Advertisements

ನೀವು ಗಂಧರ್ವಸೇನ ರಾಜನ ಈ ಕತೆ ಕೇಳಿದ್ರೆ ಹೊಟ್ಟೆ ಹುಣ್ಣಾಗುವಷ್ಟು ಬಿದ್ದು ಬಿದ್ದು ನಗುತ್ತೀರಿ..

Entertainment

ಒಂದು ರಾಜ್ಯ , ಆ ರಾಜ್ಯದಲ್ಲಿ ಒಂದು ದಿನ ಅರಸ ಸಿಂಹಾಸನದ ಮೇಲೆ ಕುಳಿತು ರಾಜ್ಯಬಾರ ಮಾಡುತ್ತಿರುತ್ತಾನೆ. ಈ ಸಮಯದಲ್ಲಿ ಎಲ್ಲಿಂದಲೋ ಓಡಿ ಬಂದ ಮಂತ್ರಿ ಒಂದೇ ಉಸಿರಿಗೆ ಮಹಾರಾಜರೇ ಗಂಧರ್ವ ಸೇನರು ತೀ’ರಿಹೋದರು ಎಂದು ಅಳುತ್ತಾ ಹೇಳಿ ಪ್ರಜ್ಞೆ ತಪ್ಪಿ ಬೀಳುತ್ತಾನೆ. ಈ ಮಾತನ್ನು ಕೇಳಿ ರಾಜನಿಗೆ ದುಃಖವಾಗುತ್ತದೆ. ಅವನು ನೋವಿನಿಂದ ಅಳಲು ಪ್ರಾರಂಭಿಸುತ್ತಾನೆ. ಗಂಧರ್ವ ಸೇನನ ಆತ್ಮ ಶಾಂತಿಗಾಗಿ ನಾಲ್ಕು ದಿನ ರಾಜ್ಯದಲ್ಲಿ ಶೋ’ಕಾಚರಣೆ ಮಾಡಲು ಆಜ್ಞೆ ಮಾಡುತ್ತಾನೆ. ಜೊತೆಗೆ ಮಂತ್ರಿಗೆ ಚಿಕಿತ್ಸೆ ನೀಡುವಂತೆ ರಾಜಭಟರಿಗೆ ಸೂಚಿಸುತ್ತಾನೆ. ಅರಮನೆಯ ತುಂಬಾ ದುಃಖ ಆವರಿಸುತ್ತದೆ.

Advertisements

ತನ್ನ ಅಂತಃಪುರಕ್ಕೆ ಬಂದ ರಾಜ ಶೋಕದಲ್ಲಿ ಮುಳುಗಿ ಕುಳಿತು ಕೊಂಡಿರುತ್ತಾರೆ. ಇದನ್ನು ಕಂಡ ಅವನ ರಾಣಿಯರು ತಮ್ಮ ಪತಿಯ ದುಃಖವನ್ನು ಕಂಡು ತಾವು ಸಹ ದುಃಖಿತರಾಗಿ ಕಣ್ಣೀರು ಸುರಿಸುತ್ತಾರೆ. ಇದನ್ನೆಲ್ಲ ಕಂಡ ರಾಣಿಯ ಸೇವಕಿ ಎಲ್ಲರೂ ಹೀಗೆ ದುಃಖದಿಂದ ಇರಲು ಕಾರಣವೇನೆಂದು ಕೇಳುತ್ತಾಳೆ. ಆಗ ರಾಣಿ ಗಂಧರ್ವ ಸೇನಾ ಸ’ತ್ತು ಹೋದರು ಎಂದು ಅಳುತ್ತಾ ಹೇಳುತ್ತಾಳೆ. ಆದರೆ ಈ ಗಂಧರ್ವ ಸೇನಾ ಯಾರು ಎಂದು ಸೇವಕಿ ಮರುಪ್ರಶ್ನೆ ಹಾಕುತ್ತಾಳೆ. ಆಗ ರಾಣಿ, ನನಗೂ ಗೊತ್ತಿಲ್ಲ ತಡಿ, ಮಹಾರಾಜರ ಬಳಿ ಕೇಳುತ್ತೇನೆ ಎಂದು ಬಂದವಳು ಈ ಗಂಧರ್ವ ಸೇನಾ ಯಾರು ಮತ್ತು ನಿಮಗೂ ಅವರಿಗೂ ಇರುವ ಸಂಬಂಧ ಏನು ಎಂದು ಕೇಳುತ್ತಾಳೆ. ಆಗ ರಾಜ ನನಗೂ ಗೊತ್ತಿಲ್ಲ ತಾಳು ಮಂತ್ರಿಯನ್ನು ಕರೆದು ಕೇಳುತ್ತೇನೆ ಎಂದು ಮಂತ್ರಿಯನ್ನು ಕರೆಸಿ ಕೇಳುತ್ತಾನೆ.

ಆಗ ಮಂತ್ರಿ ನನಗೂ ಗೊತ್ತಿಲ್ಲ. ಸೇನೆಯ ಮುಖ್ಯಸ್ಥ ಗಂಧರ್ವ ಸೇನಾ ಸ’ತ್ತು ಹೋದ ಎಂದು ಗಟ್ಟಿಯಾಗಿ ಆಳುತ್ತಿದ್ದ ಆದ ಕಾರಣ ಈ ವಿಷಯವನ್ನು ತಮಗೆ ತಿಳಿಸಿದೆ ಎನ್ನುತ್ತಾನೆ. ಇದರಿಂದ ಕೋಪಗೊಂಡ ರಾಜ ಗಂಧರ್ವ ಸೇನಾ ಯಾರೆಂದು ಪತ್ತೆ ಮಾಡಿಕೊಂಡು ಬರುವಂತೆ ಆಜ್ಞಾಪಿಸುತ್ತಾನೆ. ಸೇನೆಯ ಮುಖ್ಯಸ್ಥ ನ ಬಳಿ ಬಂದ ಮಂತ್ರಿ ಕೂಡಲೇ ಈ ಗಂಧರ್ವ ಸೇನಾ ಯಾರು ತಿಳಿಸು ಎಂದು ಕೇಳುತ್ತಾನೆ. ಆಗ ಅಯ್ಯೋ ಆ ಬಗ್ಗೆ ನಾನು ಏನು ಹೇಳಲಿ ಆ ಮಹಾನುಭಾವರು ಯಾರೆಂದು ನನಗೆ ತಿಳಿಯದು ಆದರೆ ಅವರು ಸ’ತ್ತು ಹೋಗಿದ್ದಾರೆ. ಈ ವಿಷಯ ನನಗೆ ನನ್ನ ಹೆಂಡತಿಯೇ ಹೇಳಿದ್ದು. ಅವಳು ಸ್ವತಃ ದುಃಖದಲ್ಲಿ ಇದ್ದಾಳೆ ಎಂದನು. ಮಂತ್ರಿಗೆ ತಲೆ ಕೆಟ್ಟು ಹೋಯಿತು. ಇಬ್ಬರೂ ಸೇನಾ ಮುಖ್ಯಸ್ಥನ ಮನೆಗೆ ಹೋಗಿ ಅವನ ಹೆಂಡತಿಯನ್ನು ವಿಚಾರಿಸಿದರು.

ಆಗ ಅವಳು ನನಗೆ ಗಂಧರ್ವ ಸೇನಾ ಪರಿಚಯ ಇಲ್ಲ. ಆದರೆ ಬಟ್ಟೆ ತೊಳೆಯಲು ಹೊಳೆಗೆ ಹೋದಾಗ ಅಲ್ಲಿ ಮಡಿವಾಳ್ತಿ ಗಂಧರ್ವ ಸೇನಾ ಸ’ತ್ತು ಹೋದ ಎಂದು ಬಾಯಿ ಬಡಿದುಕೊಂಡು ಜೋರಾಗಿ ಅಳುತ್ತಿದ್ದಳು ಎಂದಳು. ಸರಿ ಮೂವರು ಸೇರಿ ಮಾಡಿವಾಳ್ತಿಯ ಬಳಿ ಗಂಧರ್ವ ಸೇನಾ ನ ಬಗ್ಗೆ ವಿಚಾರಿಸಲು ಹೋದರು. ಅಲ್ಲಿ ಮಡಿವಾಳತಿಯನ್ನು ಈ ಕುರಿತು ಕೇಳಿದಾಗ, ಅವಳು ಅಳುತ್ತಾ ಅಯ್ಯೋ ದೇವರು ನನಗೆ ಅನ್ಯಾಯ ಮಾಡಿಬಿಟ್ಟ. ನನ್ನ ಗಂಧರ್ವ ಸೇನನನ್ನು ನನ್ನಿಂದ ಕಿತ್ತುಕೊಂಡ. ಅವನನ್ನು ನಾನು ಬಹಳ ಪ್ರೀತಿಯಿಂದ ಬೆಳೆಸಿದ್ದೇ. ನೆನ್ನೆ ರಾತ್ರಿ ಸ’ತ್ತು ಹೋದ. ಅವನೇ ನಾನು ಸಾಕಿದ ಮುದ್ದು ಕತ್ತೆ. ನನ್ನ ಒಗೆದ ಬಟ್ಟೆಗಳನ್ನು ಹೋರುತಿದ್ದ, ನನ್ನ ವ್ಯವಹಾರಕ್ಕೆ ಆಸರೆಯಾಗಿದ್ದ ಎಂದು ಅಳತೊಡಗಿದಳು.

ಇದನ್ನು ಕೇಳಿದ ಮಂತ್ರಿ, ಸೇನೆಯ ಮುಖ್ಯಸ್ಥ ಮತ್ತು ಅವನ ಹೆಂಡತಿ ಒಬ್ಬರ ಮುಖ ಒಬ್ಬರು ನೋಡಿಕೊಂಡು ಅಲ್ಲಿಂದ ಓಡಿಹೋದರು. ಇತ್ತ ಮಂತ್ರಿ ಅರಮನೆಗೆ ಬಂದು ಗಂಧರ್ವ ಸೇನಾ ಮಡಿವಾಳತಿಯ ಕತ್ತೆ ಎಂಬ ವಿಷಯವನ್ನು ಹೇಳಿದ. ಇದರಿಂದ ಕೋಪ ಕೊಂಡ ರಾಜ ಮಂತ್ರಿಯನ್ನು ಚೆನ್ನಾಗಿ ಬೈದು ಕಳುಹಿಸಿದ. ಇದನ್ನು ಕೇಳಿಸಿಕೊಂಡ ರಾಜನ ರಾಣಿಯರು ಮತ್ತು ಸೇವಕಿಯರು ಮಾತ್ರ ಹೊಟ್ಟೆ ನೋಯುವವರೆಗೆ ನಕ್ಕರು. ನಿಮಗೂ ಈ ಕತೆ ಕೇಳು ನಗು ಬಂದಿದ್ರೆ ಕಾ’ಮೆಂಟ್ ಮಾಡಿ ಅಭಿಪ್ರಾಯ ತಿಳಿಸಿ..