Advertisements

ತಾಯಿಯ ಪ್ರಾಣವನ್ನು ಕಾಪಾಡಿದ 4 ವರ್ಷದ ಹುಡುಗ.. ಅದು ಹೇಗೆ ಗೊತ್ತಾ?

Inspire Kannada Mahiti

ನಮಸ್ತೆ ಸ್ನೇಹಿತರೆ, ಚಿಕ್ಕ ಮಕ್ಕಳು ಮೊಬೈಲ್ ಉಪಯೋಗಿಸಬಾರದು ಎಂದು ಹೇಳುತ್ತೇವೆ. ಮಕ್ಕಳು ಮೊಬೈಲ್ ಉಪಯೋಗಿಸುತ್ತಿದ್ದರೆ ಅವರ ಮೇಲೆ ಕೋಪ ಮಾಡಿಕೊಳ್ಳುತ್ತೇವೆ.. ಆದರೆ ಅದರಲ್ಲಿರುವ ಪ್ರಯೋಜನಗಳನ್ನು ಮಕ್ಕಳಿಗೆ ಹೇಳಿಕೊಟ್ಟರೆ ಎಷ್ಟು ಉಪಯೋಗಕ್ಕೆ ಬರುತ್ತೆ ಅನ್ನೋದು ತಿಳಿಸಿ ಕೊಡುವ ಘಟನೆ ಇದು.. ಇಂಗ್ಲೇಂಡ್ ದೇಶದ ಲಂಡನ್ ನಗರದಲ್ಲಿ ಮನೆಯ ಮುಂದೆ ರೋಮನ್ ಅನ್ನುವ ನಾಲ್ಕು ವರ್ಷದ ಹುಡುಗ ತನ್ನ ತಮ್ಮನ ಜೊತೆ ಆಟ ಆಡುತ್ತಿದ್ದ. ಆ ಸಮಯದಲ್ಲಿ ಆತನ ತಾಯಿ ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿ ಕೆಳಗೆ ಉರುಳಿದರು..

Advertisements

ಇದನ್ನು ಗಮನಿಸಿದ ರೋಮನ್ ತನ್ನ ತಾಯಿ ಸತ್ತು ಹೋಗಿದ್ದಾಳೆ ಎಂದು ಭಾವಿಸಿದ ಕೂಡಲೇ ತಾಯಿಯ ಐಪೋನ್ ತೆಗೆದುಕೊಂಡ ರೋಮನ್ ಆಕೆಯ ಬೆರಳಿನಿಂದ ಸ್ಕ್ರೀನ್ ಅನ್ಲಾಕ್ ಮಾಡಿ ಸಿರಿಯಾ ಆ್ಯಪ್ ಓಪನ್ ಮಾಡಿ ಅದರ ಸಹಾಯದಿಂದ ಇಂಗ್ಲೆಂಡ್ ನ ಎಮರ್ಜೆನ್ಸಿ ನಂಬರ್ 911 ಗೆ ಪೋನ್ ಮಾಡಿದ.. ಕಾಲ್ ಅಟೆಂಡ್ ಮಾಡಿದ ಮಹಿಳಾ ಉದ್ಯೋಗಿ ಹಲೋ ಎಂದ ತಕ್ಷಣ ತನ್ನ ವಿವರಗಳನ್ನು ಕೊಡಲು ಮುಂದಾದ ಹುಡುಗ ನನ್ನ ಹೆಸರು ರೋಮನ್. ನನ್ನ ತಾಯಿ ಸ’ತ್ತು ಹೋಗಿದ್ದಾಳೆ ಎಂದ.. ನಿನ್ನ ತಾಯಿ ಸ’ತ್ತು ಹೋಗಿದ್ದಾಳೆ ಎಂದು ನೀನು ಏಗೆ ಹೇಳುತ್ತಿದ್ದೀಯಾ ಎಂದು ಪ್ರಶ್ನಿಸಿದಳು ಮಹಿಳಾ ಉದ್ಯೋಗಿ..

ಇದಕ್ಕೆ ಉತ್ತರಿಸಿದ ರೋಮನ್ ನನ್ನ ತಾಯಿಯ ಕಣ್ಣು ಮುಚ್ಚಿದೆ, ಉಸಿರಾಟ ಕೂಡ ಇಲ್ಲ ಎಂದು ಹೇಳಿದ. ಒಂದು ಬಾರಿ ನಿನ್ನ ತಾಯಿಯನ್ನು ಜೋರಾಗಿ ಕೂಗು ಎಂದು ಹೇಳಿದಳು ಮಹಿಳಾ ಉದ್ಯೋಗಿ.. ನಾನು ಎಷ್ಟೇ ಸಾರಿ ಕೂಗಿದರು ಆಕೆ ಎದ್ದೇಳುತ್ತಿಲ್ಲ ಎಂದು ಉತ್ತರಿಸಿದನು ರೋಮನ್. ಆಗ ತಕ್ಷಣ ರೋಮನ್ ನಿಂದ ಅಡ್ರೆಸ್ ಪಡೆದ ಮಹಿಳಾ ಉದ್ಯೋಗಿ ನಿಮ್ಮ ಮನೆಗೆ ಪೋಲಿಸರನ್ನು ಕಳಿಸುತ್ತೇನೆ ಎಂದು ಹೇಳಿದರು. 13 ನಿಮಿಷಕ್ಕೆ ಆಂಬ್ಯುಲೆನ್ಸ್ ಬಂತು.. ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಲಾಯಿತು.. ಕೊನೆಗೆ ರೋಮನ್ ತಾಯಿ ಬದುಕುಳಿದಳು. ನಾನು ಜನ್ಮ ಕೊಟ್ಟ ಮಗ ನನಗೆ ಪುನರ್ಜನ್ಮ ಕೊಟ್ಟಿದ್ದಾನೆ ಎಂದು ಹೇಳಿದ ತಾಯಿ ಮಗನನ್ನು ಅಪ್ಪಿಕೊಂಡು ಕಣ್ಣೀದು ಆಕಿದರು..