Advertisements

ಅಪ್ರತಿಮ ಬಿಲ್ಲುಗಾರ ಏಕಲವ್ಯನ ಅಂ’ತ್ಯ ಹಾಗಿದ್ದೇಗೆ ಗೊತ್ತಾ ? ಇಲ್ಲಿದೆ ನೋಡಿ ಯಾರಿಗೂ ತಿಳಿಯದ ಮಹಾ ರಹಸ್ಯ !

Uncategorized

ನಮಸ್ತೇ ಸ್ನೇಹಿತರೇ, ಮಹಾಭಾರತ ಕಂಡ ಪ್ರಮುಖ ಪಾತ್ರಗಳಲ್ಲಿ ಮಹಾ ಧನುರ್ಧಾರಿ ಏಕಲವ್ಯನು ಪಾತ್ರ ಅತೀ ಪ್ರಮುಖವಾದದ್ದು. ನಿಷಾಧ ಕುಲದ ಹಿರಣ್ಯಜನ್ಯ, ಸುಲೇಖಾ ದಂಪತಿಗೆ ಜನಿಸಿದ ಪುತ್ರ. ಬಿಲ್ವಿದ್ಯೆಯಲ್ಲಿ ಕರ್ಣಾರ್ಜುನರಗಿಂತ ಅಪ್ರತಿಮ ಬಿಲ್ಲುಗಾರನಾಗಿದ್ದ. ಇನ್ನು ಬಿಲ್ಲು ವಿದ್ಯೆಯಲ್ಲಿ ಉನ್ನತ ಶಿಕ್ಷಣವನ್ನ ಪಡೆಯುವ ಹಂಬಲದಿಂದ ಗುರು ದ್ರೋಣರ ಬಳಿ ಹೋಗುತ್ತಾನೆ ಏಕಲವ್ಯ. ಆದರೆ ಅದಾಗಲೇ ತಮ್ಮ ಅಚ್ಚುಮೆಚ್ಚಿನ ಶಿಷ್ಯನಾಗಿದ್ದ ಮಧ್ಯಮ ಪಾಂಡವ ಅರ್ಜುನನನ್ನ ಜಗತ್ತಿನ ಸರ್ವಶ್ರೇಷ್ಠ ಬಿಲ್ಲುಗಾರನಾಗಿ ಮಾಡುವ ಪ್ರತಿಜ್ಞೆ ಮಾಡಿದ್ದ ದ್ರೋಣಾಚಾರ್ಯರು ಕ್ಷತ್ರಿಯ ಕುಲದವರನ್ನ ಬಿಟ್ಟು ಬೇರೆ ಯಾರಿಗೂ ಬಿಲ್ವಿದ್ಯೆ ಹೇಳುಕೊಡುವುದಿಲ್ಲ ಎಂದು ಏಕಲವ್ಯನ ಶಿಷ್ಯತ್ವವನ್ನ ನಿರಾಕರಣೆ ಮಾಡುತ್ತಾರೆ. ಇದರಿಂದ ಸ್ವಲ್ಪವೂ ಬೇಸರಗೊಳ್ಳದ ಏಕಲವ್ಯ ದೂರದಲ್ಲೇ ನಿಂತು ಕುರುಕುಮಾರರಿಗೆ, ಗುರು ದ್ರೋಣರು ಹೇಳಿಕೊಡುತ್ತಿದ್ದ ವಿದ್ಯೆಯನ್ನ ಗಮನಿಸಿ ಅದನ್ನ ಮನನ ಮಾಡಿಕೊಂಡು ಮರಳಿ ಕಾಡಿಗೆ ತೆರಳುತ್ತಾನೆ.

Advertisements

ಕಾಡಿನ ತನ್ನ ವಾಸಸ್ಥಳದಲ್ಲಿ ಭಕ್ತಿಯಿಂದ ಗುರು ದ್ರೋಣಾಚಾರ್ಯರ ಮೂರ್ತಿಯನ್ನ ಮಾಡಿ, ಇವರೇ ತನ್ನ ಮಾನಸ ಗುರುವೆಂದು, ಪ್ರತೀ ದಿನ ದ್ರೋಣರ ಮೂರ್ತಿಯ ಬಳಿ ನಿಂತು ಬಿಲ್ವಿದ್ಯೆಯನ್ನ ಕರಗತ ಮಾಡಿಕೊಳ್ಳುತ್ತಾನೆ. ಎಷ್ಟರ ಮಟ್ಟಿಗೆ ಎಂದರೆ ಕುಂತಿ ಪುತ್ರ ಪಾರ್ತನನ್ನೇ ಮೀರಿಸುವಂತಹ ಧನುರ್ಧಾರಿಯಾಗುತ್ತಾನೆ. ಒಂದು ದಿನ ಅರ್ಜುನ ಸೇರಿದಂತೆ ಪಾಂಡವರು ಕಾಡಿನಲ್ಲಿ ವಿಹಾರ ಮಾಡುತ್ತಿದ್ದ ವೇಳೆ ಯಾವುದೊ ಮೂಲೆಯಿಂದ ನಾಯಿಯೊಂದು ಬೊಗಳುತ್ತಾ ಬರುವುದು ಕೇಳಿಸುತ್ತದೆ. ಆಗ ಅರ್ಜುನ ತಾನು ಕಲಿತ ಶಬ್ದವೇದಿ ವಿದ್ಯೆಯಿಂದ ಇನ್ನೇನು ಆ ಧ್ವನಿ ಬಂದ ಕಡೆ ಬಾಣ ಪ್ರಯೋಗ ಮಾಡಬೇಕು ಎನ್ನುವಷ್ಟರಲ್ಲಿ, ಎಲ್ಲಿಂದಲೋ ಬಂದ ಬಾಣ ಆ ನಾಯಿ ಬೊಗುಳುವುದನ್ನ ನಿಲ್ಲಿಸುವಂತೆ ಮಾಡಿರುತ್ತದೆ. ಆ ನಾಯಿಯ ಬಳಿ ಹೋಗಿ ನೋಡಿದಾಗ ಅದರ ಬಾಯಿಯಲ್ಲಿ ಬಾಣಗಳು ತುಂಬಿರುತ್ತವೆ. ಆದರೆ ಅಚ್ಚರಿ ಎಂದರೆ ಆ ನಾಯಿಗೆ ಕಿಂಚಿತ್ತೂ ಕೂಡ ಅಪಾಯವಾಗಿರುವುದಿಲ್ಲ. ಇದನ್ನು ಕಂಡ ಪಾಂಡವರು ಆ ಅಪ್ರತಿಮ ಬಾಣ ಪ್ರಯೋಗ ಮಾಡಿದವರು ಯಾರು ಎಂದು ಹುಡಿಕಿಕೊಂಡು ಏಕಲವ್ಯನಿದ್ದಲ್ಲಿಗೆ ಹೋಗುತ್ತಾರೆ.

ಧನುರ್ ಅಭ್ಯಾಸದಲ್ಲಿ ನಿರತನಾಗಿದ್ದ ಏಕಲವ್ಯನಿಗೆ ನಾಯಿ ಬೊಗುಳುವುದು ಕೇಳಿ, ತನ್ನ ಏಕಾಗ್ರತೆಗೆ ಭಂಗ ಬರುತ್ತದೆ ಎಂದು ಆ ನಾಯಿಯ ಕಡೆ ನೋಡದೆಯೇ ಅದರ ಬಾಯಿಗೆ ಬಾಣಗಳನ್ನ ಬಿಟ್ಟು, ಅದು ಬೊಗಳದಂತೆ ಮಾಡಿರುತ್ತಾನೆ. ಇನ್ನು ಪಾಂಡವರಿದ್ದಲ್ಲಿಗೆ ಬಂದ ಏಕಲವ್ಯ ತಾನು ಗುರು ದ್ರೋಣರ ಶಿಷ್ಯ ಎಂದು ಪರಿಚಯ ಮಾಡಿಕೊಳ್ಳುತ್ತಾನೆ. ಈ ವಿಷಯ ತಿಳಿದ ಗುರು ದ್ರೋಣರು ಅರ್ಜುನ ಜೊತೆ ಏಕಲವ್ಯ ಇದ್ದಲ್ಲಿಗೆ ಹೋಗುತ್ತಾರೆ. ಸಾಕ್ಷಾತ್ ಗುರುಗಳೇ ತನ್ನ ಬಳಿ ಬಂದಿದ್ದಾರೆ ಎಂದು ಸಂತೋಷಭರಿತನಾದ ಏಕಲವ್ಯ ಗುರುಗಳ ಸೇವೆಯಲ್ಲಿ ತಲ್ಲೀನನಾಗುತ್ತಾನೆ. ಆದರೆ ತನ್ನನ್ನ ಗುರು ಎಂದು ಹೇಳಿಕೊಂಡಿರುವ ಏಕಲವ್ಯನ ಮೇಲೆ ಕು’ಪಿತರಾದ ದ್ರೋಣರು, ನನ್ನನ್ನ ಗುರು ಎಂದು ಸ್ವೀಕಾರ ಮಾಡಿದ ಮೇಲೆ, ನನಗೆ ನಾನು ಕೇಳುವ ಗುರು ದಕ್ಷಿಣಿಯನ್ನ ಕೊಡು ಎಂದು ಏಕಲವ್ಯನ ಬಳಿ ದ್ರೋಣಾಚಾರ್ಯರು ಕೇಳುತ್ತಾರೆ. ಗುರುಗಳೇ ನಿಮಗೇನು ಬೇಕು ಕೇಳಿ ಎಂದ ಏಕಲವ್ಯನಿಗೆ..ನನಗೆ ನಿನ್ನ ಬಲಗೈ ಹೆಬ್ಬೆರಳನ್ನ ಕೊಡು ಎಂದು ಕೇಳಿಬಿಡುತ್ತಾರೆ.

ಆದರೆ ಇದರಿಂದ ಬಿಲ್ವಿದ್ಯೆಯನ್ನ ಕಲಿಯಲು, ಬಾಣ ಹೂಡಲು ಕಷ್ಟವಾಗುತ್ತದೆ ಎಂದು ತಿಳಿದಿದ್ದರೂ ಕೂಡ ಒಂದು ಕ್ಷಣ ಯೋಚನೆ ಮಾಡದ ಏಕಲವ್ಯ ತನ್ನ ಬಲಗೈ ಹೆಬ್ಬೆರಳನ್ನ ಕೊಟ್ಟುಬಿಡುತ್ತಾನೆ. ಇದು ಗುರು ಭಕ್ತಿಗೆ ಸರ್ವ ಶ್ರೇಷ್ಠ ನಿದರ್ಶನ. ಇನ್ನು ಇದರ ಹೊರತಾಗಿಯೂ ಏಕಲವ್ಯ ಬಿಲ್ವಿದ್ದೆಯಲ್ಲಿ ಪಾರ್ಥನಿಗಿಂತ ಮೇಲುಗೈ ಸಾಧಿಸುತ್ತಾನೆ. ಏಕಲವ್ಯನಿಗೆ ಆಶ್ರಯ ಕೊಟ್ಟಿದ್ದ ಹಿರಣ್ಯ ಧನುಷ ಎಂಬುವವನು ಮಹಾ ಕ್ರೂ’ರಿ ಸಾಮ್ರಾಟನೆನಿಸಿದ್ದ ಜರಾಸಂಧನ ಪರವಾಗಿರುತ್ತಾನೆ. ವಾಸುದೇವ ಕೃಷ್ಣನ ಪರಮವೈರಿ ಈ ಜರಾಸಂಧ. ಇದೆ ಕಾರಣಕ್ಕೆ ಏಕಲವ್ಯನು ಕೂಡ ಕೃಷ್ಣನಿಗೆ ವೈ’ರಿಯಾದ. ಇನ್ನು ರುಕ್ಮಿಣಿ ದೇವಿಯು ಕೃಷ್ಣನನ್ನೇ ಮದುವೆಯಾಗಬೇಕಂದು ತನ್ನ ಮನಸ್ಸಿನಲ್ಲೇ ಕೃಷ್ಣನನ್ನ ಪ್ರೀತಿಸುತ್ತಿರುತ್ತಾಳೆ. ಆದರೆ ರುಕ್ಮಣಿಯ ಸಹೋದರ ರುಕ್ಮಿ ಪಾ’ಪಿ ಜರಾಸಂಧನ ಮಿತ್ರನಾಗಿದ್ದು, ಕೃಷ್ಣನನ್ನ ದ್ವೇ’ಷ ಮಾಡುತ್ತಿದ್ದ. ಇದೆ ಕಾರಣಕ್ಕೆ ರುಕ್ಮಿಣಿಯನ್ನ ಶಿಶು ಪಾಲನಿಗೆ ಮದುವೆ ಮಾಡಿಕೊಡಬೇಕೆಂದು ನಿರ್ಧಾರ ಮಾಡಿದ್ದ. ಆದರೆ ಈ ಶಿಶುಪಾಲ ಕೂಡ ಮಹಾ ಕ್ರೂ’ರಿಯೇ.

ಇದನ್ನೆಲ್ಲಾ ತಿಳಿದ ಶ್ರೀ ಕೃಷ್ಣ ರುಕ್ಮಿಣಿಯನ್ನ ಅಪಹರಿಸಿಕೊಂಡು ಬರುವಾಗ, ಜರಾಸಂಧ ಸೇರಿದಂತೆ ರುಕ್ಮಿ, ಶಿಶುಪಾಲರು ಕೃಷ್ಣನ ವಿರುದ್ಧ ಸ’ಮರಕ್ಕೆ ನಿಲ್ಲುತ್ತಾರೆ. ಇದೆ ಸಂಧರ್ಭದಲ್ಲಿ ಏಕಲವ್ಯ ಕೂಡ ಜರಾಸಂಧನ ಸೈನ್ಯದಲ್ಲಿ ಇದ್ದು, ಇದೆ ಮೊದಲ ಬಾರಿಗೆ ಕೃಷ್ಣ ಏಕಲವ್ಯನನ್ನ ಭೇಟಿಯಾಗಿದ್ದ ಎಂದು ಪುರಾಣಗಳಲ್ಲಿ ಉಲ್ಲೇಖ ಮಾಡಲಾಗಿದೆ. ಇನ್ನು ಇದರ ಬಳಿಕ ಮಥುರಾ ಮೇಲೆ ಸಮರ ಸಾರಿದ್ದ, ಜರಾಸಂಧನ ಸೈನ್ಯದಲ್ಲಿ ಏಕಲವ್ಯ ಇದ್ದು, ಬಲರಾಮ ಮತ್ತು ಯಾದವ ಸೈನ್ಯದ ಜೊತೆ ಯು’ದ್ಧವಾಗುತ್ತದೆ. ತನ್ನ ಬಲಗೈ ಹೆಬ್ಬೆರಳು ಇಲ್ಲದೆಯೂ ಕೂಡ ಇಡೀ ಯಾದವ ಸೈನ್ಯವನ್ನ ಪತರುಗುಟ್ಟುವಂತೆ ಮಾಡಿ, ಸ್ವತಃ ವಾಸುದೇವನೇ ಚಕಿತಗೊಳ್ಳುವಂತೆ ಪರಾಕ್ರಮ ತೋರಿರುತ್ತಾನೆ ಏಕಲವ್ಯ. ಇನ್ನು ಕೃಷ್ಣನ ಹಿಂದೆಯೇ ಹೋಗಿ ಪ್ರ’ಹಾರ ಮಾಡುತ್ತಿದ್ದು ಇದರಿಂದ ಕೋಪಗೊಂಡ ಕೃಷ್ಣ ಕಲ್ಲೊಂದನ್ನ ಬಲವಾಗಿ ಏಕಲವ್ಯನ ಮೇಲೆ ಎಸೆದ ಕಾರಣ ಏಕಲವ್ಯ ವೀರ ಸ್ವರ್ಗ ಪಡೆದ ಎಂದು ಪುರಾಣಗಳಲ್ಲಿ ಉಲ್ಲೇಖ ಮಾಡಲಾಗಿದೆ. ಸ್ನೇಹಿತರೇ, ನಿಮ್ಮ ಪ್ರಕಾರ ಧನುರ್ಧಾರಿಗಳಲ್ಲಿ ಸರ್ವ ಶ್ರೇಷ್ಠ ಯೋಧ ಯಾರೆಂದು ಕಾಮೆಂಟ್ ಮಾಡಿ ತಿಳಿಸಿ..