Advertisements

ಸಿಕ್ಕಾಪಟ್ಟೆ ಪೇಮಸ್ ಆಗಿದ್ದ ಹಿರಿಯ ನಟಿ ಲಕ್ಷ್ಮಿ ಅವರು ಈಗ ಹೇಗಿದ್ದಾರೆ ಗೊತ್ತಾ? ಮೊಮ್ಮಗಳು ಕೂಡ ಟಾಪ್ ನಟಿ..

Kannada Mahiti

ನಮಸ್ತೆ ಸ್ನೇಹಿತರೆ, ಸುಮಾರು ಆರು ದಶಕಗಳಿಂದ ಎಮ್ ಎನ್ ಲಕ್ಷ್ಮಿ ದೇವಿ ಅವರು ಕನ್ನಡ ಸಿನಿಮಾ ರಂಗದಲ್ಲಿ ಕೆಲಸ ಮಾಡಿದ್ದಾರೆ.. ಇಲ್ಲಿಯವರೆಗೂ 600 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಎಮ್ ಎನ್ ಲಕ್ಷ್ಮೀ ಅವರು ಬಣ್ಣ ಹಚ್ಚಿದ್ದಾರೆ. ಸಿನಿಮಾಗಳು ಮಾತ್ರವಲ್ಲದೇ ಕಿರುತೆರೆಯಲ್ಲಿ ಅನೇಕ ಧಾರವಾಹಿಗಳಲ್ಲಿ ಕೂಡ ಬಣ್ಣ ಹಚ್ಚಿದಾರೆ.. ಇನ್ನೂ ಇವರ ಮೊಮ್ಮಗಳು ಕೂಡ ತುಂಬಾನೇ ಫೇಮಸ್. ಅನೇಕ ಕಿರುತೆರೆಯ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.. ತುಂಬಾ ಜನರಿಗೆ ಇವರ ಮೊಮ್ಮಗಳು ಯಾರು ಹೇಗಿದ್ದಾರೆ ಎಂಬ ಮಾಹಿತಿ ತಿಳಿದಿರೋದಿಲ್ಲ.. ಎಮ್ ಎನ್ ಲಕ್ಷ್ಮಿ ದೇವಿ ಅವರಿಗೆ ಮೊಮ್ಮಗಳು ಮಾತ್ರವಲ್ಲದೇ ಮರಿಮಗು ಕೂಡ ಇದೆ.

Advertisements

ಲಕ್ಷ್ಮಿ ಅವರಿಗೆ ಈಗ 80 ವರ್ಷ ದಾಟಿದ್ದರು  ಕೂಡ ಕೆಲವೊಂದು ಸಿನಿಮಾಗಳು, ಮತ್ತು ಧಾರವಾಹಿಗಳಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿರುತ್ತಾರೆ.. ಆದರೆ ಈಗ ವಯಸ್ಸಾಗಿರುವ ಕಾರಣ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದು ಕುಟುಂಬದವರು ಕೂಡ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ.. ಆದರೂ ಸಹ ಲಕ್ಷ್ಮಿ ಅವರು ದಶಕಗಳಿಂದ ನಟನೆ ಮಾಡಿಕೊಂಡು ಬಂದವರು. ಅಂದಿನ ಕಾಲದಿಂದ ಇಂದಿನ ಕಾಲದವರೆಗೂ ದೊಡ್ಡ ದೊಡ್ಡ ನಟರ ಜೊತೆ ಹೆಜ್ಜೆ ಹಾಕಿದ್ದಾರೆ..

ಇನ್ನೂ ಎಮ್ ಎನ್ ಲಕ್ಷ್ಮಿ ಅವರು ಡಾ.ರಾಜ್ ಕುಮಾರ್ ಅವರ ಜೊತೆ ಅತ್ಯುತ್ತಮವಾಗಿ ಸ್ಕ್ರೀನ್  ಶೇರ್ ಮಾಡಿಕೊಂಡಿದ್ದಾರೆ. ಹಾಗೆ ಇವರ ಮೊಮ್ಮಗಳು ಬೇರೆ ಯಾರು ಅಲ್ಲಾ.. ಕಿರುತೆರೆ ನಟಿ ದೀಪಿಕಾ ಅವರು. ಯಾರೇ ನೀ ಮೋಹಿನಿ ಧಾರವಾಹಿ ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಿತ್ತು.. ಅದರಲ್ಲಿ ದೀಪಿಕಾ ಅವರು ಕಾಣಿಸಿಕೊಂಡಿದ್ದಾರೆ. ಅಜ್ಜಿ ಅಂದರೆ ಇವರಿಗೆ ತುಂಬಾ ಪ್ರೀತಿ ಅವರ ಜೊತೆ ಆಗಾಗ ವಿಡಿಯೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ.. ಇವರ ಅಜ್ಜಿಯಿಂದಲೇ ದೀಪಿಕಾ ಅವರಿಗೆ ಅನೇಕ ಹೆಸರು ಬಂದಿದೆ.