Advertisements

ವರ್ಷಗಳೇ ಅಲೆದಾಡಿದರು ಯಾವ ಅಧಿಕಾರಿಯೂ ಸಹಾಯ ಮಾಡಲಿಲ್ಲ.. ಈಗ ಈ ಬಡ ರೈತನ ಐಡಿಯಾ ಇಡೀ ಪ್ರಪಂಚ ವೈರಲ್! ಮಾಡಿದ್ದೇನು ಗೊತ್ತಾ?

Inspire Kannada Mahiti

ನಮಸ್ತೆ ಸ್ನೇಹಿತರೆ, ಅರಣ್ಯದಲ್ಲಿ ಕೊಂ’ದು ಬದುಕುತ್ತಿದ್ದ ಮಾನವ ಈ ಭೂಮಿ ಮೇಲೆ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಕಂಡುಕೊಂಡಿದ್ದೆ ವ್ಯವಸಾಯ.. ಮೊದಲು ನೈಸರ್ಗಿಕವಾಗಿ ಕೃಷಿ ಮಾಡುತ್ತಿದ್ದವ ನಂತರ ಯಾಂತ್ರಿಕೃತ ಕೃಷಿಗೆ ಮುಂದಾದ. ಆನಂತರ ಹುಟ್ಟಿಕೊಂಡಿದ್ದೆ ಬೋರ್ವೆಲ್ ಮೋಟರ್ಸ್.. ದೊಡ್ಡ ದೊಡ್ಡ ಯಂತ್ರಗಳು. ಇಲ್ಲೊಬ್ಬ ಬಡ ರೈತ ತನ್ನ ಬುದ್ದಿವಂತಿಕೆಯನ್ನು ಉಪಯೋಗಿಸಿ ತನ್ನ ಐಡಿಯಾದಿಂದ ಇವತ್ತು ಕೇಂದ್ರ ಬಿಂದುವಾಗಿದ್ದಾರೆ.. ಅಷ್ಟಕ್ಕೂ ಈ ರೈತ ಮಾಡಿದ ಕೆಲಸ ಆದ್ರೂ ಏನು ಎಂಬುದನ್ನು ನೋಡೊಣ. ಒರಿಸ್ಸಾ ರಾಜ್ಯದ ಮಯೂರ್ ಬಂದ್ ಜಿಲ್ಲೆಯ ಈ ರೈತನಿಗೆ ಮೂರು ಎಕರೆ ಜಮೀನು ಇತ್ತು ಅದರಲ್ಲಿ..

Advertisements

ಮಳೆಗಾಲದಲ್ಲಿ ಬೆಳೆ ಹಾಕಿದರು ಕೈಗೆ ಮಾತ್ರ ಬಿಡಿಗಾಸು ಸಿಗುತ್ತಿರಲಿಲ್ಲ. ಜೀವನ ಸಾಕಾಗಿ ಹೋಗಿ ಮಕ್ಕಳನ್ನ ಸಾಕೋದೆ ಕಷ್ಟ ಆಗಿತ್ತು. ಆದರೆ ಈ ರೈತನ ಜಮೀನಿನಿಂದ ಸುಮಾರು ಎರಡು ಕಿಲೋಮೀಟರ್ ದೂರದಲ್ಲಿ ಒಂದು ಚಿಕ್ಕ ನದಿಯಿದ್ದು.. ಅಲ್ಲಿ ಯಾವಾಗಲೂ ನೀರು ಇರುತ್ತಿತ್ತು. ಆದರೆ ಎರಡು ಕಿಲೋಮೀಟರ್ ದೂರದ ಆ ನದಿಯಿಂದ ನೀರನ್ನು ತರುವುದು ಹೇಗೆ. ಆಗ ಜಿಲ್ಲೆಯ ಅಧಿಕಾರಿಗಳ ಬಳಿ ಹೋಗಿ.. ನನ್ನ ಹಾಗೂ ಇತರ ರೈತರಿಗೆ ನದಿಯ ನೀರು ಸಿಗುವ ಹಾಗೆ ವ್ಯವಸ್ಥೆ ಮಾಡಿಕೊಡಿ ಎಂದು ಕೇಳಿಕೊಳ್ಳುತ್ತಾರೆ‌. ಆದರೆ ವರ್ಷಗಳೇ ಅಲೆದಾಡಿದರು ಯಾವ ಅಧಿಕಾರಿಯೂ ಸಹಾಯ ಮಾಡಲಿಲ್ಲ..

ಆಗ ಧೈರ್ಯ ಮಾಡಿದ ಈ ರೈತ, ಒಂದು ಐಡಿಯಾ ಮಾಡಿಯೇ ಬಿಟ್ಟ.. ಗ್ರಾವಿಟಿ! ತೂಕದ ಸಮತೋಲನದ ಆಧಾರದ ಮೇಲೆ ಒಂದು ವಾಟರ್ ವೀಲ್ ತಯಾರಿಸಿಯೇ ಬಿಟ್ಟ. ಹಳೆಯ ಕಬ್ಬಿಣದ ರಾಡ್, ಒಂದಷ್ಟು ವುಡ್ ತೆಗೆದುಕೊಂಡು ಚಕ್ರ ರೆಡಿ ಮಾಡಿದ ರೈತ.. ಅದಕ್ಕೆ ಬಿಸಾಕಿದ ವಾಟರ್ ಬಾಟಲ್ ಗಳನ್ನು ಕಟ್ಟಿದ. ಹಾಗೆ ಈ ವಾಟರ್ ವೀಲನ್ನ ನದಿಯ ದಡದಲ್ಲಿ ನಿಲ್ಲಿಸಿದ.. ನೀರು ತುಂಬಿದ ವಾಟರ್ ಬಾಟಲ್ ಗಳು ಮೇಲೆ ಹೋದಂತೆ ಅದರ ತೂಕಕ್ಕೆ ಕೆಳಗಿನ ಕಾಲಿ ಬಾಟಲ್ ಗಳು.. ನೀರು ತುಂಬಿ ಮೇಲೆ ಹೋಗುತ್ತವೆ. ಆಗ ವಾಟರ್ ಬಾಟಲ್ ನ ನೀರು ಬಿದಿರಿನ ಮೇಲೆ ಬೀಳುವಂತೆ ಮಾಡಿ..

ಆ ಬಿದಿರಿನ ಮೂಲಕ ನೀರು ಜಮೀನಿಗೆ ಅರಿಯುವಂತೆ ಮಾಡಿದ್ದಾರೆ. ಈ ರೈತ.. ದಿನದ 24 ಘಂಟೆ ಸುತ್ತುವ ಈ ವಾಟರ್ ವೀಲ್ ಗೆ ಯಾವುದೇ ಕರೆಂಟ್ ಬೆಕಾಗಿಲ್ಲ. ತನ್ನ ಜಮೀನಿಗೆ ಮಾತ್ರ ಅಲ್ಲದೇ ಸುತ್ತಮುತ್ತಲಿನ ಇತರ ರೈತರ ಜಮೀನಿಗೂ ನೀರು ಬಿಡುತ್ತಿದ್ದಾರೆ ಈ ರೈತ.. ಈಗ ತಮ್ಮ ಜಮೀನಿನಲ್ಲಿ ಟೊಮ್ಯಾಟೊ, ಆಲೂಗಡ್ಡೆ, ಭತ್ತ.. ಈಗೆ ವರ್ಷ ಪೂರ್ತಿ ಬೆಳೆ ತೆಗೆಯುತ್ತಿದ್ದಾರೆ. ಎರಡನೇ ಕ್ಲಾಸ್ ಓದಿದ್ರೂ ತನ್ನ ಐಡಿಯಾ ಮೂಲಕ ಜೀವನವನ್ನ ಹಸಿರಾಗಿಸಿಕೊಂಡ ಈ ರೈತನ ಐಡಿಯಾಗೆ ಈಗ ಎಲ್ಲಾ ಕಡೆ ಪ್ರಶಂಸೆ ಹರಿದು ಬರುತ್ತಿದೆ. ಕರೆಂಟ್ ಇಲ್ಲದೇ, ಖರ್ಚು ಇಲ್ಲದೇ ನದಿಯಿಂದ 2 ಕಿಲೋಮೀಟರ್ ನೀರು ಅರಿಸುತ್ತಿರುವ ಈ ರೈತನ ಐಡಿಯಾ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.