Advertisements

ಬೆಳೆ ಹಾಕಲು ನೇಗಿಲು ಹೊಡಿತಿದ್ದಾಗ ಭೂಮಿಯಿಂದ ಹೊರಬಂದಿದ್ದು ಏನು ಗೊತ್ತಾ? ಕುಣಿದು ಕುಪ್ಪಳಿಸಿದ ರೈತ..

Kannada Mahiti

ನಮಸ್ತೆ ಸ್ನೇಹಿತರೆ, ಭೂಮಿ ಒಂದು ರೀತಿಯ ಸ್ವಿಸ್ ಬ್ಯಾಂಕ್ ಇದ್ದ ಹಾಗೆ.. ನಾವು ಭೂಮಿಯಲ್ಲಿ ಏನಾದ್ರೂ ಬಚ್ಚಿಟ್ಟು ನೂರು ವರ್ಷಗಳ ನಂತರ ಅದನ್ನು ಆಚೆ ತೆಗೆಯಬಹುದು. ಆದರೆ ಬಚ್ಚಿಟ್ಟ ಸ್ಥಳ ಗೊತ್ತಿರಬೇಕು.. ಅಷ್ಟೇ.. ಈಗೆ ಕೆಲವೊಮ್ಮೆ ದೊಡ್ಡ ದೊಡ್ಡ ನಿಧಿಗಳು ಭೂಮಿಯಲ್ಲಿ ಸಿಗುತ್ತದೆ‌. ಅದು ಯಾವಾಗ ಸಿಗುತ್ತೆ, ಎಲ್ಲಿ ಸಿಗುತ್ತೆ ಅನ್ನೋದು ಮಾತ್ರ ಗೊತ್ತಿರಲ್ಲ.. ಈಗ ಒಂದಷ್ಟು ಮಳೆ ಬಿದ್ದಿರುವುದರಿಂದ ಜಮೀನನ್ನು ಉಳುಮೆ ಮಾಡಿ ಬೆಳೆ ಬೆಳೆಯೋಣ ಎಂದು ಒಬ್ಬ ರೈತ ನೇಗಿಲು ಹೊಡೆಯುತ್ತಿದ್ದ. ಆಗ ಆತನಿಗೆ ಭೂಮಿಯಲ್ಲಿ ಕಾಣಿಸಿದ್ದು ಏನು ಗೊತ್ತಾ?

Advertisements

ತೆಲಂಗಾಣ ರಾಜ್ಯದ ವಿಕಾರಾಬಾದ್ ಜಿಲ್ಲೆಯ ಸುಲ್ತಾನ್ ಪುರದಲ್ಲಿ ಒಬ್ಬ ರೈತ ತನ್ನಲ್ಲಿ ಉಳಿತಾಯ ಮಾಡಿಕೊಂಡಿದ್ದ ಎಲ್ಲಾ ಹಣವನ್ನು ಕೊಟ್ಟು ಎರಡು ವರ್ಷದ ಹಿಂದೆ ಒಂದಷ್ಟು ಜಮೀನನ್ನು ಖರೀದಿ ಮಾಡಿದ್ದ ಹಾಗೆ ಎರಡು ವರ್ಷದಿಂದ ಆ ಜಮೀನಿನಲ್ಲಿ ರಾಗಿ, ಶೆಂಗಾ ಬೆಳೆಯನ್ನು ತೆಗೆದಿದ್ದ. ಹಾಗೆ ಈ ವರ್ಷ ಕೂಡ ಬೆಳೆಯನ್ನು ಹಾಕೋಣ ಎಂದು ಜಮೀನಿನಲ್ಲಿ ನೇಗಿಲು ಹೊಡೆಯುತ್ತಿದ್ದ.. ಆಗ ಸಡನ್ನಾಗಿ ರೈತನಿಗೆ ಆಶ್ಚರ್ಯ. ಅಲ್ಲಿ ಕಾಣಿಸಿದ್ದು ಏನು ಗೊತ್ತಾ? ರೈತನ ನೇಗಿಲಿಗೆ ಸಿಕ್ಕ ಎರಡು ಮಡಿಕೆಗಳು ಭೂಮಿಯಿಂದ ಆಚೆ ಬಂದವು.‌. ಓ ಇದು ಬಚ್ಚಿಟ್ಟಿರುವ ನಿಧಿ ಇರಬೇಕು ಎಂದು ಭಾವಿಸಿದ ರೈತ ಜೋಪಾನವಾಗಿ ಮಡಕೆಗಳನ್ನು ಭೂಮಿಯಿಂದ ಆಚೆ ತೆಗೆದು ಹೊಳಗೆ ಏನಿದೆ ಎಂದು ನೋಡಿದ ರೈತನಿಗೆ ಇನ್ನಷ್ಟು ಆಶ್ಚರ್ಯ.

ಕಾರಣ ಎರಡು ಮಡಿಕೆಗಳಲ್ಲಿ ಚಿನ್ನ ಹಾಗು ಬೆಳ್ಳಿಯ ಆಭರಣಗಳು ಇದ್ದವು‌‌.. ರೈತನ ಮನಸ್ಸಿನಲ್ಲಿ ಸಂತೋಷ, ಅದರ ಜೊತೆ ಭಯ. ಕೊನೆಗೆ ಒಂದು ದೊಡ್ಡ ನಿರ್ಧಾರ ಮಾಡಿದ ರೈತ ಭೂಮಿಯಲ್ಲಿ ಸಿಕ್ಕ ಈ ಬಂಗಾರ ನನ್ನದಲ್ಲ ಹಾಗೆ ಇಲ್ಲ ಸಲ್ಲದ ಕಷ್ಟಗಳು ಯಾಕೆ ಎಂದು ಭಾವಿಸಿ ತಕ್ಷಣ ಸರ್ಕಾರಿ ಅಧಿಕಾರಿಗಳಿಗೆ ಮಾಹಿತಿ ಕೊಟ್ಟಿದ್ದಾರೆ. ಕೂಡಲೇ ಅಲ್ಲಿಗೆ ಬಂದ ಕಂದಾಯ ಅಧಿಕಾರಿಗಳು ಎರಡು ಮಡಿಕೆಯಲ್ಲಿದ್ದ ಚಿನ್ನದ ಆಭರಣಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡು ಸ್ಥಳದ ಮಾಹಿತಿಯನ್ನು ಪುರಾತತ್ವ ಇಲಾಖೆಯವರಿಗೆ ತಿಳಿಸಿದ್ದಾರೆ..

ಹಿಂದಿನ ಕಾಲದಲ್ಲಿ ಕ’ಳ್ಳರ ಕಾ’ಟದಿಂದ ಹಾಗು ಬೇರೆ ರಾಜ್ಯಗಳ ಆಕ್ರಮಣದ ಭಯದಿಂದ ಜನ ತಮ್ಮಲ್ಲಿದ್ದ ಚಿನ್ನವನ್ನು ಭೂಮಿಯಲ್ಲಿ ಬಚ್ಚಿಡುತ್ತಿದ್ದರು. ನಂತರ ಹಲವಾರು ಕಾರಣಗಳಿಂದ ಅದನ್ನು ಆಚೆ ತೆಗೆಯದೇ ಭೂಮಿಯಲ್ಲಿ ಹುಳಿದುಕೊಂಡಿದ್ದು ಹಾಗಾಗ ಈ ರೀತಿ ಜನರಿಗೆ ಸಿಗುತ್ತಿದೆ.. ಸರ್ಕರದ ನಿಯಮವನ್ನು ಪಾಲಿಸಿ ತನ್ನದಲ್ಲದ ಬಂಗಾರದ ಬಗ್ಗೆ ಆಸೆ ಪಡದೇ ತನಗೆ ಸಿಕ್ಕ ಬಂಗಾರವನ್ನು ಸರ್ಕಾರಕ್ಕೆ ಒಪ್ಪಿಸಿದ ರೈತನ ನಿಯತ್ತಿನ ಬಗ್ಗೆ ನೀವೇನ್ ಹೇಳ್ತೀರಾ..