Advertisements

ತಂದೆ ಶ್ರೀಮಂತರಾಗಿದ್ರು ಕೂಡ ಗಾರ್ಮೆಂಟ್ಸ್ ಕೆಲಸಕ್ಕೆ ಹೋಗಿ ಸ್ಟಾರ್ ನಟನಾಗಿ ಬೆಳೆದ ಈ ವ್ಯಕ್ತಿ ಯಾರು ಗೊತ್ತಾ?

Cinema Inspire

ನಮ್ಮ ತಂದೆ ತಾಯಿ ಮಾಡಿರುವ ಆಸ್ತಿಗಿಂತ ನಾವು ನಮ್ಮ ಸ್ವಾಭಿಮಾನದಿಂದ ಸ್ವಂತ ಪರಿಶ್ರಮದಿಂದ ಹತ್ತು ರುಪಾಯಿ ದುಡಿದರು ಏನೋ ಒಂದು ಸಂತೋಷ ಇರುತ್ತದೆ, ಆತ್ಮ ತೃಪ್ತಿ ಸಿಗುತ್ತದೆ.. ಇದು ನನ್ನ ಸ್ವಂತ ಪರಿಶ್ರಮ ಎನ್ನುವ ಹೆಮ್ಮೆ ಇರುತ್ತದೆ. ಆತ್ಮಾಭಿಮಾನ ಇರುತ್ತದೆ. ಈ ಖ್ಯಾತ ನಟನ ಮಗ ಕೂಡ ತನ್ನ ಸ್ವಂತ ಪರಿಶ್ರಮದಿಂದ ತನ್ನ ತಂದೆಯ ಬಳಿ ಕೈಚಾಚ ಬಾರದು.. ನನ್ನ ತಂದೆಯ ಶ್ರೀಮಂತಿಕೆ ನನ್ನ ಹೆಸರಿನ ಜೊತೆ ಸೇರಿಸಕೊಳ್ಳಬಾರದು ಎನ್ನುವ ಉದ್ದೇಶದಿಂದ ಗಾರ್ಮೆಂಟ್ಸ್ ಫ್ಯಾಕ್ಟರಿ ಒಂದರಲ್ಲಿ ಯಾರಿಗೂ ತಿಳಿಯದಂತೆ ಕೇವಲ ಒಂದು ಸಾವಿರ ಸಂಬಳ ಕೆಲಸಕ್ಕೆ ಸೇರಿಕೊಳ್ಳುತ್ತಾರೆ.‌ ಆದರೆ ಇವರು ದೊಡ್ಡ ಸ್ಟಾರ್ ಆಗಿ ಸಿನಿಮಾ ರಂಗದಲ್ಲಿ ಮಿಂಚುತ್ತಿದ್ದಾರೆ..

[widget id=”custom_html-3″]

Advertisements

ಅಂದಿನ ಕಾಲದ ತಮಿಳಿನ ಖ್ಯಾತ ನಟ ಶಿವಕುಮಾರ್ ಅವರ ಮಗ ಈಗಿನ ತಮಿಳಿನ ಖ್ಯಾತ ನಟ ಸೂರ್ಯ. ನಟ ಸೂರ್ಯ ಚಿಕ್ಕಂದಿನಿಂದಲೂ ತುಂಬಾ ಸ್ವಾಭಿಮಾನದ ಹುಡುಗ ಸೂರ್ಯ ತಂದೆ ಶಿವಕುಮಾರ್ ಅವರು ಸಹ ತಾನೊಬ್ಬ ದೊಡ್ಡ ನಟ ನನ್ನ ಬಳಿ ಹತ್ತಾರು ಕೋಟಿ ಹಣವಿದೆ ಎಂದು.. ಎಂದಿಗೂ ಸಹ ಬೀಗಲಿಲ್ಲ. ತನ್ನ ಮಗನಿಗೂ ಶ್ರೀಮಂತಿಕೆಯ ಅಹಂ ಅನ್ನು ತುಂಬಲಿಲ್ಲ.. ಶಿವಕುಮಾರ್ ಅವರು ಮಕ್ಕಳನ್ನು ಸಾಮನ್ಯರಲ್ಲಿ ಸಾಮಾನ್ಯರಂತೆ ಬೆಳೆಸಿದರು.. ಸೂರ್ಯ ಅವರಿಗೆ ಸಿನಿಮಾಗಳಲ್ಲಿ ನಟಿಸಲು ಆಸಕ್ತಿ ಇರಲಿಲ್ಲ‌. ತಾನೊಬ್ಬ ಸ್ಟಾರ್ ಮಗ ಎಂದು ಹೇಳಿಕೊಳ್ಳದೇ ಸುಮಾರು 8 ತಿಂಗಳು ಗಾರ್ಮೆಂಟ್ಸ್ ಒಂದರಲ್ಲಿ ಕೆಲಸ ಮಾಡಿದರು.. ನಂತರ ಆ ಕೆಲಸದಲ್ಲಿ ಅವರಿಗೆ ತೃಪ್ತಿ ಸಿಗಲಿಲ್ಲ. ಕೆಲವು ಸಿನಿಮಾ ಆಫರ್ ಗಳನ್ನು ತಿರಸ್ಕರಿಸಿದ್ದ ಸೂರ್ಯ..

[widget id=”custom_html-3″]

1997 ರಲ್ಲಿ ಮಣಿರತ್ನಂ ಸಿನಿಮಾ ಒಂದರಲ್ಲಿ ನಾಯಕ ನಟನಾಗಿ ಸಿನಿಮಾ ರಂಗ ಪ್ರವೇಶ ಮಾಡಿದರು. ದೊಡ್ಡ ಸ್ಟಾರ್ ನಟನ ಮಗನಾಗಿದ್ದರು ಸೂರ್ಯ ಅವರಿಗೆ ಯಶಸ್ಸು ಸುಲಭವಾಗಿ ದಕ್ಕಲಿಲ್ಲ. ತನ್ನ ಸ್ವಂತ ಪ್ರತಿಭೆಯಿಂದ ಸಿನಿಮಾ ರಂಗದಲ್ಲಿ ಮೇಲೆ ಬಂದರು ನಟ ಸೂರ್ಯ.. ಇಂದು ತಮಿಳು ಚಿತ್ರರಂಗದಲ್ಲಿ ತನ್ನದೇ ಆದ ಇಮೇಜ್ ಹೊಂದಿರುವ ಸೂರ್ಯ ತಮಿಳು ಚಿತ್ರರಂಗದಲ್ಲಿ ದೊಡ್ಡ ಸೂಪರ್ ಸ್ಟಾರ್ ಆಗಿ ಬೆಳೆದಿದ್ದಾರೆ. ಆದರೆ ಅಂದಿನ ಸರಳ ಸಜ್ಜನಿಕೆ ಸೂರ್ಯ ಅವರಲ್ಲಿ ಇದಿಗೂ ಇದರ..

ಇವರ ತಮ್ಮ ಕಾರ್ತಿಕ್ ಕೂಡ ತಮಿಳಿನ ಸ್ಟಾರ್ ನಟರಾಗಿ ಮಿಂಚುತ್ತಿದ್ದಾರೆ.. ಇಂದು ಎಷ್ಟೋ ಜನ ಸಾಧನೆ ಮಾಡಿದರು ತಲೆ ನಿಲ್ಲುವುದಿಲ್ಲ. ಅಹಂಕಾರ ತೋರುತ್ತಾರೆ. ಸಾಮಾನ್ಯರನ್ನು ಕ್ಷೀಣವಾಗಿ ಕಾಣುತ್ತಾರೆ.. ಈಗಿರುವಾಗ ಕೋಟಿ ಕೋಟಿ ದುಡಿಯುವ. ಸಿನಿಮಾಗಳಲ್ಲಿ ದೊಡ್ಡ ಹೆಸರು ಮಾಡಿರುವ ಸೂರ್ಯ ಅವರ ಸರಳತೆ ಸ್ವಾಭಿಮಾನದ ಬಗ್ಗೆ ತುಂಬಾ ಹೆಮ್ಮೆ ಎನಿಸುತ್ತದೆ.. ನಟ ಸೂರ್ಯ ಅವರ ಸಾಧನೆ ಬಗ್ಗೆ ನಿವೇನು ಹೇಳುವುದಕ್ಕೆ ಇಷ್ಟ ಪಡ್ತೀರಾ.