Advertisements

ಬಾಬಾಬುಡಾನಗಿರಿ ದತ್ತಪೀಠ ಗುಹೆ ಬೆಚ್ಚಿ ಬೀಳಿಸುವ ಸತ್ಯ! ಹಿಂದೂ ಹಾಗು ಮುಸ್ಲಿಂ ದೇವರು ಒಂದೇ ಗುಹೆಯಲ್ಲಿ..

Temples

ಪ್ರಿಯ ಓದುಗರೆ ವರ್ಷದ 12 ತಿಂಗಳು ಸಹ ಇಲ್ಲಿ ನೀರು ಜಿನುಗುತ್ತದೆ. ಬಿರು ಬೇಸಿಗೆಯಲ್ಲಿಯೂ ಈ ಗುಹೆಯಲ್ಲಿ ನೀರು ಜಿನುಗುವುದನ್ನು ಕಾಣಬಹುದು. ಗುಹೆಯ ಎಡಭಾಗದಲ್ಲಿ ಗದ್ದುಗೆ ಇದೆ ಎಡಭಾಗದಲ್ಲಿ ಗಂಧದ ಮಣ್ಣಿನ ಭಾವಿ ಇದೆ. ಈ ಗುಹೆಗೆ ಹೋಗುವ ದಾರಿಯ ಅಕ್ಕಪಕ್ಕದಲ್ಲಿ ಗೋರಿಗಳು ಇದ್ದು ಅವುಗಳನ್ನು ಸಂಪೂರ್ಣವಾಗಿ ಬೇಲಿಗಳಿಂದ ಬಂದಿಸಲಾಗಿದೆ. ಯಾಕೆ ಈ ಗೋರಿಗಳ ಸುತ್ತ ಬೇಲಿಯನ್ನು ಹಾಕಲಾಗಿದೆ?ಯಾವ ದೇವಸ್ಥಾನವಿದು? ಈ ಗುಹೆಯಲ್ಲಿ ದೇವರಾದವರು ಯಾರು? ಈ ಎಲ್ಲ ಪ್ರಶ್ನೆಗಳಿಗೆ ಉತ್ತರಗಳನ್ನು ಈ ಲೇಖನದ ಮೂಲಕ ತಿಳಿಯೋಣ ಬನ್ನಿ. ಅನೇಕ ರಹಸ್ಯಗಳನ್ನು, ವಿವಾದಗಳನ್ನು ಹೊತ್ತಿರುವ ಪುಣ್ಯಕ್ಷೇತ್ರವೇ ದತ್ತಗಿರಿ. ಹಿಂದೆ ಇದನ್ನು ಬಾಬಾ ಬುಡನ್ ಗಿರಿ ಎನ್ನುತ್ತಿದ್ದರು. ಈ ಬೆಟ್ಟದ ಗುಹೆಯಲ್ಲಿ ಗುರುದತ್ತರು ನೆಲೆಸಿದ್ದರು ಎನ್ನಲಾಗಿದೆ. ಇಲ್ಲಿಯೇ ಹಜಾರವಿದೆ. ಅಲ್ಲಿ ಒಂದೆಡೆ ಗುರು ದತ್ತಾತ್ರೇಯರ ಪಾದುಕೆಗಳು ಇವೆ. ಪಾದುಕೆಗೆ ಪ್ರತಿದಿನವೂ ಹೂ ಹಾಕಿ, ನಂದಾದೀಪ ಬೆಳೆಸಲಾಗುತ್ತದೆ.

Advertisements

ಇದರ ಮುಂಭಾಗ ಗೋರಿಯಿದೆ. ಇಲ್ಲಿ ಸದಾ ನಂದಾದೀಪ ಉರಿಯುತ್ತಿದ್ದು ಮುಜಾವರ್ ಇದನ್ನು ನಂದದಂತೆ ನೋಡಿಕೊಳ್ಳುತ್ತಿದ್ದಾರೆ. ಬಜಾರ್ ಪಕ್ಕ 4 ಗೋರಿಗಳು ಇವೆ. ಹಿಂದುಗಳ ಹೇಳುವಂತೆ ದತ್ತಾತ್ರೆಯ ಗುರುಗಳ ನಾಲ್ಕು ಶಿಷ್ಯರ ಗೋರಿಗಳು ಎಂದು ವಾದಿಸಿದರೆ ಬಾಬಾ ಹಯಾಯತ್ ಮೀರ್ ಖಾಲಂದರ ಅಥವಾ ಬಾಬಾಬುಡನ್ ಶಿಷ್ಯರ ಗೋರಿ ಎಂದು ವಾದಿಸುತ್ತಿದ್ದಾರೆ.ಇಲ್ಲಿ ವಿಶೇಷ ಪೂಜೆ ಗಳೆಲ್ಲ. ಕೇವಲ ಪ್ರಾರ್ಥನೆಗಳಿಗೆ ಮಾತ್ರ ಅವಕಾಶವಿದೆ. ಇಲ್ಲಿಯೇ ಒಂದು ಜಾಗದಲ್ಲಿ ಅನುಸೂಯ ತಪಸ್ಸು ಮಾಡುತ್ತಿದ್ದರು ಎನ್ನಲಾಗಿದೆ. ಈ ಜಾಗದ ಮೇಲೆ ಒಂದು ರಂದ್ರದ ಮೂಲಕ ಭಕ್ತರಿಗೆ ರೊಟ್ಟಿ ನೀಡುತ್ತಿದ್ದಳು ಎಂದು ಪ್ರತೀತಿ ಇದೆ.ಗುರು ದತ್ತಾತ್ರೇಯ ಪಾದುಕೆ ಇರುವ ಈ ಗುಹೆಯಲ್ಲಿಯೇ ಮುಸ್ಲಿಂ ಗುರು ಬಾಬಾಬುಡನ್ ತಪಸ್ಸು ಮಾಡಿದ್ದರು ಎನ್ನಲಾಗಿದೆ.

ನಂತರ ತಾನು ತಂದ ಕಾಫಿ ಬೀಜವನ್ನು ನೆಟ್ಟು ಬೆಳೆಸಿದರು. ಅಂದಿನಿಂದ ಭಾರತದಲ್ಲೇ ಖಾತೆ ಬೆಳೆಯಲು ಪ್ರಾರಂಭಿಸಿದರು ಎಂದು ವಾದಗಳು ಎದ್ದೇವೆ. ಆದರೆ ಇದಕ್ಕೂ ಮೊದಲೇ ಭಾರತದಲ್ಲಿ ಕಾಪಿ ಬೆಳೆಯಿತು ಎನ್ನುವುದಕ್ಕೆ ಸಾಕ್ಷಿ ಪುರಾವೆಗಳಿವೆ. ಈ ಗುಹೆಯಲ್ಲಿ ಗುರು ದತ್ತಾತ್ರೇಯರು ನೆಲೆಸಿದ್ದು ಇದು ಹಿಂದೂಗಳಿಗೆ ಸೇರಿದ್ದು ಎಂದು ಹಿಂದುಗಳು ಪೂಜಿಸಿದರೆ, ಬಾಬಾಬುಡನ್ ಇಲ್ಲಿ ತಪಸ್ಸು ಮಾಡಿದ ಸ್ಥಳ ಎಂದು ಮುಸ್ಲಿಂ ಬಂದುಗಳು ವಾದಿಸುತ್ತ ಬಂದಿದ್ದಾರೆ. ಈ ವಿವಾದ ಕೋರ್ಟ್ ಮೆಟ್ಟಿಲೇರಿದ್ದು, ಕೊರ್ಟ್ ಗುರುದತ್ತ ಹಜರತ್ ಮಂದಿರಕ್ಕೆ ಹಿಂದೆ ಯಾವ ರೀತಿ ಪೂಜೆಗಳು ಇದ್ದವೋ ಅದನ್ನೇ ಮುಂದುವರಿಸಲು ಸೂಚಿಸಿತು. ಈ ಗುಹೆ ಇದೀಗ ಎರಡು ಧರ್ಮಗಳಿಗೆ ಸೇರಿದ್ದಾಗಿದೆ.

ಇಲ್ಲಿ ಬಂದ ಎರಡು ಧರ್ಮಗಳ ಜನರಿಗೂ ತೀರ್ಥ ನೀಡಲಾಗುತ್ತಿದೆ. ಮುಜಾವರ್ ಇಲ್ಲಿಯ ಪಾದುಕೆಗಳಿಗೆ ಹೂವಿಟ್ಟು ನಂದಾದೀಪ ಬೆಳಗಿಸುವರು. ಅದೇ ರೀತಿ ಇಲ್ಲಿರುವ ಗೋರಿಗಳಿಗೆ ವಿಧಿವಿಧಾನಗಳನ್ನು ನೆರವೇರಿಸುವರು. ಲಂಗರ್ ಖಾನ್ ದಲ್ಲಿ ರೆಡಿಯಾದ ಪ್ರಸಾದವನ್ನು ಎರಡು ಧರ್ಮದವರು ಸ್ವೀಕರಿಸುವರು. ರಾತ್ರಿ ಏಳರಿಂದ ಎಂಟರ ಹೊತ್ತಿಗೆ ಲಾಭನ್ ಹಾಕಿ ಮುಸ್ಲಿಂ ಬಂದುಗಳು ಪೂಜೆ ಸಲ್ಲಿಸುವರು. ದತ್ತ ಜಯಂತಿಯಂದು 9ರಿಂದ 11 ದಿನ ಆಚರಿಸಲು ಇಲ್ಲಿ ಲಕ್ಷಾಂತರ ಭಕ್ತರು ಮಾಲೆ ಧರಿಸಿ ಬೆಟ್ಟಹತ್ತಿ ಬರುತ್ತಾರೆ. ಈ ಬೆಟ್ಟ ಭಾರತ ಪಶ್ಚಿಮಘಟ್ಟಗಳ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿರುವ ಅದ್ಭುತಗಳಲ್ಲಿ ಹಸಿರು ಬೆಟ್ಟಗಳಲ್ಲಿ ಒಂದಾಗಿದೆ. ಚಿಕ್ಕಮಗಳೂರಿನಿಂದ ಇದು ಕೇವಲ 33 ಕಿಲೋಮೀಟರ್ ದೂರದಲ್ಲಿದೆ. ಇದು 2 ಧರ್ಮಗಳ ಆಚರಣೆಯ ಕೇಂದ್ರವಾಗಿದೆ..