ದೇಶದ ಬೆನ್ನೆಲುಬು ರೈತ.. ಆದರೆ ರೈತನ ಬೆನ್ನೆಲುಬು ಗಂಗಾದೇವಿ ಅಂದರೆ ನೀರು. ನೀರಿಗಾಗಿ ಪರದಾಡುವ ರೈತ ಲಕ್ಷಗಟ್ಟಲೇ ಸಾಲ ಮಾಡಿ ಬೋರ್ ವೆಲ್ ಹಾಕಿಸುತ್ತಾನೆ.. ಆದರೆ ಬೋರ್ ವೆಲ್ ನಿಂದ ಒಂದೆರಡು ತಿಂಗಳು ಬರುವ ನೀರು ನಂತರ ನಿಂತು ಹೋಗುತ್ತದೆ. ಹಾಗ ದಿಕ್ಕು ತೋಚದೇ ವರ್ಷಕ್ಕೆ ಸಾವಿರಾರು ರೈತರು ವ್ಯವಸಾಯವನ್ನು ತೊರೆದು ಕೆಲಸ ಹುಡುಕಿಕೊಂಡು ನಗರಗಳಿಗೆ ಹೋಗುತ್ತಿದ್ದಾರೆ.. ಆದರೆ ಈ ರೈತ ಒಂದು ಪ್ರಯೋಗ ಮಾಡಿ ವರ್ಷ ಪೂರ್ತಿ ನೀರು ಸಿಗುವಂತೆ ಜಲದಾರೆಯನ್ನು ಸೃಷ್ಟಿಸಿಕೊಂಡಿದ್ದಾರೆ.. ಆಗಾದ್ರೆ ಆ ಪ್ರಯೋಗ ಏನು ನೋಡೊಣ. ಹಾವೇರಿ ಜಿಲ್ಲೆಯ ಶಿಕಾರಿ ತಾಲ್ಲೂಕಿನ ಕುಲ್ಲೂರು ಗ್ರಾಮದ ಶಂಕರ್ ತನಗಿದ್ದ ಸ್ವಲ್ಪ ಮಟ್ಟದ ಜಮೀನಿನಲ್ಲಿ ವ್ಯವಸಾಯ ಮಾಡೋಣ ಎಂದು ಹೇಳಿ ಒಂದು ಬೋರ್ ವೇಲ್ ಕೊ’ರೆಸಿದರು.
[widget id=”custom_html-3″]

ಆರಂಭದಲ್ಲಿ ಬೋರ್ ವೆಲ್ ನಿಂದ ಎರಡು ಇಂಚು ನೀರು ಬರುತ್ತಿತ್ತು.. ದಿನಗಳು ಕಳೆದಂತೆ ನೀರಿನ ಮಟ್ಟ ಕಡಿಮೆ ಆಗ್ತಾ ಬಂತು. ಇರೋ ಸ್ವಲ್ಪ ಜಮೀನಿಗೂ ಸಹ ಆ ನೀರು ಸಾಕಾಗುತ್ತಿರಲಿಲ್ಲಾ.. ಇದೇ ರೀತಿ ಆದ್ರೆ ಜೀವನ ಹೇಗೆ ನಡೆಸೋದು ಬಹಳ ಕಷ್ಟವಾಗುತ್ತೆ ಎಂದು ಭಾವಿಸಿದ ಶಂಕರ್ ಕೃಷಿ ಅಧಿಕಾರಿ ಬಳಿ ಮಾಹಿತಿ ತಿಳಿದುಕೊಂಡು ಒಂದು ಪ್ರಯೋಗ ಮಾಡಲು ಮುಂದಾಗ್ತಾರೆ.. ತನ್ನ ಯೋಚನೆಯ ಪ್ರಕಾರ ಬೋರ್ ವೆಲ್ ಹತ್ತಿರವೇ ಎರಡು ಮೀಟರ್ ಹಗಲ ಹಾಗು ಎರಡು ಮೀಟರ್ ಆಳವಾದ ಎರಡು ಇಂಗು ಗುಂ’ಡಿಗಳನ್ನು ನಿರ್ಮಿಸಿಕೊಂಡ ಶಂಕರ್ 3 ಪೀಟ್ ವರೆಗೂ ಮರಳು ಇದ್ದಿಲು ಹಾಗು ದಪ್ಪದಾದ ಜೆಲ್ಲಿ ಕಲ್ಲುಗಳನ್ನು ತುಂಬಿಸಿದರು.
[widget id=”custom_html-3″]

ಮಳೆಗಾಲದಲ್ಲಿ ಪೋಲ್ ಆಗಿ ಹೋಗುವ ನೀರು ಹಾಗೂ ಹೊಲದ ಸುತ್ತ ಮುತ್ತ ಶೇಖರಣೆ ಆಗುವ ನೀರನ್ನು ಈ ಇಂಗು ಗುಂ’ಡಿಗೆ ಕನೆಕ್ಟ್ ಮಾಡಿ ನೀರನ್ನು ಇಂಗಿಸುತ್ತಿದ್ದಾರೆ ಶಂಕರ್.. ಇದರ ಪ್ರತಿಪಲದಿಂದಾಗಿ ಸರಿಯಾಗಿ ಎರಡು ಇಂಚು ನೀರು ಕೂಡ ಬರದ ಬೋರ್ ವೆಲ್ ನಿಂದ 4 ಇಂಚು ನೀರು ತರಿಸುತ್ತಿರುವ ರೈತ. ಅಷ್ಟೇ ಅಲ್ಲದೇ ವರ್ಷ ಪೂರ್ತಿ ನೀರು ಬರುತ್ತಿದೆ.. ಇಂಗು ಗುಂಡಿಯಲ್ಲಿ ವರ್ಷಕ್ಕೆ ಸುಮಾರು 90 ಲಕ್ಷ ಲೀಟರ್ ಅಧಿಕ ಮಳೆಯನ್ನು ಇಂಗಿಸಲಾಗುತ್ತಿದ್ದು.. ನೀರಿನ ಅಭಾವ ಇಲ್ಲದೇ ವರ್ಷಕ್ಕೆ ಮೂರು ಬೆಳೆ ತೆಗೆಯುತ್ತಿದ್ದಾರೆ ಶಂಕರ್ ಅವರು.
[widget id=”custom_html-3″]

ಈ ಶಂಕರ್ ಮಾಡಿರುವ ಪ್ರಯೋಗ ಎಲ್ಲಾ ಕಡೆ ಸುದ್ದಿಯಾಗಿದ್ದು ಇದನ್ನು ತಿಳಿದುಕೊಳ್ಳಲು ಆಸ್ಟ್ರೇಲಿಯಾ, ಕೆನಡಾ ಸೇರಿದಂತೆ ಏಳು ದೇಶಗಳ ರೈತ ಪ್ರತಿನಿಧಿಗಳು ಶಂಕರ್ ಅವರನ್ನು ಬೇಟಿ ಮಾಡಿ ಅವರು ಮಾಡಿರುವ ಐಡಿಯಾವನ್ನು ತಿಳಿದುಕೊಳ್ಳುತ್ತಿದ್ದಾರೆ.. ಈ ಒಂದು ಪ್ರಯೋಗ ಶಂಕರ್ ಜೀವನವನ್ನೇ ಬದಲಾಯಸಿದ್ದೂ ತನಗೆ ಇರುವ ಅಲ್ಪ ಜಮೀನಿನಲ್ಲಿ ನಾನಾ ರೀತಿಯ ಬೆಳೆಯನ್ನು ಬೆಳೆಯುತ್ತಾ ವಿಶ್ವ ಮಟ್ಟದ ಜನರನ್ನು ಆಕರ್ಶಿಸುತ್ತಿದ್ದಾರೆ.. ಉತ್ತರ ಕರ್ನಾಟಕದ ಹಲಾವರು ಎಂಜಿವೋಗಳು ಈ ವಿಷಯದಲ್ಲಿ ರೈತರಿಗೆ ಸಹಾಯ ಮಾಡುತ್ತಿವೆ. ನೀರಿಲ್ಲ ಎಂದು ವ್ಯವಸಾಯವನ್ನು ತೊರೆಯುವದಕ್ಕಿಂತ ಇರುವ ಸಂಪನ್ಮೂಲಗಳನ್ನು ಸರಿಯಾದ ರೀತಿ ಬಳಸಿಕೊಂಡರೆ ಭೂತಾಯಿ ಯಾವತ್ತೂ ನಮ್ಮ ಕೈ ಬಿಡೋದಿಲ್ಲಾ ಅಲ್ಲವೇ..