Advertisements

ಹೊಸ ತಾಯಿಗೂ ಸ’ತ್ತು ಹೋದ ತಾಯಿಗೂ ಏನು ವ್ಯತ್ಯಾಸ ಅಂತ ತಂದೆ ಕೇಳಿದ ಪ್ರಶ್ನೆಗೆ 8 ವರ್ಷದ ಮಗ ಏನು ಉತ್ತರ ಕೊಟ್ಟಿದ್ದಾನೆ ಗೊತ್ತಾ? ಕಣ್ಣೀರು ಬರುತ್ತೆ..

Kannada Mahiti

ನಮಸ್ತೆ ಸ್ನೇಹಿತರೆ, ಹೊಸ ತಾಯಿಗೂ ಹಳೆ ತಾಯಿಗೂ ಇರುವ ವ್ಯತ್ಯಾಸವೇನು ಎಂದು ತಂದೆ ಕೇಳಿದಾಗ ಎಂಟು ವರ್ಷದ ಮಗ ಏನೆಂದು ಉತ್ತರ ಕೊಟ್ಟಿದ್ದಾನೆ ಗೊತ್ತಾ? ಎಂಟು ವರ್ಷದ ಬಾಲಕನ ತಾಯಿ ನಿ’ಧನರಾಗುತ್ತಾರೆ.. ನಂತರ ತಂದೆ ಇನ್ನೊಂದು ಮದುವೆಯಾಗುತ್ತಾರೆ. ಒಂದು ದಿನ ಅವರ ತಂದೆ ಮಗನ ಜೊತೆಗೆ ಮಾತನಾಡುತ್ತ ಮಗನೇ ತೀರಿಕೊಂಡ ಅಮ್ಮನಿಗೂ ಮತ್ತು ಹೊಸ ಅಮ್ಮನಿಗೆ ಇರುವ ವ್ಯತ್ಯಾಸ ಏನೆಂದು ಕೇಳುತ್ತಾನೆ.. ಆಗ ಮಗ ಈ ರೀತಿ ತಂದೆಗೆ ಉತ್ತರವನ್ನು ಕೊಡುತ್ತಾನೆ.. ಅಪ್ಪ ಹೊಸ ಅಮ್ಮ ನಿಜ ಹಳೆ ಅಮ್ಮ ಸುಳ್ಳು ಎಂದು ತಂದೆಗೆ ಹೇಳುತ್ತಾನೆ..

Advertisements

ಇದನ್ನು ಕೇಳಿದ ತಂದೆಗೆ ಆಶ್ಚರ್ಯವಾಗಿ ಇದೇನಿದು ಈ ರೀತಿ ಉತ್ತರ ಕೊಡುತ್ತಿದ್ದೀಯಾ ಎಂದು ಮಗನಿಗೆ ಕೇಳುತ್ತಾರೆ.. ಆಗ ಮಗ ತಂದೆಗೆ ತಾನು ಹೇಳಿದ ಉತ್ತರವನ್ನು ವಿವರಿಸುತ್ತಾನೆ. ನಾನು ಮನೆಯಲ್ಲಿ ಯಾವಾಗಲಾದರೂ ತುಂಟಾಟ ಮಾಡಿದರೆ ನನ್ನ ಅಮ್ಮ ಹೇಳುತ್ತಿದ್ದಳೂ ನೀನು ಹೀಗೆ ಮಾಡುತ್ತಿದ್ದರೆ.. ನಿನಗೆ ಊಟ ಕೊಡೋದಿಲ್ಲ ಅಂತ ಆದರೆ ನಾನು ತುಂಟಾಟ ಮಾಡುತ್ತಿದ್ದರೂ ಅಮ್ಮ ನನ್ನನ್ನು ಕರೆದುಕೊಂಡು ಹೋಗಿ ಕೂರಿಸಿಕೊಂಡು ಊಟ ಮಾಡಿಸುತ್ತಿದ್ದಳು.. ಆದರೆ ಈಗ ಇರುವ ಹೊಸ ಅಮ್ಮನು ಸಹ ತುಂಟಾಟ ಮಾಡಿದರೆ ನಿನಗೆ ಊಟ ಹಾಕೋದಿಲ್ಲ ಅಂತಾರೆ.. ಆದರೆ ಈ ಹೊಸ ಅಮ್ಮ ಮೂರು ದಿನಗಳಿಂದಲೂ ನಿಜವಾಗಿ ಊಟ ಕೊಟ್ಟಿಲ್ಲ ಅಪ್ಪ, ಅದಕ್ಕೆ ಆ ಹಳೆ ಅಮ್ಮ ಸುಳ್ಳು. ಈ ಹೊಸ ಅಮ್ಮ ನಿಜ ಎಂದು ಹೇಳುತ್ತಾನೆ..

ಇದನ್ನು ಕೇಳಿದ ತಂದೆಗೆ ಏನು ಹೇಳುವುದು ಎಂದು ಗೊತ್ತಾಗದೆ ಮಾತೆ ಬರದಂತೆ ಹಾಗಿದೆ..ಅದಕ್ಕೆನೇ ಹಿರಿಯರು ಹೇಳಿರೋದು, ಮಲ ತಾಯಿ ಯಾವತ್ತಿಗೂ ಹೆತ್ತ ತಾಯಿ ಆಗೋದಕ್ಕೆ ಆಗೋದಿಲ್ಲ ಅಂತ. ಜನ್ಮ ಕೊಟ್ಟ ತಾಯಿ ತನ್ನ ಮಕ್ಕಳನ್ನ ಎಷ್ಟೇ ಬೈದರು ಸಂಕಟ ಆಗುವುಡ್ ಮಾತ್ರ ಆ ತಾಯಿಗೇನೇ. ಹಾಗಾಗಿಯೇ ತನ್ನ ಮಕ್ಕಳ ಮೇಲೆ ಮುನಿಸಿಕೊಳ್ಳದೆ ಮತ್ತೆ ಪ್ರೀತಿಯಿಂದ ಮುದ್ದು ಮಾಡಿ ಅವರ ಲಾಲನೆ ಪಾಲನೆ ಮಾಡುತ್ತಾರೆ. ಅದರಿಂದಲೇ ತಾಯಿಗೆ ಕ್ಷಮಯಾ ಧರಿತ್ರಿ ಎಂದು ಕರೆಯುವುದು. ಸ್ನೇಹಿತರೆ ಈ ಘ’ಟನೆಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯ ತಿಳಿಸಿ.