Advertisements

ಹಾವೇರಿ ರೈತನ ಸ್ಮಾ’ರ್ಟ್ ಐಡಿಯಾ ನೋಡಿ ಬೇರೆ ರೈತರು ಅನುಸರಿಸುತ್ತಿದ್ದಾರೆ .. ಅವರು ಮಾಡಿದ್ದೇನು ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ಕೃಷಿ ಅನ್ನೋದು ವಿಜ್ಞಾನ ಇದ್ದ ಹಾಗೆ. ಹೊಸ ವಿಧಾನಗಳನ್ನ ಅಳವಡಿಸಿಕೊಂಡಂತೆ.. ಹೊಸ ಪ್ರತಿಫಲ, ಹೊಸ ಲಾಭಗಳು ಸಿಗುತ್ತವೆ. ಬೆವರು ಸುರಿಸಿ ಕಷ್ಟ ಪಟ್ಟರೆ ಸಾಕಾಗಲ್ಲ.. ಸ್ವಲ್ಪ ಬುದ್ದಿ ಉಪಯೋಗಿಸಿದರೆ ಇತರರಿಗೆ ಮಾದರಿಯಾಗಿ ವ್ಯವಸಾಯ ಮಾಡಿ ನಷ್ಟ ಇಲ್ಲದಂತೆ ನೋಡಿಕೊಳ್ಳಬಹುದು. ಈ ಹಾವೇರಿ ರೈತ ಮಾಡಿದ್ದು ಅದೇ ಹೊಸ ಬದಲಾವಣೆ.. ಪರಿಣಿತರ ಸಲಹೆಯಿಂದ ಈ ರೈತ ಪಾಲಿಸಿದ ಕಾರಣ ಇವತ್ತು ತಾವು ಹಾಕಿದ ಬಂಡವಾಳಕ್ಕೆ ಆರು ಪಟ್ಟು ಲಾಭವನ್ನು ಗಳಿಸುತ್ತಿದ್ದಾರೆ. ಅಷ್ಟಕ್ಕೂ ಅವರು ಮಾಡಿದ ಕೆಲಸವಾದ್ರೂ ಏನು ನೋಡೊಣ..

Advertisements

ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕೆರಬಡಿ ಪರಮೇಶ್ವರಪ್ಪ ತಮಗಿರುವ 20 ಎಕರೆ ಜಮೀನಿಗೆ ಹಿಂದಿನ ಕಾಲದ ಪದ್ದತಿಯನ್ನೇ ಮುಂದುವರೆಸುತ್ತಿದ್ದು ಪ್ರತೀ ವರ್ಷ ಹತ್ತಿ, ಹಾಗೂ ಗೋವಿನ ಜೋಳ ಹಾಕುತ್ತಿದ್ದರು.. ಆದರೆ ಅದಕ್ಕೆ ಹಾಕಿದ ಹಣದಲ್ಲಿ ಅರ್ಧ ಕೂಡ ವಾಪಸ್ ಬರುತ್ತಿರಲಿಲ್ಲ. ಇದರಿಂದ ಕಂ’ಗಾಲಾಗಿದ್ದ ಪರಮೇಶ್ವರಪ್ಪ.. ಈಗೆ ಆದ್ರೇ ಏಗಪ್ಪ ಜೀವನ ನಡೆಸೋದು ಅಂತ ಕಂಗಾಲಾಗಿದ್ರು. ಹಾಗ ಕೃಷಿ ವಿಜ್ಞಾನಿಯಾಗಿರುವ ಅಶೋಕ್ ಅವರು ಒಂದು ಸಲಹೆಯನ್ನು ಕೊಡುತ್ತಾರೆ.‌‌. ಪರಮೇಶ್ವರಪ್ಪ ಸಿಹಿ ಮೆಕ್ಕೆಜೋಳ ಹಾಕಿ ನೋಡು ಸಖತ್ ಲಾಭ ಸಿಗುತ್ತದೆ ಎಂದು ಹೇಳುತ್ತಾರೆ.

ಅಶೋಕ್ ಅವರ ಮಾತಿನಂತೆ ಕೊನೆಗೂ ಒಂದು ನಿರ್ದಾರಕ್ಕೆ ಬಂದ ಪರಮೇಶ್ವರಪ್ಪ ಉತ್ತಮವಾದ ಸಿಹಿ ಮೆಕ್ಕೆಜೋಳದ ಬೀಜ ಎಲ್ಲಿ ಸಿಗುತ್ತದೆ ಎಂದು ಮಾಹಿತಿ ಕಲೆಹಾಕುತ್ತಾರೆ. ಹಾಗ ಅವರಿಗೆ ಸಿಕ್ಕ ಉತ್ತರ ಥೈ’ಲ್ಯಾಂಡ್.. ಕೊನೆಗೂ ಥೈ’ಲ್ಯಾಂಡ್ ದೇಶದಿಂದ ಸಿಹಿ ಮೆಕ್ಕೆ ಜೋಳದ ಬೀಜ ತರಿಸಿದ ಪರಮೇಶ್ವರಪ್ಪ.. ಮೊದಲು ತಮ್ಮ ಒಂದಷ್ಟು ಜಮೀನಿಗೆ ಹಾಕುತ್ತಾರೆ. ಕೇವಲ 65 ದಿನದಲ್ಲಿ ಫಸಲು ಕೊಡುವ ಈ ಸಿಹಿ ಮೆಕ್ಕೆಜೋಳ ಇವತ್ತು ಪರಮೇಶ್ವರಪ್ಪ ಅವರನ್ನ ಸಂತಸದಲ್ಲಿ ಮು’ಳುಗಿಸಿದೆ.

ಒಂದು ಮೆಕ್ಕೆಜೋಳಕ್ಕೆ 7 ರೂಪಾಯಿ ಕೊಟ್ಟ ಬೆಂಗಳೂರಿನ ಮಳಿಗೆಯೊಂದು ಒಪ್ಪಂದ ಮಾಡಿಕೊಂಡಿದೆ. ಹಾಗೆ ತಾನು‌ ಹಾಕಿದ ಬಂಡವಾಳದ ಜೊತೆ ಆರು ಪಟ್ಟು ಲಾಭ ಗಳಿಸುತ್ತಿದ್ದಾರೆ ಈ ರೈತ. ಒಂದ ಸಲಹೆ, ಒಂದು ಪ್ರಯತ್ನ ಇಂದು ಪರಮೇಶ್ವರಪ್ಪ ಜೀವನದಲ್ಲಿ‌ ಹೊಸ ವ್ಯವಸಾಯದ ಭರವಸೆಯನ್ನು ಮೂಡಿಸಿದೆ.. ಪರಮೇಶ್ವರಪ್ಪ ಅವರ ಈ ಪ್ರಯತ್ನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.