Advertisements

ದ್ವಾರಕೆ ಸಮುದ್ರಲ್ಲಿ ಮುಳಗಿದ ಜಾಗ! ದ್ವಾರಕೆಯಲ್ಲಿ ನಡೆಯಿತು ಮಹಾ ವಿಸ್ಮಯ.. ಹೇಗಿದೆ ನೋಡಿ..

Temples

ಪ್ರಿಯ ಓದುಗರೇ “ದಿ ಗೋಲ್ಡನ್ ಸಿಟಿ ಆಫ್ ಇಂಡಿಯಾ ಎಂದೇ ಹೆಸರಾದ ಸಮುದ್ರರಾಜನ ಅಧೀನದಲ್ಲಿದೆ. ಇದು ಸಪ್ತನಗರಿ. ಆಯೋಧ್ಯ, ಬನಾರಸ್ ಮತ್ತು ಉಜ್ಜಯಣಿ ನಗರಗಳ ಜೊತೆ ಇದು ಒಂದು. ಇದು ಗೋಮತಿ ಮತ್ತು ಸಿಂಧೂ ನದಿಯ ತೀರದಲ್ಲಿತ್ತು. ಇಲ್ಲಿ ವಜ್ರತೋರಣಗಳಿರುವ ದ್ವಾರಬಾಗಿಲು ಅರಮನೆಗಳು ಇದ್ದವು. ಇದೀಗ ಇವೆಲ್ಲ ಸಮುದ್ರದ ಆಳದಲ್ಲಿವೆ. ಇದರ ಕುರಿತು ಇನ್ನಷ್ಟು ಮಾಹಿತಿ ನಿಮಗಾಗಿ. ಸುಮಾರು 5000 ವರ್ಷಗಳ ಹಿಂದೆ ಸು.132 ಕಿ. ಮೀ. ಅಗಲ , 36,864 ಚದರ ಕಿ. ಮೀ ಯಲ್ಲಿ ನಿರ್ಮಾಣವಾದ ದ್ವಾರಕೆಯಲ್ಲಿ ಸುಮಾರು 94 ಲಕ್ಷ ರಾಜ್ಯಭವನ ಗಳಿದ್ದವು. ಸಮುದ್ರರಾಜ ಶ್ರೀಕೃಷ್ಣನಿಗೆ ಸಾಮ್ರಾಜ್ಯ ಕಟ್ಟಿಕೊಳ್ಳಲು ತನ್ನ ಅದೆಷ್ಟೋ ಸಾವಿರ ಚದುರ ಕಿಲೋಮೀಟರ್ ಜಾಗವನ್ನು ಬಿಟ್ಟು ಕೊಟ್ಟಿದ್ದನಂತೆ.ಆದರೆ ಕೃಷ್ಣನ ಮರಣದ ನಂತರ ತನ್ನ ಸ್ವತ್ತನ್ನು ತಾನು ಮರಳಿ ಪಡೆದನಂತೆ. ಹೀಗಾಗಿ ಶ್ರೀಕೃಷ್ಣನ ಸಾಮ್ರಾಜ್ಯವಿಗ ಸಮುದ್ರದ ಆಳದಲ್ಲಿದೆ ಎಂದು ಪುರಾಣಗಳು ಹೇಳುತ್ತವೆ.

[widget id=”custom_html-3″]

Advertisements

ಇಲ್ಲಿ ಬೃಹತ್ ಬೀದಿಗಳು, ಸುಂದರ ಅರಮನೆಗಳು, ಹಸಿರು ನಗರಿ ದ್ವಾರಕೆಯಲ್ಲಿದ್ದವು. ಇದು ಈಗ ಗುಜರಾತನ ದೇವಭೂಮಿ ದ್ವಾರಕ ಜಿಲ್ಲೆಯಲ್ಲಿದೆ. ಆದಿಗುರು ಶಂಕರಾಚಾರ್ಯರು ಇಲ್ಲಿ ಶಕ್ತಿಪೀಠ ವನ್ನು ಸ್ಥಾಪಿಸಿದರು ಎಂದು ಹೇಳಲಾಗಿದೆ. ಶ್ರೀ ಕೃಷ್ಣನು ಕಂಸನನ್ನು ಸಂ’ಹ’ರಿಸಿದ ನಂತರ ದ್ವಾರಕೆಯನ್ನು ಆಳಿದ. ನಂತರ ಜರಾಸಂಧನೊಂದಿಗೆ ಅನೇಕ ಬಾರಿ ಯು’ದ್ಧಮಾಡಿ ಪ್ರಜೆಗಳನ್ನು ರಕ್ಷಿಸಿದನು. ತದನಂತರ ಪ್ರಜೆಗಳಿಗಾಗಿ ಗೋಮತಿ ನದಿತೀರದಲ್ಲಿ ದ್ವಾರಕವನ್ನು ಸ್ಥಾಪಿಸಿದನು. ಕೃಷ್ಣನ ನಂತರ ಪ್ರವಾಹ ಬಂದು ಎಲ್ಲವೂ ಸಮುದ್ರದ ಪಾಲಾಯಿತು. ಇದಕ್ಕೆ ಗಾಂಧಾರಿಯ ಶಾ’ಪ ಕೂಡ ಕಾರಣವಾಯಿತು ಎಂದು ಉಲ್ಲೇಖಗಳಿವೆ. ಇದೀಗ ಈ ಸಮುದ್ರದ ಪಾತಾಳದಲ್ಲಿರುವ ಶ್ರೀಕೃಷ್ಣನ ಸಾಮ್ರಾಜ್ಯದ ಗುರುತುಗಳು ಪತ್ತೆಯಾಗಿವೆ. 16000 ಸತಿ ಯರಿಗಾಗಿ ಅನೇಕ ಅರಮನೆಗಳನ್ನು ನಿರ್ಮಿಸಿದ್ದ ಎನ್ನಲಾಗಿದೆ.

[widget id=”custom_html-3″]

ದ್ವಾರಕಾಧೀಶ ನ ದೇವಸ್ಥಾನವು ಐದು ಮಹಡಿಗಳಿಂದ ಕುಡಿದ್ದು,ಇದು ಸುಣ್ಣದ ಮತ್ತು ಮರಳಿನಿಂದ ನಿರ್ಮಿಸಲಾಗಿದೆ. ಇದಕ್ಕೆ ಅತೀ ಇಕ್ಕಟಿನ ದಾರಿಯಿದೆ. ಇದನ್ನು ಶ್ರೀಕೃಷ್ಣನ ಮಗ ಸಾಂಬಾ ಕಟ್ಟಿಸಿದನಂತೆ. ಗೋಪುರದ ತುದಿಗೆ ದಿನಕ್ಕೆ 5ಬಾರಿ ಬಾವುಟವನ್ನು ಹಾರಿಸಲಾಗುತ್ತಿದೆ. ಈ ದೇವಾಲಯಕ್ಕೆ ಎರಡು ದ್ವಾರಗಳಿವೆ ಒಂದು ಪ್ರವೇಶದ್ವಾರ ಇನ್ನು ಸ್ವರ್ಗ ದ್ವಾರ ಎಂದು ಕರೆಯುತ್ತಾರೆ ಇನ್ನೊಂದು ನಿರ್ಗಮಿಸುವ ದ್ವಾರ ಇದನ್ನು ಮೋಕ್ಷ ದ್ವಾರ ಎಂತಲೂ ಕರೆಯುತ್ತಾರೆ. ಗೋಮತಿ ನದಿ ಹರಿದು ಸಮುದ್ರ ಸೇರುವ ದೃಶ್ಯ ವನ್ನು ಈ ದೇವಾಲಯದಿಂದ ಕಾಣಬಹುದಾಗಿದೆ. ಇಲ್ಲಿ ವಸುದೇವ, ಬಲರಾಮ,ದೇವಕಿ, ರುಕ್ಮಿಣಿ, ಜಾಂಬುವಂತಿ, ಸತ್ಯಭಾಮೆಯರ ದೇವಸ್ಥಾನಗಳಿವೆ. ಹಾಗೆ ಬೆಟ್ಟ ದ್ವಾರಾಕದಲ್ಲಿ ಶ್ರೀಕೃಷ್ಣನ ಅದ್ಭುತ ಮೂರ್ತಿಗಳನ್ನು ಕಾಣಬಹುದು. ಇದನ್ನು ಧೋನಿ ಇಲ್ಲವೇ ಬೊಟ್ ಮೂಲಕ ನೋಡಬಹುದಾಗಿದೆ. ನೀವು ಒಮ್ಮೆ ಆದ್ರು ಈ ದೇವಸ್ಥಾನಕ್ಕೆ ಭೇಟಿ ನೀಡಿ. ಪುನೀತರಾಗಿ.

[widget id=”custom_html-3″]