Advertisements

ಆಕಸ್ಮಿಕವಾಗಿ ವಿಮಾನದಲ್ಲಿ ತೆಗೆದ ವಿಡಿಯೋ ನೋಡಿ ಪ್ರತಿಯೊಬ್ಬರೂ ಶಾಕ್ ! ಆ ದೃಶ್ಯದಲ್ಲಿ ಏನಿತ್ತು ಗೊತ್ತಾ ?

Kannada Mahiti

ನಮಸ್ತೇ ಸ್ನೇಹಿತರೇ, ವಿಮಾನದಲ್ಲಿ ಪ್ರಯಾಣ ಮಾಡೋದು ಅಂದ್ರೆ ಅದರ ಮಜಾನಾ ಬೇರೆ. ಅದರಲ್ಲೂ ರಾಜಮರ್ಯಾದೆಯಿಂದ ಕೂಡಿರುವ ವಿಮಾನದಲ್ಲಿ ಪ್ರಯಾಣ ಮಾಡಿದ್ರೆ ಹೇಗಿರುತ್ತೆ ಆಲ್ವಾ. ಹೌದು, ಎಮಿರೇಟ್ಸ್ ಇಡೀ ಜಗತ್ತಿನಲ್ಲಿ ಐಷಾರಾಮಿ ವಿಮಾನ ಪ್ರಯಾಣಕ್ಕೆ ಹೆಸರುವಾಸಿಯಾದ ಫ್ಲೈಟ್ ಕಂಪನಿ. ಎಮಿರೇಟ್ಸ್ ವಿಮಾನದ ಬ್ಯುಸಿನೆಸ್ ಕ್ಲಾಸ್ ನಲ್ಲಿ ಪ್ರಯಾಣ ಮಾಡುವುದೆಂದರೆ ತುಂಬಾ ಅದ್ದೂರಿ ಹಾಗೂ ರಾಜ ಮರ್ಯಾದೆಯಿಂದ ಕೂಡಿರುತ್ತದೆ. ಇದಕ್ಕೆಲ್ಲಾ ಕಾರಣ ಅಲ್ಲಿ ಸಿಗುವ ವೈಭವೋಪೇತ ಸೌಲಭ್ಯಗಳು ಹಾಗೂ ಆ ವಿಮಾನದಲ್ಲಿ ಕೊಡಲಾಗುವ ದುಬಾರಿ ವೈ’ನ್. ಆದರೆ ಬಯಲಾಗಿರುವ ವಿಡಿಯೋವೊಂದರಿಂದ ಎಮಿರೇಟ್ಸ್ ಕಂಪನಿಗೆ ದೊಡ್ಡ ತಲೆನೋವಾಗಿದೆ. ಅಷ್ಟಕ್ಕೂ ಆ ವಿಮಾನದಲ್ಲಿ ಆಗಿದ್ದೇನು ಎಂಬುದನ್ನ ತಿಳಿಯೋಣ ಬನ್ನಿ..

Advertisements

ರಷ್ಯಾ ಮೂಲದ ವ್ಯಕ್ತಿಯೊಬ್ಬ ದುಬೈನಿಂದ ರಷ್ಯಾಗೆ ಮರಳುವ ಸಲುವಾಗಿ ಎಮಿರೇಟ್ಸ್ ಕಂಪನಿಯ ಬ್ಯುಸಿನೆಸ್ ಕ್ಲಾಸ್ ನಲ್ಲಿ ತನ್ನ ಟಿಕೆಟ್ ನ್ನ ಬುಕ್ ಮಾಡಿದ್ದ. ಇನ್ನು ವಿಮಾನದ ಒಳಗಡೆ ಹೋಗುವಾಗಿ ತನ್ನ ಮೊಬೈಲ್ ನಲ್ಲಿ ವಿಡಿಯೋ ಮಾಡಿಕೊಂಡೇ ಹೋದ. ಬಳಿಕ ತನ್ನ ಸೀಟ್ ನಲ್ಲಿ ಕುಳಿತುಕೊಂಡು ರಷ್ಯಾಗೆ ವಾಪಾಸ್ ಆದ. ಕೆಲ ದಿನಗಳ ಬಳಿಕ ಹೀಗೆ ಕುಳಿತಿದ್ದ ಆ ವ್ಯಕ್ತಿ ತನ್ನ ಮೊಬೈಲ್ ನೋಡುತ್ತಾ ತಾನು ಎಮಿರೇಟ್ಸ್ ವಿಮಾನದೊಳಗೆ ಹತ್ತುವಾಗ ರೆಕಾರ್ಡ್ ಮಾಡಿದ ವಿಡಿಯೋವನ್ನ ನೋಡುತ್ತಾನೆ. ಆ ವಿಡಿಯೋ ನೋಡಿದ ಆ ವ್ಯಕ್ತಿ ಅದರಲ್ಲಿದ್ದ ದೃಶ್ಯವೊಂದನ್ನ ಕಂಡ ಬೆಚ್ಚಿಬೀಳುತ್ತಾನೆ.

ಆ ವಿಡಿಯೋದಲ್ಲಿ, ವಿಮಾನದಲ್ಲಿದ್ದ ಗಗನ ಸಖಿ ಪ್ರಯಾಣಿಕರು ಕುಡಿದು ಉಳಿಸಿದ್ದ ಅಲ್ಪ ಸ್ವಲ್ಪ ವೈ’ನ್ ನ್ನ ಬಾಟಲ್ ಒಂದಕ್ಕೆ ತುಂಬಿಸುತ್ತಿರುವುದನ್ನ ಗಮನಿಸುತ್ತಾನೆ. ಈ ದೃಶ್ಯವನ್ನ ನೋಡಿ ಒಂದು ಕ್ಷಣ ಶಾಕ್ ಆದ ಆ ವ್ಯಕ್ತಿ ಎಮಿರೇಟ್ಸ್ ಕಂಪನಿಗೆ ತಾನು ಮಾಡಿದ್ದ ವಿಡಿಯೋವನ್ನ ಕಳುಹಿಸುತ್ತಾನೆ, ಜೊತೆಗೆ ಆ ವಿಡಿಯೋವನ್ನ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ನೀವು ಯಾವಾಗಲು ಇದೆ ರೀತಿ ಮಾಡುತ್ತೀರಾ ಎಂಬ ಕ್ಯಾಪ್ಷನ್ ಕೂಡ ಹಾಕುತ್ತಾನೆ. ಈ ವಿಡಿಯೋವನ್ನ ನೋಡಿದವರು ಎಮಿರೇಟ್ಸ್ ವಿಮಾನ ಕಂಪನಿಗೆ ಸಖತ್ ಆಗಿಯೇ ಉಗಿದ್ರು. ಇನ್ನು ಎಮಿರೇಟ್ಸ್ ನ ಅಧಿಕಾರಿಗಳು ನಮ್ಮ ವಿಮಾನಗಳಲ್ಲಿ ಇಂತಹ ಘಟನೆಗಳು ನಡೆಯಲು ಸಾಧ್ಯವಿಲ್ಲ, ನಾವು ವಿಚಾರಣೆ ಮಾಡುತ್ತಿದ್ದೇವೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಇನ್ನು ಕುಡಿದುಬಿಟ್ಟಿರುವ ಅಲ್ಪ ಸ್ವಲ್ಪ ವೈ’ನ್ ನ್ನ ಚೆಲ್ಲುವುದಕ್ಕೆ ಸುಲಭವಾಗುತ್ತದೆ ಎಂದು ಬಾಟಲ್ ನಲ್ಲಿ ಹಾಕುತ್ತಿರಬಹುದು ಎಂದು ವಿಮಾನದಲ್ಲಿ ಕೆಲಸ ಮಾಡುವ ಗಗನ ಸಖಿಗಳು ಹೇಳಿದ್ದಾರೆ. ಐಷಾರಾಮಿ ಎನ್ನುವ ಹೆಸರಿನಲ್ಲಿ ನಮ್ಮಿಂದ ಸಿಕ್ಕಾಪಟ್ಟೆ ಹಣ ಪೀಕುವ ನೀವು ಬೇರೆಯವರು ಕುಡಿದು ಬಿಟ್ಟಿರುವ ವೈ’ನ್ ನ್ನ ನಮಗೆ ಕೊಡುತ್ತೀರಾ ಎಂದು ಅನೇಕರು ಎಮಿರೇಟ್ಸ್ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಒಟ್ಟಿನಲ್ಲಿ ಯಾವ ಉದ್ದೇಶದಿಂದ ಈ ಯಡವಟ್ಟು ಮಾಡಿದಳೋ ಆ ಗಗನ ಸಖಿ ಗೊತ್ತಿಲ್ಲ. ಆದರೆ ಎಮಿರೇಟ್ಸ್ ಕಂಪನಿಗೆ ಮಾತ್ರ ಇದು ದೊಡ್ಡ ತಲೆನೋವಾಗಿರುವುದು ಸುಳ್ಳಲ್ಲ. ಸ್ನೇಹಿತರೇ, ನೀವು ಯಾವಾಗಲಾದರೂ ವಿಮಾನದಲ್ಲಿ ಪ್ರಯಾಣ ಮಾಡಿದ್ದರೆ, ಹೇಗಿತ್ತೆಂದು ನಿಮ್ಮ ಅಭಿಪ್ರಾಯ ತಿಳಿಸಿ..