ನಮಸ್ತೆ ಸ್ನೇಹಿತರೆ, ನಮ್ಮ ದೇಶದ ಬೆನ್ನೆಲುಬು ಎಂದರೆ ಅದು ರೈತ. ರೈತರು ಕಷ್ಟಪಟ್ಟು ಮಣ್ಣಿನಲ್ಲಿ ಇಳಿದು, ಬಿಸಿಲಿನಲ್ಲಿ ಒಣಗಿ, ಮಳೆಯಲ್ಲಿ ನೆನೆದು ಬೆಳೆಯನ್ನು ಬೆಳೆಯುತ್ತಾರೆ.. ಆದರೆ ಕೆಲವರು ರೈತನಿಗೆ ಎಷ್ಟು ತಾನೆ ಮರ್ಯಾದೆ ಕೊಡ್ತಾರೆ ಹೇಳಿ. ಅದೇ ರೀತಿ ಓರ್ವ ರೈತ ಪೈವ್ ಸ್ಟಾರ್ ಹೋಟೆಲ್ ಗೆ ಹೋದಾಗ ನಡೆದ ಘಟನೆ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.. ಅಂಬಾನಿ ಆದರೂ ಸರಿ ಭಿಕ್ಷುಕನಾದರೂ ಸರಿ ಹೊಟ್ಟೆಗೆ ತಿನ್ನೋದು ಅನ್ನಾನೆ ಅಲ್ವಾ ಆದರೆ ರೈತನಿಗೆ ಸಿಗಬೇಕಾದ ಗೌರವವನ್ನು ಕೆಲವರು ನೀಡುತ್ತಿಲ್ಲ.. ಇದಕ್ಕೆ ಉದಾಹರಣೆ ಪಂಜಾಬ್ ನ ಮಾನ್ ಸಿಂಗ್ ಎಂಬ ವ್ಯಕ್ತಿ. ಈತನಿಗೆ 47 ಎಕರೆಯ ಕೃಷಿ ಭೂಮಿ ಇದೆ..

ಆತನ ಮಕ್ಕಳು ಕೂಡ ಬೇರೆ ಕಡೆ ಸೆಟಲ್ ಆಗಿದ್ದಾರೆ. ಮನೆಯಲ್ಲಿ ಎರಡು ಕಾರು ಕೂಡ ಇದೆ ಆದರೆ ಮಾನ್ ಸಿಂಗ್ ಅವರಿಗೆ ನಡೆದುಕೊಂಡು ಹೋಡಾಡುವ ಅಭ್ಯಾಸ ಇದೆ.. ಇನ್ನೂ ವ್ಯವಸಾಯಕ್ಕೆ ಬೀಜಗಳು, ಗೊಬ್ಬರಗಳು ಬೇಕಿದ್ದರೆ ಲೂದಿಯಾನಕ್ಕೆ ಹೋಗಿ ಬರಬೇಕಾಗಿತ್ತು. ಅದಕ್ಕೆ ಮಾನ್ ಸಿಂಗ್ ಅವರು ಬಿಸಿಲಿನಲ್ಲೇ ಪ್ರಯಾಣಿಸುತ್ತಿದ್ದರು.. ಇನ್ನೂ ಇದೇ ರೀತಿ ಗೊಬ್ಬರ ತರಲು ಒಂದು ದಿನ ಲೇಟಾಗಿ ಮಾನ್ ಸಿಂಗ್ ಲುದಿಯಾನದಲ್ಲೇ ಉಳಿದುಕೊಳ್ಳುವ ಪರಿಸ್ಥಿತಿ ಬಂದಿತ್ತು. ಇನ್ನೂ ಹತ್ತಿರದಲ್ಲೇ ಇದ್ದ ಸ್ಟಾರ್ ಹೋಟೆಲ್ ಗೆ ಮಾನ್ ಸಿಂಗ್ ಹೋಗುತ್ತಾರೆ..

ಈ ಹೊಟೆಲ್ ನ ಹೆಸರು ಪಾರ್ಕ್ ಪ್ಲಾಜಾ. ಮಾನ್ ಸಿಂಗ್ ಅವರು ನೋಡುವುದಕ್ಕೆ ಸಾಮಾನ್ಯವಾಗಿ ಹೋಗಿದ್ದರು.. ಇನ್ನೂ ಹೊಟೆಲ್ ಹೊಳಗಡೆ ಹೋದಮೇಲೆ ಯಾರು ಕೂಡ ಇತನಿಗೆ ಏನು ಬೇಕೆಂದು ಕೇಳಲಿಲ್ಲ. ಆಗ ತಾನೆ ಹೋಗಿ ನಾನು ಇಲ್ಲಿ ಒಂದು ರಾತ್ರಿ ಉಳಿದುಕೊಳ್ಳಬೇಕೆಂದು ಕೇಳುತ್ತಾರೆ.. ಆಗ ಅಲ್ಲಿನ ಸಿಬ್ಬಂದಿ ನಸು ನಗುತ್ತಾ ನಿನ್ನ ಕೈಯಲ್ಲಿ ಅಷ್ಟೊಂದು ದುಡ್ಡು ಕೊಟ್ಟು ಇಲ್ಲಿ ಉಳಿದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ.. ಆದರೆ ಮಾನ್ ಸಿಂಗ್ ನನಗೆ ರೂಮ್ ಬೇಕಾಗಿದೆ ಎಂದು ಮತ್ತೆ ಕೇಳುತ್ತಾರೆ.. ಆಗ ಅಲ್ಲಿನ ಸಿಬ್ಬಂದಿ ಮ್ಯಾನೇಜರ್ ಗೆ ಮಾನ್ ಸಿಂಗ್ ಅವರ ಬಗ್ಗೆ ತಿಳಿಸುತ್ತಾರೆ.

ನಂತರ ಮ್ಯಾನೇಜರ್ ರೈತನ ಬಳಿ ಬಂದು ಇಲ್ಲಿ ರಾತ್ರಿ ಉಳಿದುಕೊಳ್ಳಬೇಕಾದರೆ 36 ಸಾವಿರ ರೂಪಾಯಿ ಖರ್ಚಾಗುತ್ತದೆ ಮತ್ತು ಬೆಳಗ್ಗೆ 10 ಗಂಟೆಗೆ ರೂಮ್ ಖಾಲಿ ಮಾಡಬೇಕು.. ಒಂದು ನಿಮಿಷ ಲೇಟ್ ಆದರೂ ಕೂಡ ಮತ್ತೆ ದುಡ್ಡು ಕಟ್ಟಬೇಕು ಎನ್ನುವಷ್ಟರಲ್ಲಿ ತನ್ನಲಿದ್ದ ಏಟಿಎಮ್ ಕಾರ್ಡ್ ಅನ್ನು ಕೊಟ್ಟು ಲಕ್ಷ ಬೇಕಾದರು ಕೇಳು ಕೊಡುತ್ತೇನೆ ಆದರೆ ಮರ್ಯಾದೆ ಕೊಡೊದನ್ನ ಕಲಿತಿಕೋ ಎಂದು ಮ್ಯಾನೆಜರ್ ಗೆ ಮತ್ತು ಸಿಬ್ಬಂದಿಗೆ ಮಾನ್ ಸಿಂಗ್ ಹೇಳುತ್ತಾರೆ.. ನಂತರ ಮ್ಯಾನೇಜರ್ ಕ್ಷಮೆ ಕೇಳುತ್ತಾರೆ.. ಸ್ನೇಹಿತರೆ ರೈತರನ್ನು ಯಾವತ್ತೂ ಕಡೆಗಣಿಸಬೇಡಿ, ಕೀಳಾಗಿ ನೋಡಬೇಡಿ. ಈ ಘಟನೆಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯ ತಿಳಿಸಿ..