇವೆ. ಹೌದು, ಪುರಾಣಗಳಲ್ಲಿ ಉಲ್ಲೇಖ ಮಾಡಿರುವ ಪ್ರಕಾರ ಮಹಾಭಾರತದ ಖಳನಾಯಕನೆಂದೇ ಕುಖ್ಯಾತಿಯಾಗಿದ್ದ ಧೃತರಾಷ್ಟ್ರ ಪುತ್ರ ಸುಯೋಧನಿಗೂ ಸಹ ಸ್ವರ್ಗ ಪ್ರಾಪ್ತಿಯಾಗಿತ್ತು ಎಂಬುದನ್ನ ಹೇಳಲಾಗಿದೆ. ಆದರೆ ಸ್ತ್ರೀಯರ ಅಪಮಾನ, ಕುತಂತ್ರಗಳನ್ನೇ ಮಾಡಿಕೊಂಡು ಬಂದಿದ್ದ ಸುಯೋಧನಿಗೆ ಸ್ವರ್ಗ ಪ್ರಾಪ್ತಿಯಾಗಿದ್ದಾದರೂ ಹೇಗೆ ಎಂಬ ಅಚ್ಚರಿ ಆಗದೆ ಇರೋದಿಲ್ಲ..

Advertisements

ಸ್ನೇಹಿತರೇ, ಕುರುಕ್ಷೇತ್ರದಂತಹ ಮಹಾ ಕದನದಲ್ಲಿ ಲಕ್ಷಾಂತರ ಮಂದಿಯ ಸಾ’ವಿಗೆ ಕಾರಣನಾದವನು ದುರ್ಯೋಧನ. ದ್ರುಪದ ಕನ್ಯೆ ಪಾಂಚಾಲಿಯ ವಸ್ತ್ರಾಭರಣಕ್ಕೆ ಕಾರಣನಾದವನು ದುರ್ಯೋಧನ. ಅಭಿಮನ್ಯುವಂತಹ ಚಿಕ್ಕ ವಯಸ್ಸಿನ ಎಷ್ಟೋ ಯುವಕರ ಸಾ’ವಿಗೆ ಕಾರಣನಾದವನು ಈ ಗಾಂಧಾರಿ ಪುತ್ರ. ಇಂತಹ ಪಾಪಿಗೆ ಸ್ವರ್ಗವಾಸ ಸಿಕ್ಕಿದಾದರೂ ಹೇಗೆ ಎಂಬ ಪ್ರಶ್ನೆ ಕಾಡದೆ ಇರೋದಿಲ್ಲ ಸ್ನೇಹಿತರೇ..ಹಾಗಾದ್ರೆ ಸುಯೋಧನಿಗೆ ಸ್ವರ್ಗ ಸೇರುವ ಅರ್ಹತೆ ಸಿಕ್ಕಿದಾದರೂ ಹೇಗೆ ಗೊತ್ತಾ ? ಹೌದು, ದುರ್ಯೋಧನ ಪಾಂಡು ಪುತ್ರರಿಗೆ ಯಾವಾಗಲು ಮಾನಸಿಕವಗಿ, ದೈಹಿಕವಾಗಿ ಹಿಂ’ಸೆ ಕೊಡುತ್ತಿದ್ದ. ಭೀಷ್ಮ ದ್ರೋಣ, ವಿದುರರಂತಹ ಹಿರಿಯರ ಮಾತುಗಳಿಗೆ ಗೌರವ ಕೊಡದೆ ಅಹಂಕಾರದಿಂದ ಅವರಿಗೆ ಅಪಮಾನ ಮಾಡುತ್ತಿದ್ದ ನಿಜ.

ಆದರೆ ದುರ್ಯೋಧನ ಸಿಂಹಾಸದ ಮೇಲೆ ಕುಳಿತಿದಷ್ಟು ಕಾಲ ತನ್ನ ಪ್ರಜೆಗಳಿಗೆ ಯಾವ ಕಷ್ಟವು ಬಾರದಂತೆ ನೋಡಿಕೊಂಡಿದ್ದ. ಆ ಮೂಲಕ ತನ್ನ ರಾಜ ಧರ್ಮವನ್ನ ಅಚ್ಚುಕಟ್ಟಾಗಿ ನಿಭಾಯಿಸಿದ್ದ. ಇನ್ನು ತನ್ನ ಪತ್ನಿ ಭಾನುಮತಿ ವಿಷಯದಲ್ಲಿಯೂ ಕೂಡ ಅನುಚಿತವಾಗಿ ನಡೆದುಕೊಳ್ಳಲಿಲ್ಲ. ಜೊತೆಗೆ ಪತ್ನಿಯನ್ನ ಅಗೌರವಕ್ಕೂ ಕೂಡ ಈಡು ಮಾಡಲಿಲ್ಲ. ಹೀಗೆ ತನ್ನ ಪತಿಯ ಧರ್ಮವನ್ನ ಕೂಡ ನಿಭಾಯಿಸಿದ್ದ ಸುಯೋಧನ.

ಇದೆಲ್ಲರ ಜೊತೆಗೆ ತನ್ನ ಗಾಂಧಾರಿಯ ಪುಣ್ಯದ ಬಲ ಹಾಗೂ ತಪೋ ಬಲ ದುರ್ಯೋಧನ ಜೊತೆಗಿತ್ತು. ಇನ್ನು ಇದೆಲ್ಲಕ್ಕಿಂತ ಮಿಗಿಲಾಗಿ ದುರ್ಯೋಧನ ಕುರುಕ್ಷೇತ್ರದಂತಹ ಮಹಾಯುದ್ಧದಲ್ಲಿ ಶತ್ರುಗಳಿಗೆ ಬೆನ್ನು ತೋರದೆ ವೀರಾವೇಶದಿಂದ ಹೋರಾಡಿ ವೀರ ಕ್ಷತ್ರಿಯನಂತೆ ವೀರ ಮ’ರಣವನ್ನ ಹೊಂದಿದ.

ಶಮಂತಪಂಚಕದ ಕ್ಷೇತ್ರವಾದ ಕುರುಕ್ಷೇತ್ರದಂತಹ ಪುಣ್ಯ ಸ್ಥಳದಲ್ಲಿ ಹೋರಾಡಿ ವೀರ ಮ’ರಣ ಹೊಂದಿದವರಿಗೆ ಸ್ವರ್ಗ ಕಟ್ಟಿಟ್ಟ ಬುತ್ತಿ ಎಂದು ಹೇಳಲಾಗಿತ್ತು. ಸ್ವತಃ ವಾಸುದೇವ ಕೃಷ್ಣನೇ ಆಯ್ಕೆ ಮಾಡಿಕೊಂಡಿದ್ದ ಪುಣ್ಯ ಸ್ಥಳವಿದು. ಈ ಪುಣ್ಯಸ್ಥಳದ ರ’ಣಾಂಗಣದಲ್ಲಿ ಹೋರಾಡಿ ಪ್ರಾ’ಣ ಬಿಟ್ಟವರಿಗೆ ಸ್ವರ್ಗವಾಸ ತಪ್ಪಬಾರದು ಎಂಬುದು ಶ್ರೀಕೃಷ್ಣನ ಬಯಕೆಯಾಗಿತ್ತು. ಇನ್ನು ಇದೆ ಕಾರಣದಿಂದಾಗಿ ಪಾಪಿಯಾಗಿದ್ದರೂ ದುರ್ಯೋಧನಿಗೆ ಸ್ವರ್ಗಪ್ರಾಪ್ತಿಯಾಯಿತು. ಸ್ನೇಹಿತರೇ ಈ ಕತೆಯ ಬಗ್ಗೆ ನಿಮ್ಮಲ್ಲಿ ಏನಾದರೂ ಅಭಿಪ್ರಾಯಗಳಿದ್ದರೆ ನಮ್ಮೊಂದಿಗೆ ಹಂಚಿಕೊಳ್ಳಿ..