Advertisements

ರಾಜ್ಯದ ರೈತರಿಗೆ ಸಿಹಿ ಸುದ್ದಿ ಕೊಟ್ಟ ಸಿಎಂ ! ಸರ್ಕಾರದಿಂದ ಸಿಗ್ತಾ ಇರೋದಾದ್ರು ಏನು ಗೊತ್ತಾ?

News

ಮಹಾಮಾರಿ ಕರೋನಾ ಹಬ್ಬುತ್ತಿರುವ ಹಿನ್ನಲೆಯಲ್ಲಿ ಲಾಕ್ ಡೌನ್ ಆಗಿದ್ದು ಅನ್ನದಾತ ರೈತರು ಸಂಕಷ್ಟದ ಪರಿಷ್ಟಿತಿಯಲಿದ್ದಾರೆ. ತಾವು ಬೆಳೆದ ಬೆಳೆಗಳಿಗೆ ಸೂಕ್ತವಾದ ಬೆಲೆ ಸಿಗುತ್ತಿಲ್ಲ. ಇನ್ನು ಎಷ್ಟೋ ರೈತರು ತಾವು ಬೆಳೆದ ಬೆಳಗಳನ್ನ ತಾವೇ ಕೈಯಾರೆ ನಾಶ ಮಾಡುತ್ತಿದ್ದಾರೆ. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯಸರ್ಕಾರ ರೈತರಿಗೆ ಸಿಹಿ ಸುದ್ದಿಯೊಂದನ್ನ ನೀಡಿದೆ.

Advertisements

ಹೌದು, ಕರೋನಾ ಹಿನ್ನಲೆ ಸಂಕಷ್ಟಕ್ಕೆ ಈಡಾಗಿರುವ ರೈತರ ನೆರವಿಗೆ ಧಾವಿಸಿರುವ ರಾಜ್ಯ ಸರ್ಕಾರ, 2019-20 ನೇ ಸಾಲಿನಲ್ಲಿ ಬಡ್ಡಿ ಸಹಿತ ಕೃಷಿ ಸಾಲ ನೀಡಲು ನಿರ್ಧಾರ ಮಾಡಿದ್ದು, ಕೃಷಿ ಇಲಾಖೆಗೆ ಸೂಚನೆ ಕೂಡ ಕೊಟ್ಟಿದೆ. ಇನ್ನು ಅಲ್ಪಾವಧಿ ಸಾಲವಾಗಿ ಮೂರೂ ಲಕ್ಷ ರೂಪಾಯಿಗಳನ್ನ ಸಹಕಾರ ಸಂಸ್ಥೆಗಳಿಂದ ನೀಡಲು ಮುಖ್ಯಮಂತ್ರಿ ಯಡಿಯೂರಪ್ಪನವರು ಆದೇಶ ನೀಡಿದ್ದಾರೆ.

ಇನ್ನು ಅಲ್ಪಾವಧಿಗೆ ಬಡ್ಡಿ ರಹಿತವಾಗಿ 3 ಲಕ್ಷದವರೆಗೆ ಕೇಂದ್ರ ಸಹಕಾರಿ ಬ್ಯಾಂಕ್ ಗಳು, ಕೃಷಿ ಸಹಕಾರ ಸಂಘಗಳು ಹಾಗೂ ಪಿಕಾರ್ಡ್ ಬ್ಯಾಂಕ್ ಗಳ ಮೂಲಕ ರೈತರು ಈ ಸಾಲವನ್ನ ಪಡೆಯಬಹುದಾಗಿದೆ ಎಂದು ಹೇಳಲಾಗಿದೆ.