Advertisements

ಪೊಲೀಸ್ ಅಧಿಕಾರಿಯನ್ನ ನಿಂಧಿಸಿ ಜಾಡಿಸಿ ಒದ್ದ ಮಾಜಿ ಸಂಸದ !

News

ದೇಶದ ಕಾನೂನು ಸಾಮಾನ್ಯ ಮನುಷ್ಯನಿಂದ ಹಿಡಿದು ಪ್ರಧಾನ ಮಂತ್ರಿಯವರಿಗೂ ಸೇರಿದಂತೆ ಎಲ್ಲರಿಗೂ ಒಂದೇ. ದೇಶದ ಕಾನೂನನ್ನ ಗೌರವಿಸಬೇಕಾದದ್ದು ಎಲ್ಲರ ಕರ್ತವ್ಯ. ಆದರೆ ಕೆಲ ರಾಜಕಾರಣಿಗಳು ಕಾನೂನು ನಮಗಲ್ಲ ಕೇವಲ ಸಾಮಾನ್ಯ ಜನರಿಗೆ ಮಾತ್ರ ಮಾಡಿರುವುದು ಎನ್ನುವಂತೆ ನಡೆದುಕೊಳ್ಳುತ್ತಿದ್ದಾರೆ. ಕಾನೂನನ್ನ ಪಾಲಿಸಿ ಮಾದರಿಯಾಗಬೇಕಾಗಿರುವವರೇ ಕಾನೂನನ್ನ ಪಾಲನೆ ಮಾಡದೇ ದರ್ಪ ಮೆರೆಯುತ್ತಿದ್ದಾರೆ.

Advertisements

ಹೌದು,ತಮಿಳುನಾಡಿನ ಮಾಜಿ ಸಂಸದರೊಬ್ಬರು ಪೊಲೀಸರ ಮೇಲೆಯೇ ದರ್ಪ ಮೆರೆದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.DMK ಪಕ್ಷದ ಮಾಜಿ ಸಂಸದರಾಗಿರುವ ಕೆ.ಅರ್ಜುನ್ ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಗೆ ಅವ್ಯಾಚ ಶಬ್ದಗಳಿಂದ ನಿಂದಿಸಿದ್ದಲ್ಲದೆ ಕಾಲಿನಿಂದ ಒಡ್ಡಿದ್ದಾರೆ. ತಮಿಳುನಾಡಿನ ಸೇಲಂ ನಲ್ಲಿ ಭಾನುವಾರ ರಾತ್ರಿಯೆಂದು ಈ ಘಟನೆ ನಡೆದಿದ್ದು, ಇ ಪಾಸ್ ಇದಕ್ಕೆ ಮೂಲ ಕಾರಣವಾಗಿದೆ.

ಇನ್ನು ತಮಿಳುನಾಡಿನಲ್ಲಿ ಮಹಾಮಾರಿ ಕೊರೋನಾ ರಣಕೇಕೆ ಹಾಕುತ್ತಿದ್ದೆ. ಇನ್ನು ಲಾಕ್ ಡೌನ್ ಕೂಡ ಇರುವ ಹಿನ್ನಲೆಯಲ್ಲಿ ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಹೋಗಬೇಕಾದ್ರೆ ಈ ಪಾಸ್ ಇರುವುದು ಖಡ್ಡಾಯವಾಗಿದೆ. ಇನ್ನು ಕಾನೂನು ಜಾರಿಗೆಯ ಪಾಲನೆಗಾಗಿ ಪೊಲೀಸ್ ಅಧಿಕಾರಿ ಹೆದ್ದಾರಿಯ ಟೋಲ್ ಬಳಿ ಕರ್ತವ್ಯದಲ್ಲಿದ್ದರು. ಇದೆ ವೇಳೆ ಅಲ್ಲಿಗೆ ಬಂದ ಮಾಜಿ ಸಂಸದ ಅರ್ಜುನ್ ಬಳಿ ಪಾಸ್ ತೋರಿಸುವಂತೆ ಕೇಳಲಾಗಿದ್ದು, ನನ್ನ ಬಳಿಯೇ ಪಾಸ್ ಕೇಳುವೆಯಾ ಎಂದು ಪೊಲೀಸ್ ಅಧಿಕಾರಿಯನ್ನ ಅವ್ಯಾಚ ಶಬ್ದಗಳಿಂದ ನಿಂದಿಸಿದ್ದಾನೆ. ಇನ್ನು ಪೊಲೀಸ್ ಅಧಿಕಾಋ ಪಾಸ್ ಇಲ್ಲದೆ ಮುಂದೆ ಹೋಗಲು ಬಿಡುವುದಿಲ್ಲ ಎಂದಾಗ ಕಾರಿನಿಂದ ಇಳಿದು ಬಂದ ಮಾಜಿ ಸಂಸದ ಅರ್ಜುನ್ ಆ ಅಧಿಕಾರಿಯನ್ನ ಕಾಲಿನಿಂದ ಒದ್ದು, ನಿಂದಿಸಿ ದೌರ್ಜನ್ಯ ಮೆರೆದಿದ್ದಾನೆ.

ಇದೆ ವೇಳೆ ಅಲ್ಲೇ ಇದ್ದ ಉಳಿದ ಪೊಲೀಸರು ಮತ್ತು ಸಾರ್ವಜನಿಕರು ಸಂಸದನನ್ನ ತಡೆದು ಮುಂದೆ ಹೋಗಲು ಕಳಿಸಿದ್ದಾರೆ. ಆದರೆ ಇಲ್ಲಿವರೆಗೂ ಯಾವುದೇ ಪ್ರಕರಣ ದಾಖಲಾಗದಿರುವುದು ವಿಚಿತ್ರವಾಗಿದೆ. ಅಧಿಕಾರಿಗಳ ಮೇಲೆ ದೌರ್ಜ್ಯನ ಎಸುಗುವ ರಾಜಕಾರಣಿಗಳು ಇನ್ನು ಸಾಮಾನ್ಯ ಜನರ ಬಗ್ಗೆ ಹೇಗೆ ಕಾಳಜಿ ತೋರಿಸುತ್ತಾರೆ ನೀವೇ ಹೇಳಿ..