Advertisements

ಈ ವ್ಯಕ್ತಿಯನ್ನು ಕಂಡರೆ ಇಂದಿರಾಗಾಂಧಿ ಕೂಡ ಹೆದರುತ್ತಿದ್ದರು ! ಭಾರತ ಕಂಡ ಈ ವೀರ ಸೇನಾನಿ ಯಾರು ಗೊತ್ತಾ ?

Inspire Uncategorized

ಬಾಂಗ್ಲಾದೇಶದ ಸ್ವಾತಂತ್ರ್ಯದ ಹಿಂದೆ ಇದ್ದ ಮಹಾ ವ್ಯಕ್ತಿ ಇವರು. 1914ರಲ್ಲಿ ಅಮೃತಸರದ ಪಾರ್ಸಿ ಕುಟುಂಬವೊಂದರಲ್ಲಿ ಇವರ ಜನನವಾಯಿತು. ಇವರೇ ಹೆಸರೇ ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣಿಕ್ ಷಾ. ಇವರು ಭಾರತೀಯ ಸೈನ್ಯಕ್ಕೆ ಸೇರುವುದು ಇವರ ತಂದೆಗೆ ಇಷ್ಟವಿರಲಿಲ್ಲ. ತಂದೆಯ ವಿರುದ್ಧವಾಗಿಯೇ ಮಾಣಿಕ್ ಷಾ ಸೈನ್ಯಕ್ಕೆ ಸೇರುತ್ತಾರೆ. ಎರಡನೇ ಮಾಹಾಯುದ್ದದ ಸಮಯದಲ್ಲಿ ಇವರು ಕ್ಯಾಪ್ಟನ್ ಪದವಿಯನ್ನ ಹೊಂದಿದ್ದರು.

Advertisements

ಇವರಿಗೆ ಬರ್ಮಾದಲ್ಲಿ ಜಪಾನ್ ಸೈನ್ಯದಿಂದ ಸಿಟ್ಟಿಂಗ್ ಸೇತುವೆಯನ್ನ ಕಾಪಾಡುವ ಜವಾಬ್ದಾರಿಯನ್ನ ಕೊಡಲಾಗಿತ್ತು. ಇದನ್ನ ಇವರ ಕಂಪೆನಿ ಬಹಳ ಪರಾಕ್ರಮದಿಂದ ಹೋರಾಡಿ ರಕ್ಷಣೆ ಮಾಡಿತ್ತು. ಈ ಸಮಯದಲ್ಲಿ ಮಾಣಿಕ್ ಷಾ ಅವರು ವೀರಾವೇಶದಿಂದ ಹೋರಾಡಿದ್ದರು. ಸ್ವಾತಂತ್ರ್ಯದ ನಂತರ ಮಾಣಿಕ್ ಷಾ ಅವರು ಪಂಜಾಬ್ ರೆಜಿಮೆಂಟ್ ಗೆ ವರ್ಗಗೊಂಡರು. ನಂತರ ಘುರ್ಖಾ ರೆಜಿಮೆಂಟ್ ಅನ್ನು ಮಾಣಿಕ್ ಷಾ ಅವರ ಸುಪರ್ದಿಗೆ ಕೊಡಲಾಯಿತು.1962ರಲ್ಲಿ ಭಾರತ ಚೀನಾದೊಂದಿಗೆ, ಅರುಣಾಚಲ ಪ್ರದೇಶದಲ್ಲಿ ಯುದ್ಧ ಮಾಡುತಿತ್ತು. ಆಗ ಪ್ರಧಾನಿಯಾಗಿದ್ದ ನೆಹರೂ ಅವರು ಸ್ಯಾಮ್ ಮಾಣಿಕ್ ಷಾ ಅವರನ್ನ 4ನೇ ಕೋರ್ ಜನರಲ್ ಕಮಾಂಡಿಂಗ್ ಆಫೀಸರ್ ಆಗಿ ನೇಮಿಸಿದರು.

ಆಗ ಅವರ ಮೊದಲ ಆದೇಶ ಏನಿತ್ತು ಎಂದರೆ ಎಲ್ಲಿಯ ತನಕ ಕಮಾಂಡರ್ ನ ಆದೇಶ ಬರುವುದಿಲ್ಲವೋ ಅಲ್ಲಿಯ ತನಕ ಮೈದಾನ ಬಿಟ್ಟು ಓಡ ಬಾರದು ಎಂದು. ಮಾಣಿಕ್ ಷಾ ಅವರು ಅಲ್ಲಿಗೆ ಪೋಸ್ಟಿಂಗ್ ಆದ ಬಳಿಕ ಚೀನಾ ಸೈನ್ಯವು ಒಂದು ಇಂಚು ಭಾರತದ ಭೂಮಿಯನ್ನ ಕಬಳಿಸಲು ಸಾಧ್ಯವಾಗದೆ ಯುದ್ಧ ವಿರಾಮ ಘೋಷಣೆ ಮಾಡಿತು. 8 ಜೂನ್ 1969ರಲ್ಲಿ ಮಾಣಿಕ್ ಷಾ ಅವರು ಘುರ್ಖಾ ರೆಜಿಮೆಂಟ್ ನ ಮೊದಲ ಅಧಿಕಾರಿ 7ನೇ ಸೇನಾ ಪ್ರಮುಖರಾಗಿ ನೇಮಕಗೊಂಡರು. ಬಾಂಗ್ಲಾ ಯುದ್ಧದ ಸಮಯದಲ್ಲಿ ಮಾಣಿಕ್ ಷಾ ಅವರು ಸೈನ್ಯದ ಪ್ರಮುಖರೂ ಆಗಿದ್ದರು.

ಎಲ್ಲವೂ ಪ್ರಧಾನಮಂತ್ರಿ ಕಛೇರಿಯಿಂದ ನಿರ್ಣಯವಾಗುವುದಾದರೆ ದೇಶಕ್ಕೆ ಮಿಲಿಟರಿಯೇಕೆ ಬೇಕು ಎಂದು ಹೇಳಿದ್ದವರು ಮಾಣಿಕ್ ಷಾ. ಆಗ ಇಂದಿರಾ ಗಾಂಧಿಯವರು ಪ್ರಧಾನಿಯಾಗಿದ್ದರು. ಎಂತೆಂತಾ ದೊಡ್ಡವರೇ ಇಂದಿರಾ ಗಾಂಧಿಯವರ ಮುಂದೆ ಕೈಕಟ್ಟಿ ನಿಂತುಕೊಳ್ಳುವ ಸ್ಥಿತಿಯಿದ್ದಾಗ, ಯಾವುದೊ ಒಂದು ವದಂತಿಯೂ ಬಗ್ಗೆ ಮಾಣಿಕ್ ಷಾ ಅವರಲ್ಲಿ ಇಂದಿರಾ ಗಾಂಧಿ ಕೇಳಿದಾಗ ನೀವು ನಿಮ್ಮ ಕೆಲಸ ಮಾಡಿ, ನಾವು ನಮ್ಮ ಕೆಲಸ ಮಾಡಲು ಬಿಡಿ. ನಾವು ನಿಮ್ಮ ರಾಜಕೀಯದಲ್ಲಿ ತಲೆ ಹಾಕುವುದಿಲ್ಲ. ನೀವು ಸೇನೆಯ ವಿಚಾರಕ್ಕೆ ತಲೆ ಹಾಕಬೇಡಿ. ದೇಶಕ್ಕೆ ಒಬ್ಬ ಮುಖಂಡ ಇದ್ದರೆ ಸಾಕು. ಅವರಿಂದ ಮಾತ್ರ ನನಗೆ ಆದೇಶ ಬರಬೇಕು. ಬೇರೆ ಬೇರೆ ಸಚಿವಾಲಯಗಳಿಂದ ಆದೇಶಗಳು ಬರುವುದು ಬೇಡ. ಎಂದು ಆಗಿನ ಪ್ರಧಾನಿ ಇಂದಿರಾಗಾಂಧಿಯವರಿಗೆ ಹೇಳಿದ್ದ ಭಾರತದ ಖಡಕ್ ಸೇನಾನಿ.

ಮಾಣಿಕ್ ಷಾ ಅವರನ್ನ ನೋಡಿ ಆಗಿನ ಪ್ರಧಾನಿ ಇಂದಿರಾ ಗಾಂಧಿಯವರು ಕೂಡ ಭಯಪಡುತ್ತಿದ್ದರಂತೆ. ಇನ್ನು ಮಾಣಿಕ್ ಷಾ ಅವರು ಇಂದಿರಾ ಗಾಂಧಿ ಅವರನ್ನ ಸ್ವೀಟ್ ಹಾರ್ಟ್ ಎಂದು ಕರೆಯುತ್ತಿದ್ದರಂತೆ. 96 ಸಾವಿರ ಪಾಕಿಸ್ತಾನಿ ಸೈನಿಕರನ್ನ ಭಾರತದ ಮುಂದೆ ಮಂಡಿ ಉರಿಸಿದ್ದ ವೀರ ಸೇನಾನಿ ಇವರು. ಇದು ಮಾಣಿಕ್ ಷಾ ಅವರನ್ನ ಉತ್ತುಂಗಕ್ಕೆ ಏರಿಸಿತ್ತು. 1973ರಲ್ಲಿ ಭಾರತವು ಸ್ಯಾಮ್ ಮಾಣಿಕ್ ಷಾ ಅವರಿಗೆ ಫೀಲ್ಡ್ ಮಾರ್ಷಲ್ ಪದವಿ ಕೊಟ್ಟು ಗೌರವಿಸಿತ್ತು. “ಫೀಲ್ಡ್ ಮಾರ್ಷಲ್” ಎಂದರೆ ಯಾವತ್ತೂ ನಿವೃತ್ತಿ ಆಗುವುದಿಲ್ಲ. ಇವರು ಜೀವನ ಪರ್ಯಂತ ಸೈನ್ಯದ ಒಬ್ಬ ಅಧಿಕಾರಿಯಾಗಿರುತ್ತಾರೆ. ಇನ್ನು ಮಾಣಿಕ್ ಷಾ ಅವರು 27 ಜೂನ್ 2008 ರಂದು ತಮ್ಮ ಇಹಲೋಕದ ಯಾತ್ರೆ ಮುಗಿಸುತ್ತಾರೆ.