Advertisements

ಈ ಮಹಿಳೆಗೆ ರೋಡ್ ಮಧ್ಯದಲ್ಲಿ ಆನೆ ಎನು ಮಾಡುತ್ತಿದೆ ಗೊತ್ತಾ? ಆಶ್ಚರ್ಯ ಚಕಿತರಾದ ಜನಗಳು..

Kannada Mahiti

ನಮಸ್ತೆ ಸ್ನೇಹಿತರೆ, ಈಗಿನ ಕಾಲದಲ್ಲಿ ನಾವು ಮಾಡಿದ ಸಹಾಯವನ್ನು ಹಲವರು ಮರೆತು ಹೋಗ್ತಾರೆ.. ಇನ್ನೂ ಕೆಲವರಂತು ಹೆತ್ತ ತಂದೆ ತಾಯಿಗಳನ್ನೇ ಸರಿಯಾಗಿ ನೋಡಿಕೊಳ್ಳುವುದಿಲ್ಲ. ಅಂತಹವರ ಮಧ್ಯದಲ್ಲಿ ಒಂದು ಆನೆ ಮತ್ತು ಈ ಮಹಿಳೆ ಕಥೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.. ನಿಜಕ್ಕೂ ಈ ರೀತಿಯೂ ಕೂಡ ನಡೆಯುತ್ತಾ ಅಂತ ನಿಮಗೂ ಕೂಡ ಅನಿಸುತ್ತದೆ. ಈ ಸುದ್ದಿ ಬರುತ್ತಿರುವುದು ಕೇರಳದಿಂದ, ಸಾಮಾನ್ಯವಾಗಿ ನಾವು ಹೇಗೆ ನಾಯಿ, ಬೆಕ್ಕು, ಹಸುಗಳನ್ನು ಸಾಕುತ್ತೀವೋ ಅದೇ ರೀತಿ ಕೇರಳದಲ್ಲಿ ಆನೆಗಳನ್ನು ಸಾಕಿರುತ್ತಾರೆ.. ಹಾಗೆ ಅಚ್ಯುತನ್ ಎಂಬ ವ್ಯಕ್ತಿ ಕಲ್ಯಾಣಿ ಎಂಬ ಒಂದು ಆನೆಯನ್ನು ಸಾಕಿರುತ್ತಾನೆ..

Advertisements

ಏಳೆಂಟು ವರ್ಷಗಳ ಕಾಲ ಕಲ್ಯಾಣಿಯ ಮಾವುತನಾಗಿ ಅಚ್ಯುತನ್ ಜೀವವ ನಡೆಸುತ್ತಿರುತ್ತಾನೆ. ಮತ್ತು ಅತಿಚ್ಚುತನ್ ಗೆ ಸುಮತಿ ಎಂಬುವ ಹೆಂಡತಿ ಕೂಡ ಇದ್ದಾಳೆ.. ಆಕೆ ಹತ್ತಿರದ ದೇವಸ್ಥಾನದಲ್ಲಿ ಹೂವಿನ ವ್ಯಾಪಾರವನ್ನು ಮಾಡಿಕೊಂಡು ತನ್ನ ಜೀವನವನ್ನ ನಡೆಸುತ್ತಿರುತ್ತಾಳೆ. ಒಂದು ದಿನ ಮಾವುತ ಅಚ್ಯುತನ್ ಹೃದಯ ಘಾ’ತದಿಂದ ನಿಧನವಾಗುತ್ತಾನೆ.. ಅದಕ್ಕೆ ಆನೆಯನ್ನು ಅಚ್ಯುತನ್ ಸ್ನೇಹಿತನಾದ ಶೇಖರನ್ ಗೆ ನೀಡಲಾಗುತ್ತದೆ. ಮತ್ತು ಶೇಖರನ್ ಕೂಡ ಮಾವುತನಾಗಿದ್ದರಿಂದ ಆನೆಯನ್ನು ಕರೆದುಕೊಂಡು ಹೋಗುತ್ತಾನೆ‌.

ಪ್ರತಿದಿನ ಶೇಖರನ್ ಆ ಆನೆಯನ್ನು ದೇವಸ್ಥಾನಕ್ಕೆ ಕರೆದುಕೊಂಡು ಹೋಗುವಾಗ ದಾರಿಯಲ್ಲಿ ಅಚ್ಯುತನ್ ನ ಹೆಂಡತಿ ಸುಮತಿಯ ಬಳಿ ಹೋಗಿ ಆಕೆಯನ್ನು ಆಶಿರ್ವದಿಸಿ ದೇವಸ್ಥಾನಕ್ಕೆ ಹೋಗುತ್ತದೆ.. ಇದನ್ನು ಪ್ರತಿದಿನ ದಾರಿಯಲ್ಲಿ ಹೋಡಾಡುವ ವ್ಯಕ್ತಿಗಳು ಈ ಅನೆ ಮಾಡುತ್ತಿರುವ ಕೆಲಸ ನೋಡಿ ಆಶ್ಚರ್ಯ ಪಟ್ಟಿದ್ದಾರೆ. ನೋಡಿದರಲ್ವಾ ಸ್ನೇಹಿತರೆ ಮನುಷ್ಯರಿಗೆ ಎಷ್ಟೇ ಸಹಾಯ ಮಾಡಿದ್ರೂ ಸಹ ಅದನ್ನು ಮರೆತು ಹೋಗ್ತಾರೆ, ಆದರೆ ಪ್ರಾಣಿಗಳು ಆಗಲ್ಲ.. ನಾವು ಮಾಡಿದ ಸಹಾಯಕ್ಕೆ ಅಥವಾ ನಾವು ಒಂದು ಊಟವನ್ನು ಹಾಕಿದ್ರೂ ಸಹ ಅದನ್ನು ಜೀವನವಿಡೀ ನೆನಪಿಟ್ಟುಕೊಳ್ಳುತ್ತವೆ.. ಅದಕ್ಕೆ ಈ ಆನೆಯೇ ಉದಾಹರಣೆ.