Advertisements

ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯಡಿ 3 ತಿಂಗಳು ಗ್ಯಾಸ್ ಸಿಲಿಂಡರ್ ಉಚಿತ ! ಇಲ್ಲಿದೆ ಸಂಪೂರ್ಣ ಮಾಹಿತಿ..

News

ಕೊರೋನಾ ಹಿನ್ನಲೆ ಲಾಕ್ ಡೌನ್ ಆದ ಪರಿಣಾಮ ಬಡವರು, ನಿರ್ಗತಿಕರು, ವಲಸೆ ಕಾರ್ಮಿಕರು ಬಾರಿ ಸಂಕಷ್ಟಕ್ಕೆ ಒಳಗಾಗಿದ್ದರು. ರಾಜ್ಯ ಸರ್ಕಾರ ಕೂಡ ಹಲುವ್ಯ್ ಯೋಜನೆಗಳ ಮೂಲಕ ಸಂಕಷ್ಟಕ್ಕೆ ಒಳಗಾದವರ ನೆರವಿಗೆ ಬಂದಿದೆ. ಈಗ ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯ ಅಡಿಯಲ್ಲಿ ಮೂರೂ ಸಿಲಿಂಡರ್ ಗಳನ್ನ ಉಚಿತವಾಗಿ ಕೊಡಲಾಗುತ್ತಿದೆ.

Advertisements

ಹೌದು, ಸಿಎಂ ಅನಿಲ ಭಾಗ್ಯ ಯೋಜನೆಯ ಅಡಿಯಲ್ಲಿ ಕಲ್ಬುರ್ಗಿಯ 7845 ಫಲಾನುಭವಿಗಳು ಮೂರೂ ತಿಂಗಳವರೆಗೆ ತಿಂಗಳಿಗೆ ಒಂದು ಸಿಲಿಂಡರ್ ನಂತೆ ಮೂರು ಸಿಲಿಂಡರ್ ಗಳನ್ನ ಉಚಿತವಾಗಿ ಪಡೆಯಲಿದ್ದಾರೆ. ಇನ್ನು ಈ ಯೋಜನೆ ಏಪ್ರಿಲ್ ೨೦೨೦ರಿಂದ ಜಾರಿಗೆ ಬರುವಂತೆ ಸರ್ಕಾರ್ರ ಆದೇಶ ಮಾಡಿದ್ದು ಮುಂದಿನ ಮೂರೂ ತಿಂಗಳವರೆಗೆ ಉಚಿತವಾಗಿ ಒಟ್ಟು ಮೂರೂ ಸಿಲಿಂಡರ್ ಗಳನ್ನ ಉಚಿತವಾಗಿ ಫಲಾನುಭವಿಗಳು ಪಡೆಯಬಹುದಾಗಿದೆ.

ಇನ್ನು ಈಗಾಗಲೇ ಏಪ್ರಿಲ್ ೨೨ ರಂದೆ ಸರ್ಕಾರ ಈ ಆದೇಶ ಹೊರಡಿಸಿದೆ ಕಲ್ಬುರ್ಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಇನ್ನು ಈಗಾಗಲೇ ಕಲ್ಬುರ್ಗಿ ಜಿಲ್ಲೆಯ 7845 ಫಲಾನುಭವಿಗಳ ಮಾಹಿತಿ ಆಹಾರ ನಿರೀಕ್ಷಕರ ಬಳಿ ಲಭ್ಯವಿದ್ದು, ಒಂದು ವೇಳೆ ಫಲಾನುಭವಿಗಳಲ್ಲಿ ಯಾರಾದದ್ದಾದರು ಮಾಹಿತಿ ತಪ್ಪಿದ್ದಲ್ಲಿ ಜೂನ್ ೧೪ರ ಒಳಗೆ ಆಯಾ ತಲ್ಲೂಕಿನಲ್ಲಿರುವ ಆಹಾರ ಕಚೇರಿಗೆ ಭೇಟಿ ನೀಡಿ ತಿದ್ದುಪಡಿ ಮಾಡಿಸಿಕೊಳ್ಳಬೇಕು ಎಂದು ಹೇಳಲಾಗಿದೆ.