Advertisements

ಚಿಕ್ಕಬಳ್ಳಾಪುರದ ರೈತನ ಈ ಸ್ಮಾರ್ಟ್ಐ ಡಿಯಾ ಇಡೀ ಕರ್ನಾಟಕದಲ್ಲೇ ವೈರಲ್ ಆಗ್ತಿದೆ.. ಏನದು ಗೊತ್ತಾ? ನೋಡಿ.

Kannada Mahiti

ನಮಸ್ತೆ ಸ್ನೇಹಿತರೆ, ನಮ್ಮ ರೈತರು ಯಾವುದರಲ್ಲೂ ಕಡಿಮೆ ಇಲ್ಲ ಎಂದು ಪದೇ ಪದೇ ಸಾಬೀತು ಮಾಡುತ್ತಿದ್ದಾರೆ.. ಹೌದು. ಇಲ್ಲೊಬ್ಬ ರೈತ ಹೂವಿನ ತೋಟಕ್ಕೆ ಲೈಟಿಂಗ್ ವ್ಯವಸ್ಥೆ ಮಾಡಿದ್ದು.. ರಾತ್ರಿಯಾದರೆ ಸಾಕು ಈ ರೈತನ ತೋಟ ಲೈಟಿಂಗ್ ನಿಂದ ಜಗಮಗಿಸಿ, ನೋಡುಗರ ಕಣ್ಮನ ಸೆಳೆಯುತ್ತದೆ.. ಅರೇ ಹೂವಿನ ತೋಟಕ್ಕೆ ಲೈಟಿಂಗ್ಸ್ ಯಾಕೆ ಅಂತ ಕೇಳ್ತಿದೀರಾ ತಿಳಿದುಕೊಳ್ಳೋಣ ಬನ್ನಿ. ನಮ್ಮ ದೇಶದ ಬೆನ್ನೆಲುಬು ರೈತರ ಬಗ್ಗೆ ನಿಮಗೂ ಕೂಡ ಅಭಿಮಾನ ಗೌರವ ಇದ್ದರೆ ಆಹಾರವನ್ನು ಎಂದಿಗೂ ಸಹ ವೇಸ್ಟ್ ಮಾಡಬೇಡಿ.. ಚಿಕ್ಕಬಳ್ಳಾಪುರ ಶಿಡ್ಲಘಟ್ಟದ ಪತ್ರಹಳ್ಳಿಯ ಗಿರೀಶ್ ಸೇವಂತಿ ಗಿಡ ಬೆಳೆಯಲು ಸ್ಮಾರ್ಟ್ ಐಡಿಯಾ ಮಾಡಿದ್ದು ತುಂಬಾ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Advertisements

ಗಿರೀಶ್ ಅವರು ಜಿಲ್ಲಾಡಳಿತದ ಭವನ ಎದುರಿಗೆ ಇರುವ ಎರಡು ಎಕರೆ ಜಮೀನಿಗೆ ಸೇವಂತಿ ಗಿಡಗಳನ್ನು ಹಾಕಿದ್ದು.. ಹೂದೋಟಕ್ಕೆ ಜಗಮಗಿಸುವ ಲೈಟಿಂಗ್ ವ್ಯವಸ್ಥೆ ಮಾಡಿ ನೋಡುರ ಕಣ್ಣು ಕುಕ್ಕುವಂತೆ ಮಾಡಿದ್ದಾರೆ. ಅಷ್ಟಕ್ಕೂ ಹುದೋಟಕ್ಕೆ ಈ ರೀತಿ ಸಾಲು ಸಾಲು ಲೈಟಿಂಗ್ ವ್ಯವಸ್ಥೆ ಮಾಡಿರುವುದು ಅಲಂಕಾರಕ್ಕೆ ಅಲ್ಲಾ.. ಬದಲಿಗೆ ಸೇವಂತಿಯ ಹೂವು ಬರ್ಜರಿ ಇಳುವರಿಗಾಗಿ ರೈತ ಗಿರೀಶ್ ಮಾಡಿರುವ ಸ್ಮಾರ್ಟ್ ಐಡಿಯಾ ಇದು. ಎರಡುವರೆ ಎಕರೆಯಲ್ಲಿ ಸೇವಂತಿ ಗಿಡ ನಾಟಿ ಮಾಡಿರುವ ರೈತ ಚಳಿಗಾಲದ ಸಂದರ್ಭದಲ್ಲಿ ಸೂರ್ಯನ ಶಾಕ ಕಡಿಮೆ ಇರುತ್ತದೆ. ಇದರಿಂದ ಗಿಡದ ಬೆಳವಣಿಗೆ ಕಡಿಮೆಯಾಗುತ್ತದೆ..

ಈ ಕಾರಣಕ್ಕೆ ಗಿಡಗಳಿಗೆ ಶಾಕ ಇರಲಿ ಎಂದು 500 ರಿಂದ 600 ವಿದ್ಯುತ್ ದೀಪಗಳನ್ನು ಅಳವಡಿಸಿದ್ದಾರೆ.. ರೈತನ ಈ ಐಡಿಯಾದಿಂದ ಸೇವಂತಿ ಗಿಡದಲ್ಲಿ ಬರುತ್ತಿರುವ ಹೂವುಗಳಿಗೆ ಮಾರ್ಕೆಟ್ ನಲ್ಲಿ ಬಾರಿ ಬೇಡಿಕೆ ಇದ್ದು ಬಂಪರ್ ಬೆಲೆಯೂ ಕೂಡ ಸಿಗುತ್ತಿದೆ. ಅಷ್ಟೇ ಅಲ್ಲದೇ ಅಕ್ಕ ಪಕ್ಕದ ರೈತರು ಸಹ ಲೈಟಿಂಗ್ಸ್ ಐಡಿಯಾ ಮಾಡಲು ಇವರಿಂದ ಪ್ರೇರಣೆ ಪಡೆದಿದ್ದಾರೆ.. ಅಲ್ಲದೇ ಲೈಟಿಂಗ್ ವ್ಯವಸ್ಥೆಗೆ ಪ್ರತ್ಯೇಕವಾದ ಪವರ್ ಕನೆಕ್ಷನ್‌ ಪಡೆದಿದ್ದು ತಿಂಗಳಿಗೆ ಅಂದಾಜು 10 ಸಾವಿರ ರೂಪಾಯಿ ಕರೆಂಟ್ ಬಿಲ್ ಬರುತ್ತದೆ ಎಂದು ರೈತ ಗಿರೀಶ್ ಅವರು ಹೇಳಿದ್ದಾರೆ.. ಸ್ನೇಹಿತರೆ ರೈತ ಗಿರಿಶ್ ಅವರಿಗೆ ನಿವೇನು ಏಳಲು ಇಷ್ಟಪಡುತ್ತೀರಾ ಎಂಬುದನ್ನು ತಿಳಿಸಿ.