Advertisements

ದನದ ಕೊಟ್ಟಿಗೆಯಲ್ಲಿ ಕುತ್ಕೊಂಡು ಓದುತ್ತಿದ್ದ ಹಾಲು ಮಾರುವವನ ಮಗಳು ಇವತ್ತು ಏನಾಗಿದ್ದಾರೆ ಗೊತ್ತೇ! ಎಲ್ಲಾ ಕಡೆ ಬಾರಿ ಮೆಚ್ಚುಗೆ..

Kannada Mahiti

ಶಿಸ್ತು ಶಿಕ್ಷಣಕ್ಕೆ ತಳಹದಿ. ಶಿಸ್ತು ಒಂದಿದ್ದರೆ ಮಾಡುವ ಎಲ್ಲ ಕೆಲಸದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ. ಓದಿಗೆ ಶಿಸ್ತು ಬೇಕು. ಜೊತೆಗೆ ನಾನು ಮಾಡೇ ಮಾಡುತ್ತೇನೆ ಎಂಬ ಆತ್ಮಬಲ ಇರಬೇಕು.ಜೊತೆಗೆ ಒಳ್ಳೆಯ ಸಂಸ್ಕಾರ, ಸಮಯಪ್ರಜ್ಞೆ ಒಂದಿಷ್ಟು ಇದ್ದರೆ ಎಂತಹ ಕಠಿಣ ಸಾಧನೆಯನ್ನು ಸಹ ಸುಲಭವಾಗಿ ಮಾಡಬಹುದು. ಗುರು ಇಲ್ಲದಿದ್ದರೂ ಜೀವನದಲ್ಲಿ ಗುರಿ ಇರಬೇಕು. ಅದಕ್ಕೆ ನಾವು ಸರಿಯಾದ ದಾರಿಯಲ್ಲಿ ನಡೆಯಬೇಕು. ಹೀಗೆ ನಡೆದದ್ದೇ ಆದಲ್ಲಿ ಸಾಧನೆಯ ಉತ್ತುಂಗದಲ್ಲಿ ಇರುತ್ತೇವೆ ಎನ್ನುವುದಕ್ಕೆ ಈ ಹಾಲು ಮಾರುವವರ ಮಗಳೇ ಸಾಕ್ಷಿ. ಹೌದು ಪ್ರಿಯ ಓದುಗರೇ ಇವಳು ಹಾಲು ಮಾರುವವರ ಮಗಳಾಗಿದ್ದು,ಇಂದು ಜಡ್ಜ್ ಆಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇವಳ ಸಾಧನೆ ಆರಂಭವಾದದ್ದು ಹೇಗೆ ಅಂತ ಹೇಳ್ತೀವಿ ಈ ಸ್ಟೋರಿ ನಾ ಕೊನೆವರೆಗೂ ಓದಿ.
ಜ್ಯೋತಿ ಬಡವರ ಮನೆಯಲ್ಲಿ ಹುಟ್ಟಿ ಅರಮನೆಯನ್ನು ಬೆಳಗುವಂತೆ ಈ ಮಹಿಳೆ ಬಡವರ ಮನೆಯಲ್ಲಿ ಜನಿಸಿದ್ದು ಇಂದು ಜಡ್ಜ್ ಆಗಿ ದೇಶದ ಮಹಿಳೆಯರಿಗೆ ಮಾದರಿಯಾಗಿದ್ದಾಳೆ. ದೇಶದ ಹೆಮ್ಮೆಯ ಮಗಳಾಗಿದ್ದಾಳೆ. ದೇಶವೇ ಹೆಮ್ಮೆ ಪಡುವಂತೆ ಸಾಧನೆ ಮಾಡಿದ್ದಾಳೆ.

[widget id=”custom_html-3″]

Advertisements


ರಾಜಸ್ಥಾನದ ಉದಯಪುರದಲ್ಲಿ ಹಾಲು ಮಾರುವವರ ಮಗಳಾಗಿ ಸೋನಲ್ ಶರ್ಮ ಜನಿಸಿದರು. ಬಾಲ್ಯವನ್ನು ಕಷ್ಟದಲ್ಲಿಯೇ ಕಳೆಯುತ್ತಾ ಉನ್ನತಮಟ್ಟದ ವ್ಯಾಸಂಗ ಮಾಡಿದ ಸೊನಲ ಶರ್ಮ ರ ಜೀವನ ಎಲ್ಲರಿಗೂ ಮಾದರಿ. ಇವರ ಮನೆಯ ದನದ ಕೊಟ್ಟಿಗೆಯಲ್ಲಿ ಕುಳಿತು ಅಭ್ಯಾಸಮಾಡಿ ಇಂದು ಬಿಎ, ಎಲ್ ಎಲ್ ಬಿ, ಎಂ ಎಲ್ ಎಂ ಪದವಿಗಳಲ್ಲಿ ಪ್ರಥಮ ಸ್ಥಾನ ಪಡೆದು ಹೆತ್ತವರಿಗೆ ಕೀರ್ತಿ ತಂದಿದ್ದಾಳೆ. ಎಂಟರಲ್ಲಿ ರಾಜಸ್ಥಾನ್ ನ್ಯಾಯಾಂಗ ಸೇವೆಯ ಪರೀಕ್ಷೆಯನ್ನು ಪಾಸಾಗಿದ್ದರು. ಇದೀಗ ಪ್ರಥಮದರ್ಜೆ ಮ್ಯಾಜಿಸ್ಟ್ರೇಟ್ ಆಗಿ ನೇಮಕವಾಗುತ್ತಿದ್ದಾರೆ. ಈ ಪರೀಕ್ಷೆ ಪಲಿತಾಂಶ ಕಳೆದ ಡಿಸೆಂಬರನಲ್ಲಿ ಪ್ರಕಟವಾಗಿತ್ತು.
ಆದರೆ ಫೈನಲ್ ಲಿಸ್ಟ್ ನಲ್ಲಿ ಇವರ ಹೆಸರು ಇರಲಿಲ್ಲ. ಅವರ ಹೆಸರು ವೇಟಿಂಗ್ ಲಿಸ್ಟ್ ನಲ್ಲಿ ಇರಿಸಲಾಗಿತ್ತು.ಯಾಕೆ ಅಂತ ನೋಡಿದಾಗ ಸಾಮಾನ್ಯ ಕಟ್ಟ ಆಫ್ ಅಂಕಗಳಿಗೆ ಸೋನಾಲ್ ಅವರು ಒಂದು ಅಂಕ ಕಡಿಮೆ ಪಡೆದಿದ್ದರು. ತದನಂತರ ಅಭ್ಯರ್ಥಿಗಳ ಹೆಸರಲ್ಲಿ ಸ್ಥಾನ ಪಡೆದಿದ್ದ ಕೆಲವರು ಸರ್ವಿಸ್ ಗೆ ಗೈರಾದರು. ಆಗ ಸೀಟು ಉಳಿದಿರುವ ಬಗ್ಗೆ ಸೋನಲ್ ರಿಗೆ ಮಾಹಿತಿ ದೊರೆಯಿತು.

[widget id=”custom_html-3″]

ತಕ್ಷಣವೇ ಸೋನಾಲ್ ಹೈಕೋರ್ಟ್ನಲ್ಲಿ ಅರ್ಜಿಯನ್ನು ಹಾಕಿದರು. ಹೈಕೋರ್ಟ್ ಸೋನಾಲ್ ಅವರ ಹೆಸರನ್ನು ಫೈನಲ್ ಲಿಸ್ಟ್ ಗೆ ಸೇತಿಸಿತು. ಆದರೆ ಇವರ ಕುಟುಂಬದ ಆರ್ಥಿಕ ಸ್ಥಿತಿ ಅಷ್ಟೇನೂ ಚೆನ್ನಾಗಿರಲಿಲ್ಲ.ಆದ್ದರಿಂದ ಅವರು ಎಲ್ಲಿಯೂ ಟ್ಯೂಷನ್ ಗೆ ತೆರಳಲಿಲ್ಲ. ಬದಲಾಗಿ ಮನೆಯಲ್ಲಿ ಕುಳಿತು ಅಭ್ಯಾಸ ಮುಂದುವರಿಸಿದರು. ಸೈಕಲ್ನಲ್ಲಿ ಕಾಲೇಜಿಗೆ ಹೋಗಿ, ರಾತ್ರಿ ದನದ ಕೊಟ್ಟಿಗೆಯಲ್ಲಿ ಕುಳಿತು ಅಭ್ಯಾಸ ಮಾಡುತ್ತಿದ್ದರು. ಜೊತೆಗೆ ಹಸುಗಳ ಆರೈಕೆಯನ್ನು ಸಹ ಮಾಡುತ್ತಿದ್ದರು. ಶಾಲೆ ಮತ್ತು ಕಾಲೇಜಿನಲ್ಲಿ ತಾನು ಹಾಲು ಮಾರುವವರ ಮಗಳು ಎಂದು ಹೇಳಲು ಅಸಹ್ಯ ಪಡುತ್ತಿದ್ದರು ಸೋನಾಲ್ ಅವರು. ಆದ್ರೆ, ಈಗ ನಾನೊಬ್ಬಳು ಬಡ ಹಾಲುಮರುವವರು ಮಗಳು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ. ಈ ಪರಿಸ್ಥಿತಿಯೇ ನನ್ನನ್ನು ಸಾಧನೆಯತ್ತ ಸಾಗುವಂತೆ ಪ್ರೆರೇಪಿಸಿತು ಎಂದು ಹೇಳುತ್ತಿದ್ದಾರೆ. ಇದೀಗ ಸೋನಾಲ್ ಶರ್ಮಾ ಅವರು ಜಡ್ಜ್ ಆಗಿ ನೇಮಕ ಹೊಂದುತ್ತಿದ್ದು ಭಾರತದ ಅದೆಷ್ಟೋ ಬಡ ಮಹಿಳೆಯರಿಗೆ ಮಾದರಿಯಾಗಿ, ಸ್ಫೂರ್ತಿಯ ಚಿಲುಮೆಯಾಗಿದ್ದಾರೆ.

[widget id=”custom_html-3″]