Advertisements

ಲುಂಗಿ ಹಾಕಿಕೊಂಡು 5 ಸ್ಟಾರ್ ಹೋಟೆಲ್ ಗೆ ಹೋದ ರೈತನಿಗೆ ಮ್ಯಾನೇಜರ್ ಬೈದು ಅವಮಾನ ಮಾಡುತ್ತಾನೆ.. ಆಗ ರೈತ ಮಾಡಿದ್ದೇನು ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ನಮ್ಮ ಭಾರತ ದೇಶದಲ್ಲಿ ನಾವು ಯಾರಿಗೆ ಗೌರವ ಕೊಡ್ತಿವೋ ಗೊತ್ತಿಲ್ಲ ಆದರೆ ದೇಶ ಕಾಯುವ ಯೋದನಿಗೆ ಮತ್ತು ಅನ್ನ ಹಾಕುವ ರೈತರಿಗೆ ನಾವು ಗೌರವ ಕೊಡಲೇ ಬೇಕು.. ಏಕೆಂದರೆ ರೈತರು ಮತ್ತು ಸೈನಿಕರು ಇಲ್ಲದೇ ಹೋದರೆ ನಾವು ಯಾರೂ ಕೂಡ ಬದುಕಿರಲು ಸಾಧ್ಯವಿಲ್ಲ.. ಎಲ್ಲರೂ ಕೂಡ ನಮ್ಮ ರೈತರು, ಸೈನಿಕರು ಎಂದು ಹೇಳಿಕೊಳ್ಳುತ್ತಾ ಇರುತ್ತೇವೆ, ಆದರೆ ನಿಜ ಜೀವನದಲ್ಲಿ ಇದೇ ಗೌರವ ನಮ್ಮ ಜನರು ರೈತರಿಗೆ ಕೊಡುತ್ತಾರಾ ಎಂಬುದು ಯಾರಿಂದಲೂ ಹೇಳಲು ಸಾಧ್ಯವಿಲ್ಲ.. ಆಂಧ್ರಪ್ರದೇಶದ ವಿಜಯವಾಡ ಎಂಬ ಊರಿನಲ್ಲಿ 60 ವರ್ಷದ ಸುಕುಮಾರ್ ಎಂಬ ರೈತ ವಾಸ ಮಾಡುತ್ತಿದ್ದಾರೆ..

Advertisements

ಇನ್ನೂ ಈ ರೈತ 100 ಎಕರೆಯಲ್ಲಿ ವ್ಯವಸಾಯ ಮಾಡುತ್ತಿದ್ದು ಒಂದು ಉತ್ತಮ ಆರ್ಥಿಕ ಪರಿಸ್ಥಿತಿ ಹೊಂದಿದ್ದಾರೆ.. ಈ ರೈತನಿಗೆ ರೂಪ ಎಂಬ ಹೆಣ್ಣುಮಗಳಿದ್ದು ಈಕೆಯನ್ನು ವಿಶಾಖಪಟ್ಟಣಂ ಗೆ ಮದುವೆ ಮಾಡಿಕೊಟ್ಟಿದ್ದಾರೆ.. ಒಂದು ದಿನ ತನ್ನ ಮಗಳು ರೂಪ ಅವರನ್ನು ನೋಡಲು ಈ ರೈತ ವಿಜಯವಾಡದಿಂದ ವಿಶಾಖಪಟ್ಟಣಂ ಗೆ ಹೋಗಿದ್ದಾರೆ.. ಇನ್ನೂ ಈ ರೈತ ಹಳೆಯ ಶರ್ಟ್ ಮತ್ತು ಲುಂಗಿಯನ್ನು ಹಾಕಿಕೊಂಡಿರುತ್ತಾರೆ‌.‌. ಇನ್ನೂ ವಿಶಾಖಪಟ್ಟಣಂ ಗೆ ಬಂದು ಇಳಿದ ಸುಕುಮಾರ್ ಅವರಿಗೆ ಹೊಟ್ಟೆ ಹಸಿವು ಶುರುವಾಗುತ್ತದೆ.. ಆಗ ಅಲ್ಲೇ ಇದ್ದ ದೊಡ್ಡ ಪೈವ್ ಸ್ಟಾರ್ ಹೋಟೆಲ್ ಗೆ ಹೋಗುತ್ತಾರೆ..

ಆದರೆ ಈ ರೈತನನ್ನು ನೋಡಿದ ಹೋಟೆಲ್ ಮ್ಯಾನೇಜರ್ ಇವನ್ಯಾರು ಪೈವ್ ಸ್ಟಾರ್ ಹೊಟೇಲ್ ಗೆ ಪಂಚೆ ಹಾಕಿಕೊಂಡು ಬಂದಿದ್ದಾನೆ.. ಇವನ ಹತ್ತಿರ ನಮ್ಮ ಹೋಟೆಲ್ ನಲ್ಲಿ ಸಿಗುವ ಒಂದು ಕಾಫಿಗೆ ಕೊಡುವಷ್ಟು ದುಡ್ಡು ಕೂಡ ಇರೋದಿಲ್ಲ ಅಂದುಕೊಂಡು ರೈತನ ಬಳಿ ಬರುತ್ತಾರೆ.. ನಂತರ ರೈತನ ಬಳಿ ಬಂದ ಮ್ಯಾನೇಜರ್, ಏ ಅಜ್ಜ ನೀನು ದಾರಿ ತಪ್ಪಿ ಈ ಹೊಟೇಲ್ ಗೆ ಬಂದಿದ್ದೀಯಾ ಎಂದು ಕಾಣಿಸುತ್ತದೆ.. ನೀನು ತಿನ್ನುವ ಊಟ ಇಲ್ಲಿ ಸಿಗೋದಿಲ್ಲ. ಎದ್ದು ಹೋರಗಡೆ ಹೋಗು, ಪಕ್ಕದಲ್ಲೇ ಒಂದು ಸಣ್ಣ ಹೋಟೆಲ್ ಇದೆ ಎಂದು ಹೇಳುತ್ತಾನೆ..

ಈ ಮಾತುಗಳನ್ನು ಕೇಳಿದ ಸುಕುಮಾರ್ ಅವರಿಗೆ ತುಂಬಾ ಬೇಸರವಾಗಿ, ಒಂದು ಕಡೆ ಕೋಪವು ಕೂಡ ಬರುತ್ತದೆ.. ಆಗ ಈ ರೈತ ತನ್ನಲ್ಲಿರುವ 2000 ಸಾವಿರ ನೋಟಿನ ಕಟ್ಟನ್ನು ಟೇಬಲ್ ಮೇಲೆ ಇಟ್ಟು ಸುಮ್ಮನೆ ಮೌನವಾಗಿ ಕೂತಿರುತ್ತಾರೆ.. ಇನ್ನೂ ಈ 2000 ಸಾವಿರ ನೋಟುಗಳನ್ನು ನೋಡಿದ ಹೋಟೆಲ್‌ ಮ್ಯಾನೇಜರ್ ಸರ್ ನಿಮಗೆ ಏನು ಬೇಕು ಏಳಿ ಎಂದು ಸುಕುಮಾರ್ ಅವರಿಗೆ ಕೇಳುತ್ತಾರೆ..

ಆಗ ರೈತ ನೋಡಪ್ಪ ಮಹಾನುಭಾವ ನಾನು ಹಾಕಿರುವ ಹಳೆಯ ಬಟ್ಟೆಯನ್ನು ನೋಡಿ ನನ್ನ ಯೋಗ್ಯತೆಯನ್ನು ಅಳೆದು ಬಿಟ್ಟೆ.. ನಾನೊಬ್ಬ ರೈತ ನಾವು ವ್ಯವಸಾಯ ಮಾಡೊದನ್ನ ನಿಲ್ಲಿಸಿದರೆ ನಿವ್ಯಾರೂ ಕೂಡ ಬದುಕೋದಿಲ್ಲ.. ಮೊದಲು ಮುಖ ಬಟ್ಟೆ ನೋಡಿ ಅವರ ಯೋಗ್ಯತೆಯನ್ನು ಅಳೆಯುವದನ್ನು ಬಿಡು ಎಂದು ಹೇಳಿ ಹೊರಟು ಹೋಗುತ್ತಾರೆ.. ಸ್ನೇಹಿತರೆ ಈ ನೈಜ ಘಟನೆಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..