Advertisements

ರಾಣಿಯಂತಿದ್ದ ಖ್ಯಾತ ನಟಿ ದುಡಿದ ಹಣವನ್ನೆಲ್ಲಾ ಮಕ್ಕಳಿಗೆ ಕೊಟ್ಟು ಮೋಸ ಹೋಗಿ ಈಗ ಬೀದಿಯಲ್ಲಿ ಕರ್ಚೀಪ್ ಮಾರುತ್ತಿದ್ದಾರೆ.. ಆ ನಟಿ ಯಾರು ಗೊತ್ತಾ?

Cinema

ನಮಸ್ತೇ ಸ್ನೇಹಿತರೆ, ಜೀವನವನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ಒಂದು ಕೇಜಿ ಹೂವಿನಷ್ಟು ಬಾರ ತುಂಬಾ ಕಾಂಪ್ಲಿಕೇಟ್ ಮಾಡಿಕೊಂಡರೆ ಬೆಟ್ಟದಷ್ಟು ಬಾರ.. ಇರುವುದನ್ನು ಒಪ್ಪಿಕೊಂಡು, ಬರುವುದನ್ನು ಸ್ವೀಕರಿಸಿ ಮುಂದೆ ನಡೆದರೆ ಪ್ರತಿದಿನ ಸುಂದರವಾಗಿರುತ್ತದೆ. ಇಲ್ಲ ಅಂದರೆ ನಮಗೆ ನಾವೇ ನ’ರ’ಕ ಸೃಷ್ಟಿಸಿಕೊಂಡಂತೆ.. ಈ ನಟಿ ಕೂಡ ಅದೇ ರೀತಿ. ಎಲ್ಲಾ ಕಳೆದುಕೊಂಡರು ಜೀವನದ ಮೇಲೆ ನಂಬಿಕೆ ಮಾತ್ರ ಕಳೆದುಕೊಳ್ಳಲಿಲ್ಲ. ಆದರೆ ಆ ನಟಿ ಯಾರು ಗೊತ್ತಾ.. ಬೆಳ್ಳಿ ತೆರೆಯಲ್ಲಿ ಎಲ್ಲಾ ಸೂಪರ್ ಸ್ಟಾರ್ ಗಳ ಜೊತೆ ನಟಿಸಿರುವ ಈ ನಟಿ ಈಗ ಒಂದು ಹೊತ್ತು ಊಟಕ್ಕು ಸಹ ಕಡುಬಿಸಿಲಿನಲ್ಲಿ ಬೀಚ್ ಪಕ್ಕದಲ್ಲಿ ಕರ್ಚೀಪ್ ಮಾರಿ ಜೀವನ ಸಾಗಿಸುತ್ತಿದ್ದಾರೆ.

[widget id=”custom_html-3″]

Advertisements

ಆಕೆಯನ್ನು ಗುರುತು ಹಿಡಿದವರು ಆಕೆಯ ಕಷ್ಟ ನೋಡಿ ಕಣ್ಣೀರು ಹಾಕುತ್ತಿದ್ದಾರೆ.. ಈ ನಟಿಯ ಹೆಸರು ರಂಗಮಲ್. ತಮಿಳು ಚಿತ್ರರಂಗದ ಅಜ್ಜಿ ಎಂದೇ ಹೆಸರು.. ಸುಮಾರು 500 ಕ್ಕು ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ ಇವರು. 83 ವರ್ಷದ ಈ ನಟಿ ಸ್ಲಂ ಏರಿಯಾದಲ್ಲಿ ವಾಸಿಸುತ್ತಿದ್ದಾರೆ.. ಒಂದು ಕಾಲದಲ್ಲಿ ರಾಣಿಯಾಗಿ ಬದುಕುತ್ತಿದ್ದ ರಂಗಮಲ್ ಈ ಕೆಟ್ಟ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಕಾಲ ಕಳೆದಂತೆ ವಯಸ್ಸಾದ ರಂಗಮಲ್ ಗೆ ಅವಕಾಶಗಳು ಬರಲಿಲ್ಲಾ.. ತನಗೆಂದು ಒಂದು ರೂಪಾಯಿ ಸಹ ಇಟ್ಟುಕೊಳ್ಳಲಿಲ್ಲಾ. ದುಡಿದ ಎಲ್ಲಾ ಮಕ್ಕಳಿಗೆ ಕೊಟ್ಟು ಮೋಸ ಹೋದರು.. ಈಗ ಒಂದು ಹೊತ್ತಿನ ಊಟಕ್ಕಾಗಿ ಮರೀನಾ ಬೀಚ್ ಬಳಿಯ ಬೀದಿಯಲ್ಲಿ ಕರ್ಚೀಪ್ ಮತ್ತು ಇನ್ನಿತರ ವಸ್ತುಗಳನ್ನು ಮಾರಾಟ ಮಾಡಿ ಈಗ ಜೀವನ ಸಾಗಿಸುತ್ತಿದ್ದಾರೆ.

[widget id=”custom_html-3″]

ಮೀಡಿಯಾ ಜೊತೆ ಮಾತನಾಡಿದ ರಂಗಮಲ್ ನಾನು ಎಮ್ ಜಿ ಆರ್ ಕಾಲದಿಂದಲೂ ನಟಿಸುತ್ತಿದ್ದೇನೆ.. ದುಡಿದ ಹಣ ಮಕ್ಕಳಿಗೆ ಕೊಟ್ಟೆ. ಈಗ ಮಕ್ಕಳು ನನ್ನನ್ನು ಹೊರ ಹಾಕಿದ್ದಾರೆ.. ಒಂದು ಹೊತ್ತಿನ ಊಟಕ್ಕಾಗಿ ಏನೋ ಮಾಡಬೇಕು ಅಲ್ಲವೇ. ಅದಕ್ಕಾಗಿ ಕರ್ಚೀಪ್ ಮಾರಿ ದಿನಕ್ಕೆ 50 ರಿಂದ 100 ರೂಪಾಯಿ ಹಣವನ್ನು ಸಂಪಾದನೆ ಮಾಡುತ್ತಿದ್ದೇನೆ ಎಂದು ಹೇಳಿ ಕಣ್ಣೀರು ಹಾಕಿದರು ರಂಗಮಲ್.. ನಟಿ ರಂಗಮಲ್ ಅವರು ಕಣ್ಣೀರು ಹಾಕಿದ್ದು ತನ್ನ ಸ್ಥಿತಿಯನ್ನು ಕಂಡು ಅಲ್ಲಾ. ಮಕ್ಕಳಿಂದ ಮೋಸ ಹೋಗಿದ್ದಕ್ಕಾಗಿ. ನಾನು 500 ಚಿತ್ರಗಳಲ್ಲಿ ನಟಿಸಿದ್ದೇನೆ ಎಂದು ಸುಮ್ಮನೆ ಕೂರದೇ ಅವರಿವರ ಬಳಿ ಭಿಕ್ಷೆ ಬೇಡದೇ ಕರ್ಚೀಪ್ ಮಾರುತ್ತಾ ಇರುವ ಸ್ಥಿತಿಯನ್ನು ಒಪ್ಪಿಕೊಂಡು ಜೀವನ ಸಾಗಿಸುತ್ತಿದ್ದಾರೆ..