Advertisements

ಮನೆಯ ಕಿಟಕಿ ಹಾಕದೆ ಊರಿಗೆ ಹೋಗಿದ್ದ ಈತ 5 ತಿಂಗಳ ನಂತರ ಬಂದವನಿಗೆ ಕಾದಿತ್ತು ಶಾಕ್. ಏನಾಗಿತ್ತು ಗೊತ್ತಾ?

News

ನಮಸ್ತೆ ಸ್ನೇಹಿತರೆ ಕೊರೊ’ನಾ ಪ್ರಾರಂಭವಾಗಿ ಲಾಕ್ ಡೌನ್ ಘೋಷಣೆ ಮಾಡಿದ ನಂತರ ಎಲ್ಲರೂ ಕಾತುರದಿಂದ ತಮ್ಮ ಊರುಗಳಿಗೆ ಧಾವಿಸಿದ್ದರು. ಇನ್ನೂ ಲಂಡನ್ ನಲ್ಲಿ ನೆಲೆಸಿದ್ದ ಒಬ್ಬ ಸ್ಟೂಡೆಂಟ್ ತಂದೆ ತಾಯಿಯ ಒತ್ತಾಯಕ್ಕೆ ಊರಿಗೆ ಬಂದಿದ್ದ. ಆದರೆ ಮತ್ತೆ ಆ ಹುಡುಗ ಐದು ತಿಂಗಳು ಕಳೆದ ನಂತರ ಮರಳಿ ಬಂದ ಆತನಿಗೆ ಮನೆಯಲ್ಲಿ ಕಾದಿತ್ತು ಶಾಕ್.

Advertisements

ಒಲುವಜಾರ್ಜ್ ಜಾನ್ ಸನ್ 20 ವರ್ಷದ ಹುಡುಗನಾಗಿದ್ದು. ಒಂದು ಪ್ಲಾಟ್ ನಲ್ಲಿ ಉಳಿದುಕೊಂಡಿದ್ದ. ಕರೋ’ನಾ ಇದ್ದದ್ದರಿಂದ ಕಾಲೇಜ್ ಗಳು ಕೂಡ ಆ ಸಮಯದಲ್ಲಿ ಇರಲಿಲ್ಲ. ಇನ್ನೂ ಮನೆಯ ಪೋಷಕರ ಒತ್ತಾಯದ ಮೇರೆಗೆ ಈ ಹುಡುಗ ಆತುರದಿಂದ ಊರಿಗೆ ಧಾವಿಸಿದ್ದ. ಆತುರದಲ್ಲಿ ಉಳಿದುಕೊಂಡಿದ್ದ ಪ್ಲಾಟ್ ನಲ್ಲಿ ಕೆಲವೊಂದು ವಸ್ತುಗಳನ್ನು ಮರೆತು ಅಲ್ಲೇ ಬಿಟ್ಟು ಹೋಗಿದ್ದ‌. ಇನ್ನೂ ಈ ಹುಡುಗ ಮಾಡಿದ ಎಡವಟ್ಟೇನೆಂದರೆ ಕಿಟಕಿ ಒಂದನ್ನು ಓಪನ್ ಮಾಡಿ ಹಾಗೆ ಬಿಟ್ಬು ಬಂದಿದ್ದ.

ಇನ್ನೂ ಇದು ಆದ ನಂತರ. ಕಟ್ಟಡವನ್ನು ನೋಡಿಕೊಳ್ಳುತಿದ್ದವರು ಈತನಿಗೆ ಪ್ಲಾಟ್ ಕೆಲವೊಂದು ಪೋಟೊಗಳನ್ನು ಈ ಮೇಲ್ ಮೂಲಕ ಕಳುಹಿಸಿದ್ದರು. ಇನ್ನೂ ಇ ಮೇಲ್ ನಲ್ಲಿ ಬಂದಿದ್ದ ಚಿತ್ರಗಳನ್ನು ನೋಡಿದ ಈ ಹುಡುಗ ಶಾ’ಕ್ ಆಗಿದ್ದಾನೆ‌. ಈತ ಓಪನ್ ಮಾಡಿದ್ದ ಕಿಟಿಕಿಯ ಮೂಲಕ ಇಡೀ ಪಾರಿವಳ ಕುಟುಂಬ ನುಗ್ಗಿ ಪ್ಲಾಟ್ ಅನ್ನು ಆವರಿಸಿಕೊಂಡಿದ್ದವು. ಈ ಪ್ಲಾಟ್ ತುಂಬಾ ಹಿಕ್ಕೆಗಳ ದೊಡ್ಡ ಪದರವೇ ಇತ್ತು.

ಅಷ್ಟೇ ಅಲ್ಲದೆ ಕಿಚನ್ ನ ಸಿಂಕ್ ನಲ್ಲಿ ಪಾರಿವಾಳಗಳ ಮೊಟ್ಟೆಗಳಿದ್ದವು. ವಸ್ತುಗಳ ಮೇಲೆಲ್ಲ ಕಸ ಕಡ್ಡಿ ಪುಕ್ಕ ಎಲ್ಲಾ ತುಂಬಿಕೊಂಡು ಈ ಪ್ಲಾಟ್ ಅವಾಂತರವಾಗಿತ್ತು. ವಿಚಿತ್ರವಾಗಿ ಶಬ್ದ ಬರುತ್ತಿದ್ದರಿಂದ ಅಲ್ಲಿ ಇದ್ದವರು ಪರಿಶೀಲನೆ ಮಾಡಿ ನೋಡಿದಾಗ ಗೊತ್ತಾಗಿದೆ. ನಂತರ ಜಾನ್ ಸಾನ್ ಈ ಪ್ಲಾಟ್ ಕ್ಲೀನ್ ಆದ ನಂತರ ನಾನು ಈ ಮನೆಗೆ ಹೋಗುತ್ತೇನೆ ಎಂದು ತಿಳಿಸಿದ್ದಾನೆ.

ಸ್ನೇಹಿತರೆ ಪಕ್ಷಿಗಳಿಗೆ ಏನು ನಿಯಮ ಇಲ್ಲ ಇಲ್ಲೇ ಜೀವನ ಮಾಡಬೇಕೆನ್ನುವುದು ಅವುಗಳಿಗೆ ಎಲ್ಲಿ ಜಾಗ ಸಿಗುತ್ತದೆಯೋ ಅಲ್ಲಿ ತಮ್ಮ ಬದುಕನ್ನು ಕಟ್ಟಿಕೊಳ್ಳುತ್ತವೆ. ಮಾನವ ಜೀವಿಗಳು ಅವುಗಳಿಗೆ ತೊಂದರೆ ಕೊಡದೆ ಇದ್ದರೆ ಅಷ್ಟೇ ಸಾಕು.