Advertisements

ಗಟ್ಟಿಮೇಳದಲ್ಲಿ ಅಮೂಲ್ಯಳನ್ನು ಮದುವೆ ಆಗುತ್ತಿದ್ದಂತೆ ಇತ್ತ ನಟ ವೇದಾಂತ್ ಜೀವನದಲ್ಲಿ ಏನಾಗಿದೆ ಗೊತ್ತಾ?

Cinema Entertainment

ಗಟ್ಟಿಮೇಳ ಸದ್ಯ ಕನ್ನಡ ಕಿರುತೆರೆಯಲ್ಲಿ ಕಳೆದ ಎರಡೂವರೆ ವರ್ಷದಿಂದ ಪ್ರಸಾರವಾಗುತ್ತಿದ್ದು ಜನರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಈಗ ಧಾರವಾಹಿ ಶುರುವಾದ ಬಳಿಕ ಎರಡೂ ವರೆ ವರ್ಷದ ನಂತರ ಈಗ ನಾಯಕ, ನಾಯಕಿ ವೇದಾಂತ್ ಹಾಗೂ ಅಮೂಲ್ಯ ಇಬ್ಬರ ಕಲ್ಯಾಣ ನಡೆದು ಗಟ್ಟಿಮೇಳ ನಡೆಯಿತು. ಆದರೆ ಗಟ್ಟಿಮೇಳ ವೇದಾಂತ್ ನಿಜ ಜೀವನದಲ್ಲಿ ಬಹುದೊಡ್ಡ ಬದಲಾವಣೆ ಆಗಿದೆ. ಅದು ಏನು ಅಂತ ನೋಡಿ ಧಾರಾವಾಹಿ ಕಥೆಯಲ್ಲಿ ಯಾವುದೇ ಬದಲಾವಣೆ ಆಗದ ಕಾರಣ ಧಾರಾವಾಹಿ ರೇಟಿಂಗ್ ನಲ್ಲಿಯೂ ಸಹ ಕುಸಿತಗೊಂಡಿತ್ತು. ಆದರೆ ಇದೀಗ ಎರಡೂವರೆ ವರ್ಷದ ಬಳಿಕ ಧಾರವಾಹಿಯಲ್ಲಿ ಅಮೂಲ್ಯ ವೇದಾಂತ್ ಮದುವೆ ನಡೆಯಿತು ಮದುವೆ ಸಂಚಿಕೆಗಳಿಂದ ಶುರುವಾಗಿ ಸದ್ಯ ಈಗಲೂ ಧಾರಾವಾಹಿ ಮತ್ತೆ
ನಂಬರ್ ಒನ್ ಆಗಿದೆ.

[widget id=”custom_html-3″]

Advertisements

ಬಹಳಷ್ಟು ತಿಂಗಳುಗಳ ಬಳಿಕ ಗಟ್ಟಿಮೇಳ ಧಾರಾವಾಹಿ ನಂಬರ್ ಒನ್ ಆಗಿ ಕಳೆದ ಕೆಲವು ವಾರಗಳಿಂದ ಮುನ್ನಡೆಯುತ್ತಿದೆ. ಇತ್ತ ಧಾರವಾಹಿಯಲ್ಲಿ ವೇದಾಂತ್ ಗೆ ಮದುವೆ ಏನೋ ಆಯಿತು. ಆದರೆ ಅತ್ತ ನಿಜಜೀವನದಲ್ಲಿಯು ಸಹ ನಟ ವೇದಾಂತ್ ಜೀವನದಲ್ಲಿ ಬದಲಾವಣೆ ಆಗಿದೆ. ಹೌದು ಧಾರಾವಾಹಿ ಮತ್ತೆ ತನ್ನ ನಂಬರ್ ಒನ್ ಸ್ಥಾನ ಪಡೆಯಲು ನಟ ವೇದಾಂತ್ ಅವರ ವೈಯಕ್ತಿಕ ಜೀವನದಲ್ಲಿ ಆದ ಬದಲಾವಣೆಯೇ ಕಾರಣ ಹೌದು ಇಷ್ಟು ದಿನಗಳ ಕಾಲ ನಟನಾಗಿ ಮಾತ್ರ ಅಭಿನಯಿಸಿ ಆ ಧಾರಾವಾಹಿಯಲ್ಲಿ ಸಂಭಾವನೆ ಪಡೆಯುತ್ತಿದ್ದ ವೇದಾಂತ್ ಕೆಲವು ತಿಂಗಳ ಹಿಂದೆ ದಾರವಾಹಿ ನಿರ್ಮಾಪಕನ ಜವಾಬ್ದಾರಿ ವಹಿಸಿಕೊಂಡಿದ್ದರು.

[widget id=”custom_html-3″]

ಸೀರಿಯಲ್ ಅಲ್ಲಿ ಅವರನ್ನು ವೇದಾಂತ್ ಅಂತ ಕರೆಯುತ್ತಾರೆ ಆದರೆ ಅವರ ನಿಜವಾದ ಹೆಸರು ರಕ್ಷ. ಸದ್ಯ ನಟ ರಕ್ಷ್ ಹಾಗೂ ಅವರ ಪತ್ನಿ ಅನುಷಾ ಧಾರಾವಾಹಿ ನಿರ್ಮಾಪಕರಾಗಿದ್ದು ಧಾರಾವಾಹಿಯನ್ನ ಮತ್ತೆ ಒಳ್ಳೆಯ ರೇಟಿಂಗ್ ತರಬೇಕು ಅಂತ ಧಾರಾವಾಹಿಯಲ್ಲಿ ಸಾಕಷ್ಟು ಬದಲಾವಣೆ ತಂದು ಇದೀಗ ಅಂದುಕೊಂಡಿದ್ದನ್ನು ಸಾಧಿಸಿದ್ದಾರೆ. ಇನ್ನು ಈ ಬಗ್ಗೆ ಹಿಂದೆ ಮಾತನಾಡಿದ ರಕ್ಷ್ ಪತ್ನಿ ಅನುಷಾ ತನ್ನ ಬೆಂಬಲವಾಗಿ ನಿಂತಿದ್ದಕ್ಕೆ ಧನ್ಯವಾದಗಳು ಸಹ ತಿಳಿಸಿದ್ದು ಸದ್ಯ ಇದೀಗ ಅನೇಕ ಹೀರೋಗಳು ನಿರ್ಮಾಪಕರಾದ ಸಾಲಿಗೆ ನಟ ರಕ್ಷ್ ಕೂಡ ಸೇರಿಕೊಂಡಿದ್ದಾರೆ.ನಟನೆಯ ಜೊತೆಗೆ ನಿರ್ಮಾಪಕನ ಜರ್ನಿ ಆರಂಭಿಸಿರುವ ರಕ್ಷ್ ಗೆ ಶುಭವಾಗಲಿ.

[widget id=”custom_html-3″]