ನಮಸ್ತೇ ಸ್ನೇಹಿತರೆ, ಹಿಂದಿನ ಕಾಲದಲ್ಲಿ ದೇಶಕ್ಕೆ ಅನ್ನ ನೀಡುವ ರೈತನಿಗೆ ತಾನು ಬೆಳೆಯುವ ಬೆಳೆಗಳನ್ನ ಸಮೃದ್ಧಿಯಾಗಿ ಪೋಷಿಸಲು ಪ್ರತಿ ಹಂತದಲ್ಲೂ ಸಾಕಷ್ಟು ಸವಾಲುಗಳನ್ನು ಹೆದರಿಸುತ್ತಾನೆ. ಅದು ಕೂಲಿ ಕಾರ್ಮಿಕರ ಸಮಸ್ಯೆ ಇರಬಹುದು ಅಥವಾ ಬಿತ್ತನೆ ಬೀಜ, ರಸಗೊಬ್ಬರ, ಉಳುಮೆ ಈಗೆ ಸಾಕಷ್ಟು ಸವಾಲುಗಳ ಜೊತೆ ರೈತ ಬದುಕಬೇಕಾಗುತ್ತದೆ. ಇಂತಹದ್ದೆ ಒಂದು ಸವಾಲನ್ನು ಎದುರಿಸಿದ ರೈತನೊಬ್ಬ ಮಿಶ್ರ ಬೆಳೆಯನ್ನ ಬೆಳೆಯಲು ಭರ್ಜರಿ ಪ್ಲಾನ್ ಮಾಡಿ ಸಕ್ಸಸ್ ಕೂಡ ಆಗಿದ್ದಾರೆ. ಅರೇ ಯಾರು ಆ ರೈತ ಅವರು ಮಾಡಿದ ಪ್ಲಾನ್ ಆದ್ರೂ ಏನು ಎಂಬುದನ್ನು ತಿಳಿಯೋಣ ಬನ್ನಿ..

ರೋಣಾ ತಾಲೂಕಿನ ಹುಣಗಂಡಿ ಗ್ರಾಮದ ಯಲ್ಲಪ್ಪ ಅವರು ಕೂಲಿ ಕಾರ್ಮಿಕರು ಕೆಲಸಕ್ಕೆ ಸಿಕ್ಕಿಲ್ಲ ಎಂದು ತನ್ನ ಬೈಕ್ ಮೂಲಕ ಈರುಳ್ಳಿ ಮತ್ತು ಮೆಣಸಿನ ಮಧ್ಯೆ ಜೋಳದ ಬೆಳೆಯನ್ನು ಮಿಶ್ರ ಬೆಳೆಯನ್ನಾಗಿ ಬೆಳೆದು ಯಶಸ್ಸನ್ನು ಕಂಡಿದ್ದಾರೆ. ಅಲ್ಲದೇ ಇದರಿಂದ ಹಣ ಮತ್ತು ಸಮಯವನ್ನ ಉಳಿತಾಯ ಮಾಡಿದ್ದಾನೆ. ಹೌದು ಈಗಾಗಲೇ ಈರುಳ್ಳಿ ಮತ್ತು ಮೆಣಸಿನ ಬೆಳೆಯನ್ನು ಬೆಳೆದ ರೈತ ಮಿಶ್ರ ಬೆಳೆಯಾಗಿ ಜೋಳದ ಬೆಳೆಯನ್ನು ಬೆಳೆಯಲು ಮುಂದಾಗಿದ್ರೂ.. ಆದರೆ ಎತ್ತು ಅಥವಾ ಟ್ರ್ಯಾಕ್ಟರ್ ಬಳಸಿ ಬಿತ್ತನೆ ಮಾಡಲು ಆಗುವುದಿಲ್ಲ. ಹಾಗಾಗಿ ಕೂಲಿ ಆಳುಗಳ ಮೂಲಕ ಬಿತ್ತನೆಗೆ ಮುಂದಾಗಿದ್ದ.. ಆದರೆ ಒಂದು ಎಕರೆಗೆ 5 ಜನರಂತೆ ಎರಡು ದಿನ ಕೂಲಿ ಕಾರ್ಮಿಕರು ಬೇಕಾಗಿತ್ತು.

ಎತ್ತಿನಂತೆ ಹೆಗಲಿಗೆ ನೊಗವನ್ನು ಮನುಷ್ಯರೆ ಹೊತ್ತು ಎಳೆಗುಂಡೆ ಹೊಡೆಯಬೇಕು. ಈಗಾಗಿ ಹೆಚ್ಚು ಶ್ರಮ ಆಯಾಸದ ಕೆಲಸವೆಂದು ಕಾರ್ಮಿಕರು ಸಿಕ್ಕಿಲ್ಲ.. ಇದರಿಂದ ಚಿಂತಾಕ್ರಾಂತನಾದ ರೈತ ಬಿತ್ತನೆ ಅವದಿ ಮುಗಿದು ಹೋಗುವ ಮುನ್ನ ತನ್ನ ಪತ್ನಿ ಹಾಗೂ ಮಗನ ಜೊತೆ ಬೈಕ್ ಮೂಲಕ ಬಿತ್ತನೆ ಮಾಡಿದ್ದಾನೆ. ಒಂದು ಎಕರೆಗೆ ಹತ್ತು ಜನ ಕೂಳಿ ಆಳುಗಳಂತೆ ಸಾವಿರದ ಐನೂರು ರುಪಾಯಿ ಬೇಕಿತ್ತು ಆದರೆ ಒಂದೇ ಒಂದು ಗಂಟೆಯಲ್ಲಿ ಒಂದು ಎಕರೆ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದಾರೆ. ಅದು ಕೇವಲ ಒಂದೇ ಒಂದು ಲೀಟರ್ ಪೆಟ್ರೊಲ್ ನಲ್ಲಿ.. ನೋಡಿದರಲ್ವಾ ಸ್ನೇಹಿತರೆ ಕಡಿಮೆ ಖರ್ಚಿನಲ್ಲಿ ಶ್ರಮವೇ ಇಲ್ಲದೇ ಹೇಗೆ ಕೆಲಸವನ್ನು ಮಾಡಬಹುದು ಅಂತ.. ಈ ರೈತ ಗಾಡಿಯಲ್ಲಿ ಉಳುಮೆ ಮಾಡುತ್ತಿರುವ ಪೊಟೊ ಹಾಗೂ ವೀಡಿಯೋ ಈಗ ಎಲ್ಲಾ ಕಡೆ ಬಹಳ ವೈರಲ್ ಆಗಿದೆ.. ಇನ್ನೂ ಈ ರೈತನ ಐಡಿಯಾ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.