Advertisements

ಲೈಫ್ನಲ್ಲಿ ಸಮಸ್ಯೆ ಯಾರಿಗಿಲ್ಲ ಹೇಳಿ. ಸಿಕ್ಕಾಪಟ್ಟೆ ಇರುತ್ತೆ. ಈ ಸಮಸ್ಯೆ ಜೊತೆಗೆ ಹೇಗೆ ಬದುಕೋದು ಅಂತ ಓದಿ.

Motivation

ಸಮಸ್ಯೆ ಜೊತೆಗೆ ಬದುಕೋದ್ರಲ್ಲಿ ಮೂರು ತರ ಇರುತ್ತೆ. ಸಮಸ್ಯೆನ ಫೇಸ್ ಮಾಡೋದು ಇಗ್ನೋರ್ ಮಾಡೋದು ಹಾಗೂ ಅಂತರ ಕಾಯ್ದುಕೊಳ್ಳೋದು. ವಿದ್ಯಾಭ್ಯಾಸ, ವೃತ್ತಿ, ಕುಟುಂಬ, ದಾಂಪತ್ಯ, ಗಣಕಾಸು ಇಂತದ್ರಲ್ಲೆಲ್ಲಾ ಬರುವ ಸಮಸ್ಯೆಯನ್ನ ಫೇಸ್ ಮಾಡ್ಲೇಬೇಕು ಇಲ್ಲ ಅಂದ್ರೆ ಜೀವ್ನ ಮುಂದೆ ಹೋಗಲ್ಲ.

Advertisements

ಯಾರೋ ಬೆನ್ನ ಹಿಂದೆ ನಿಂತು ಕುಚೇಷ್ಟೆ ಮಾಡಿದ್ರು ರೇಗ್ಸಿದ್ರು ನಮ್ ಬಗ್ಗೆ ಕೆಟ್ಟದಾಗಿ ಮಾತಾಡ್ತಿದ್ದಾರೆ ಅನ್ನೋ ವಿಚಾರವನ್ನೆಲ್ಲ ಇಗ್ನೋರ್ ಮಾಡ್ಲೇಬೇಕು ಇಲ್ಲಾಂದ್ರೆ ನೆಮ್ಮದಿ ಹಾಳಾಗುತ್ತೆ. ಕೆಲವೊಮ್ಮೆ ಯಾರದ್ದೋ ಜಗಳ ಮನಸ್ತಾಪಕ್ಕೆ ನಾವು ಬಲಿಯಾಗ್ತಿವಿ ಅಂತಂದ್ರೆ ಆಗ ಅಂತರ ಕಾಯ್ದುಕೊಳ್ಬೇಕು ಸಮಸ್ಯೆ ತಿಳಿಯಾಗೋವರೆಗೆ.

ಬದುಕಲ್ಲಿ ಸಮಸ್ಯೆನೆ ಇಲ್ಲ ಅಂದ್ರೆ ಆಮೇಲೆ ಅದೇ ದೊಡ್ಡ ಸಮಸ್ಯೆ ಆಗುತ್ತೆ. ಜೀವ್ನ ಅಂದ್ಮೇಲೆ ಹೋರಾಡಬೇಕು ಕಂಡ್ರಿ ಇಲ್ಲಾಂದ್ರೆ ಸಪ್ಪೆ ಅನ್ಸುತ್ತೆ ಆಮೇಲೆ ನಾವೆಲ್ಲರೂ ನಿರ್ಜೀವ ವಸ್ತುಗಳಾಗ್ಬಿಡ್ತೀವಿ ಬದುಕಿದ್ದು ಸತ್ತವರಂತೆ.

ಜೀವನದಲ್ಲಿ ನಮ್ ಜೊತೆ ಕೊನೆವರೆಗೂ ನಿಲ್ಲೋದು ನಾವೇ. ಹಸಿದುಕೊಂಡು ಸತ್ರು ಪರವಾಗಿಲ್ಲ ಯಾವತ್ತೂ ನೆಂಟರಿಷ್ಟರ ಮುಂದೆ ಕೈ ಚಾಚಬಾರದು. ಅವ್ನು ಬರ್ತಾನೆ ಇವ್ನು ಬರ್ತಾನೆ ಅವ್ರು ಸಪೋರ್ಟ್ ಮಾಡ್ತಾರೆ ಇವ್ರು ನನ್ನ ಜೊತೆಗಿರ್ತಾರೆ ಅಂತ ಅಂದುಕೊಂಡ್ರೆ ಅದಕ್ಕಿಂತ ಮೂರ್ಖತನ ಇನ್ನೊಂದಿಲ್ಲ.

ನಾವು ಬದುಕಲ್ಲಿ ಒಂದು ಹಂತಕ್ಕೆ ಬಂದು ನಿಲ್ಲೋವರ್ಗು ಯಾರೂ ನಮ್ಮವರಲ್ಲ. ನಾವೇನೇ ಆಗ್ಬೇಕಂದ್ರು ಅದು ನಮ್ಮಿಂದ ಮಾತ್ರ ಕೇವಲ ನಮ್ಮಿಂದ. ಅಬ್ಬಬ್ಬಾ ಅಂದ್ರೆ ಸೋಲಬಹುದು ಅಷ್ಟೆ.

ನನ್ನ ಈ ಬರವಣಿಗೆ ನಿಮಗೆಲ್ಲ ಇಷ್ಟ ಆದ್ರೆ ಓದಿ ಸುಮ್ನಾಗ್ಬೇಡಿ ದಯವಿಟ್ಟು ಶೇರ್ ಮಾಡಿ ನೀವು ಮಾಡೋ ಒಂದೊಂದು ಶೇರ್ ಕೂಡ ತುಂಬಾ ಜನಕ್ಕೆ ತಲುಪುತ್ತೆ. ಹಾಗೇನೇ ಓದಿದ್ಮೇಲೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಮೆಂಟ್ನಲ್ಲಿ ಬರೆಯಿರಿ.

Leave a Reply

Your email address will not be published. Required fields are marked *