Advertisements

4 ಲಕ್ಷ ಫಾರಿನ್ ಉದ್ಯೋಗ ಬಿಟ್ಟು ಬಂದು ಐಡಿಯಾ ಉಪಯೋಗಿಸಿ ಲಕ್ಷಗಟ್ಟಲೆ ದುಡಿಯುತ್ತಿರುವ ರೈತ.. ಹೇಗೆ ಗೊತ್ತಾ?

Inspire Kannada Mahiti

ಲಕ್ಷ ಲಕ್ಷ ಸಂಬಳ ಬರುತ್ತಿದ್ದ ಕೆಲಸಕ್ಕೆ ಗುಡ್ ಬೈ ಹೇಳಿ ಕನ್ನಡದ ಮಣ್ಣಲ್ಲಿ ಏನಾದರೂ ಬೆಳೆಬೆಳೆಯ ಬೇಕೆಂಬ ಮಹದೆತ್ತರದ ಆಸೆಯನ್ನು ಇಟ್ಟುಕೊಂಡಿದ್ದ ವ್ಯಕ್ತಿಯ ಕಥೆಯಿದು, ಎಸಿ ವ್ಯವಸ್ಥೆಯಿರುವ ಐಟಿ ಕಂಪನಿ ಬಿಟ್ಟು ಸೂರ್ಯನ ಪ್ರಖರ ಶಾಖದ ಮಧ್ಯೆ ತನ್ನೂರಿನಲ್ಲಿಯೇ ದುಡಿಯಬೇಕು ಅಂತ ಕನಸುಕೊಂಡು ನನಸು ಮಾಡಿಕೊಂಡ ಕೃಷಿಕನ ಕಥೆಯಿದು. ಎಸ್ ನಾವು ಈಗ ಹೇಳ್ತಾಯಿರುವ ನಮ್ಮ ಕಥಾನಾಯಕನ ಹೆಸರು ಗಿರೀಶ್, ಮೂಲತಃ ಬಳ್ಳಾರಿಯ ಕೊಡ್ಲಗಿ ತಾಲೂಕಿನ ಚಿಕ್ಕ ಜೋಗನಹಳ್ಳಿಯವರು, ಇವರು ಬಿಇ ಮುಗಿಸಿಕೊಂಡು ಜರ್ಮನಿಯಲ್ಲಿ ಜಾಬ್ ಮಾಡಿಕೊಂಡಿದ್ರು, ಉದ್ಯೋಗಕ್ಕೆ ವಿದಾಯ ಹೇಳಿ ಫುಲ್ ಟೈಮ್ ಕೃಷಿಕನಾಗಬೇಕೆಂಬ ಆಸೆಯಿಂದ ಹೂಟ್ಟೂರಿಗೆ ಬಂದು ಕೃಷಿಯಲ್ಲಿ ತೊಡಗಿಕೊಳ್ತಾರೆ.

[widget id=”custom_html-3″]

Advertisements


ಇನ್ನು ತಮ್ಮ ಬಳಿಯಿರುವ ಹತ್ತು ಎಕರೆ ಜಮೀನಿನಲ್ಲಿ ಗುಲಾಬಿ ಗಿಡ ಬೆಳೆಯಬೇಕು ಅನ್ಕೊತಾರೆ, ಆದರೆ ಬೆಳೆ ಬೆಳಯಲು ನೀರಿನ ಕೊರತೆಯಿತ್ತು, ಈ ಹಿನ್ನಲೆ 40 ಸಲ ಬೋರ‍್ವೆಲ್ ಹಾಕಿದ್ರು ಸಹ ಒಂದು ಹನಿ ಸಹ ನೀರು ಬರಲಿಲ್ಲ, ಇದರಿಂದ ಕುಗ್ಗದೇ ಮಾಸ್ಟರ್ ಪ್ಲಾನ್ ಒಂದೊನ್ನು ಮಾಡಿದ್ದಾರೆ. ಹೌದು ಗುಲಾಬಿ ಗಿಡ ಹಾಕಿ ಅದರ ಮೇಲೆ ಒಂದು ಎಕರೆ ವಿಸ್ತಾರದ ಏಳು ಪಾಲೆ ಹೌಸ್ ನಿರ್ಮಿಸಿ ಅದರ ಒಳಗೆ ಗುಲಾಬಿ ಗಿಡವನ್ನು ಬೆಳೆದ್ರು. ಅಷ್ಟಕ್ಕೂ ನಿಮಗೆ ಅನಿಸಿರಬಹುದು ನೀರು ಹೇಗಪ್ಪಾ ಸಂಗ್ರಹ ಮಾಡಿದ್ರು ಅಂತ,, ಇದಕ್ಕೆ ಗೀರೀಶ್ ಮಾಡಿಕೊಂಡ ಪ್ಲಾನ್ ಮಳೆ ನೀರಿನ ಸಂಗ್ರಹಣೆ, ಎಸ್ ಮಳೆ ಬಂದಾಗ ಆ ಮಳೆ ಪಾಲೆಯ ಮೇಲೆ ಬಿದ್ದು, ಪಾಲೆಯ ಮುಖಾಂತರ ಒಂದು ಪೈಪ್‌ಲೈನ್ ಕನೆಕ್ಷನ್ ಅನ್ನು ಗಿರೀಶ್ ಕೊಟ್ಟಿದ್ರು, ಈ ಪೈಪ್‌ಲೈನ್ ಸೀದಾ ಒಂದು ವ್ಯವಸ್ಥಿತವಾದ ಕೆರೆಯ ಒಳಗೆ ಶೇಖರಣೆಯಾಗುತ್ತಾ ಹೋಗಿತ್ತು.

[widget id=”custom_html-3″]

ಇದೇ ರೀತಿ ಏಳು ಪಾಲೆ ಹೌಸ್ ಮುಖಾಂತರ ಮಳೆ ನೀರನ್ನು ಸಂಗ್ರಹಿಸಿ ಅದನ್ನು ಸಮರ್ಪಕ ರೀತಿಯಲ್ಲಿ ಬಳಕೆ ಮಾಡಿಕೊಂಡ್ರು.
ಇದರಿಂದ ಗಿರೀಶ್ ಅವರು ತಿಂಗಳಿಗೆ ಹದಿನೈದು ಸಾವಿರಕ್ಕೂ ಹೆಚ್ಚು ಗುಲಾಬಿ ಗಿಡ ಬೆಳೆದು ಮಾರಾಟ ಮಾಡಲಿಕ್ಕೆ ಶುರು ಮಾಡ್ತಾರೆ. ಇದರಿಂದ ಅಪಾರ ಲಾಭವನ್ನು ಸಹ ಪಡೆದುಕೊಳ್ತಾರೆ, ಮುಂದೆ ಕೇವಲ ದೇಶದಲ್ಲಿ ಮಾತ್ರವಲ್ಲದೇ ವಿದೇಶಕ್ಕೂ ಸಹ ಗುಲಾಬಿ ಹೂಗಳನ್ನು ಮಾರಾಟ ಮಾಡಲಿಕ್ಕೆ ಶುರು ಮಾಡ್ತಾರೆ, ಈ ವಿಚಾರ ಜಿಲ್ಲೆಯಿಂದ ರಾಜ್ಯಕ್ಕೆ ರಾಜ್ಯದಿಂದ ದೇಶಕ್ಕೆ ಪಸರಿಸಲು ಜಾಸ್ತಿ ದಿನ ಸಹ ತೆಗೆದುಕೊಳ್ಳಲಿಲ್ಲ. ಯಾಕಂದ್ರೆ ಕಷ್ಟ ಪಟ್ಟು ಇಂತದೊಂದು ಪ್ಲಾನ್ ಮಾಡಿಕೊಂಡು, ಮಳೆ ನೀರಿನ್ನು ಸಂಗ್ರಹಣೆ ಮಾಡೋದು ಅಷ್ಟು ಸುಲಭದ ಮಾತಲ್ಲ. ಈ ವಿಚಾರ ಆದಷ್ಟು ಬೇಗ ಸ್ಪೆçಡ್ ಆಗಿ ಹಲವಾರು ಮಾದ್ಯಮಗಳಲ್ಲಿಯೂ ಕೂಡ ಪ್ರಸಾರವಾಗಿತ್ತು.
ನೋಡಿದ್ರಲಾ ಸ್ನೇಹಿತರೇ ಇದು ಜರ್ಮನ್ ಕೆಲಸಕ್ಕೆ ಗುಡ್ ಬೈ ಹೇಳಿ ಕನ್ನಡದ ಮಣ್ಣಲ್ಲಿ ಏನಾದ್ರೂ ಸಾಧಿಸ್ತೀನಿ ಅಂತ ದೃಢ ಸಂಕಲ್ಪ ಮಾಡಿಕೊಂಡು ಸಾಧಿಸಿದಕನ್ನಡಿಗನ ಕಥೆ.