Advertisements

ಶಾಲೆಗಳನ್ನ ತೆರೆಯಬೇಕೋ? ಬೇಡವೋ? ಲೈವ್ ನಲ್ಲಿ ಸ್ಪಷ್ಟನೆ ಕೊಟ್ಟ ಶಿಕ್ಷಣ ಸಚಿವರು ಹೇಳಿದ್ದೇನು ಗೊತ್ತಾ ?

News

ಕೊರೋನಾ ಹಿನ್ನಲೆಯಲ್ಲಿ ಲಾಕ್ ಡೌನ್ ಆದ ಕಾರಣ ಸುಮಾರು ಎರಡು ವರೆ ತಿಂಗಳಿನಿಂದ ಶಾಲಾ ಕಾಲೇಜುಗಳನ್ನ ಮುಚ್ಚಲಾಗಿದೆ. ಇನ್ನು ಲಾಕ್ ಡೌನ್ ನ್ನ ಸಡಿಲ ಮಾಡಲಾಗಿದೆ. ಆದರೆ ಮಹಾಮಾರಿ ಕೊರೋನಾ ಮಕ್ಕಳಿಗೆ ಹಬ್ಬುವ ಭಯ ಸಾರ್ವಜನಿಕರಲ್ಲಿ ಇರುವ ಕಾರಣ ಶಾಲೆಗಳನ್ನ ತೆರೆಯುವುದೋ ಬೇದವಿ ಎಂಬ ಗೊಂದಲ ಸರ್ಕಾರದ ಮುಂದೆ ಇದೆ. ಇನ್ನು ಜುಲೈ ನಲ್ಲಿ ಶಾಲೆಗಳು ಆರಂಭವಾಗುತ್ತವೆ ಎಂಬ ಸುದ್ದಿಗಳು ಬೇರೆ ಓಡಾಡುತ್ತಿವೆ. ಆಗಾಗಿ ಸಾರ್ವಜನಿಕರು ಕೂಡ ತಮ್ಮ ಮಕ್ಕಳ ಕಾರಣ ತುಂಬಾ ಗೊಂದಲದಲ್ಲಿದ್ದಾರೆ. ಇನ್ನು ಈ ವಿಚಾರದಲ್ಲಿ ಸರ್ಕಾರ ಕೂಡ ಸಾರ್ವಜನಿಕರ ಅಭಿಪ್ರಾಯ ಪಡೆಯಲು ಮುಂದಾಗಿದೆ. ಇನ್ನು ಶಾಲೆಗಳನ್ನ ಪುನರಾರಂಭ ಮಾಡುವುದರ ಬಗ್ಗೆ ಕುರಿತು ಎದ್ದಿರುವ ಸಂದೇಹ, ಪ್ರಶ್ನೆಗಳಿಗೆ ಮಾನ್ಯ ಶಿಕ್ಷಣ ಸಚಿವರಾದ ಸುರೇಶ ಕುಮಾರ್ ಅವರು ಇಂದು ಫೇಸ್ಬುಕ್ ಲೈವ್ ನಲ್ಲಿ ಸ್ಪಷ್ಟನೆ ಕೊಟ್ಟಿದ್ದಾರೆ. ನಿಮ್ಮ ಎಲ್ಲಾ ಗೊಂದಲಗಳಿಗೆ ಕೆಳಗಿರುವ ಈ ವಿಡಿಯೋದಲ್ಲಿ ಸಚಿವರು ಉತ್ತರ ಕೊಟ್ಟಿದ್ದಾರೆ ನೋಡಿ..