Advertisements

ನನ್ನ ಬಿಲ್ ಗೆ ನೀವ್ಯಾರು ಹಣ ಕೊಡುತ್ತಿಲ್ಲ..ಬೇಕಾದ ಡ್ರೆಸ್ ಹಾಕಿಕೊಳ್ಳುತ್ತೇನೆ ! ಹೀಗೇಕೆ ಹೇಳಿದ್ರು ಗಟ್ಟಿಮೇಳ ಸೀರಿಯಲ್ ನಟಿ..

Entertainment

ನಮಸ್ತೇ ಸ್ನೇಹಿತರೇ, ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಗಟ್ಟಿಮೇಳ ಧಾರವಾಹಿ ವಾರದಿಂದ ವಾರಕ್ಕೆ ಅತೀ ಹೆಚ್ಚು ವೀಕ್ಷಕರನ್ನ ಸೆಳೆಯುತ್ತಿದ್ದು ಉತ್ತಮ ಟಿಆರ್ಪಿ ಪಡೆದುಕೊಳ್ಳುತ್ತಿದೆ. ಇನ್ನು ಇದೇ ಧಾರಾವಾಹಿಯಲ್ಲಿ ಅದ್ಯಾ ಪಾತ್ರದಲ್ಲಿ ನಟಿಸುತ್ತಿರುವ ನಟಿ ಅನ್ವಿತಾ ಸಾಗರ್ ತಮ್ಮ ನಟನೆಯಿಂದ ವೀಕ್ಷಕರ ಗಮನ ಸೆಳೆದಿದ್ದಾರೆ. ಇನ್ನು ಆದ್ಯಾ ಕೂಡ ತನ್ನದೇ ಆದ ಅಭಿಮಾನಿ ಬಳಗವನ್ನ ಹೊಂದಿದ್ದಾರೆ. ಇನ್ನು ಇದರ ನಡುವೆಯೇ ಅವರ ಡ್ರೆಸ್ಸಿಂಗ್ ಸೆನ್ಸ್ ಬಗ್ಗೆ ನೆಟ್ಟಿಗರು ಕಾಮೆಂಟ್ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಇನ್ನು ನಟಿ ಅನ್ವಿತಾ ಸಾಗರ್ ಕಿರುತೆರೆ ಲೋಕಕ್ಕೆ ಎಂಟ್ರಿ ಕೊಡುವ ಮುಂಚೆಯೇ ತುಳು ಸಿನಿಮಾ ರಂಗದಲ್ಲಿ ನಾಯಕಿ ನಟಿಯಾಗಿ ಮಿಂಚಿದ್ದಾರೆ. ಗಟ್ಟಿಮೇಳ ಆದ್ಯಾ ಪಾತ್ರದಲ್ಲಿ ನಟಿಸುತ್ತಿರುವ ಅನ್ವಿತಾ ಸೀರಿಯಲ್ ನಲ್ಲಿ ಟ್ರೆಡಿಷನಲ್ ಡ್ರೆಸ್ ಗಳನ್ನ ಹಾಕಿಕೊಳ್ಳುತ್ತಾರೆ. ಆದರೆ ನಿಜ ಜೀವನದಲ್ಲಿ ಇದ್ಕಕೆ ತದ್ವಿರುದ್ದವಾಗಿರುವ ಅನ್ವಿತಾ ತುಂಬಾ ಮಾಡರ್ನ್. ಅವರು ತೊಡುವುದೇ ಮಾಡರ್ನ್ ಡ್ರೆಸ್ ಗಳನ್ನ. ಆದರೆ ಇದು ಇಷ್ಟವಿಲ್ಲದ ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ನಟಿ ಅನ್ವಿತಾ ಸಾಗರ್ ಬಗ್ಗೆ ಇಲ್ಲ ಸಲ್ಲದ ಕಾಮೆಂಟ್ ಗಳನ್ನ ಮಾಡುತ್ತಿದ್ದಾರೆ. ಇನ್ನು ಹೀಗೆ ತನ್ನ ಬಗ್ಗೆ ಮನಬಂದಂತೆ ಕಾಮೆಂಟ್ ಮಾಡುವರಿಗೆ ಅನ್ವಿತಾ ಅವರು ಖಡಕ್ ಆಗಿಯೇ ಉತ್ತರ ಕೊಟ್ಟಿದ್ದಾರೆ.

Advertisements

ನಾವು ಧಾರಾವಾಹಿಗಳಲ್ಲಿ ನಟಿಸುವ ಪಾತ್ರಗಳೇ ಬೇರೆ, ನಾವು ರಿಯಲ್ ಲೈಫ್ ನಲ್ಲಿ ಇರುವ ರೀತಿಯ ಬೇರೆ. ಎಲ್ಲರಂತೆ ನಾವು ಕೂಡ ಕಷ್ಟಪಟ್ಟು ಕೆಲಸ ಮಾಡಿ ಹಣ ಸಂಪಾದನೆ ಮಾಡುತ್ತೇವೆ. ಬಹು ಬೇಗ ಟಾರ್ಗೆಟ್ ಆಗುವ ಕಲಾವಿದರು ಪ್ರತೀ ದಿನ ಕಿರುತೆರೆಯ ಮೇಲೆ ಕಾಣಿಸಿಕೊಳ್ಳುತ್ತೇವೆ ಎಂದರೆ ಹೆಚ್ಚೆಚ್ಚು ಹಣ ಸಂಪಾದನೆ ಮಾಡುತ್ತೇವೆ ಎಂದರ್ಥವಲ್ಲ. ಸ್ವಲ್ಪ ದಿವಸ ಕೆಲಸ ಮಾಡಿದ್ರೆ ಹೆಚ್ಚು ದಿವಸ ಮನೆಯಲ್ಲೇ ಕೆಲಸ ಇಲ್ಲದೆ ಕೂರುವ ಪರಿಸ್ಥಿತಿ ಇರುತ್ತದೆ. ನಾವು ವಿಭಿನ್ನವಾಗಿ, ಮಾಡರ್ನ್ ಆಗಿ ಫೋಟೋ ಶೂಟ್ ಮಾಡಿಸುತ್ತೇವೆ ನಿಜ. ಆದರೆ ನಾವು ಅದನ್ನೆಲ್ಲಾ ನಮ್ಮ ತಂದೆ ತಾಯಿಗಳಿಗೆ ತೋರಿಸುತ್ತೇವೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ಫೋಟೋಗಳಿಗೆ ಮನಬಂದಂತೆ ಕಾಮೆಂಟ್ ಮಾಡುವವರು, ಕೆಟ್ಟದಾಗಿ ಟ್ರೋಲ್ ಮಾಡುವವರು ಅದನ್ನೆಲ್ಲಾ ಅವರ ತಂದೆ ತಾಯಿಗಳಿಗೆ ತೋರಿಸುವ ಧೈರ್ಯ ಎಂದು ಅದ್ಯಾ ಪಾತ್ರದಾರಿ ನಟಿ ಅನ್ವಿತಾ ಸಾಗರ್ ಖಡಕ್ ಆಗಿಯೇ ತಮ್ಮ ಫೋಟೋಗಳಿಗೆ ಕೆ’ಟ್ಟದಾಗಿ ಕಾಮೆಂಟ್ ಮಾಡುವವರ ಬಗ್ಗೆ ಕೆಂ’ಡ ಕಾರಿದ್ದಾರೆ.

ನಾನು ಎಲ್ಲಾ ತರಹದ ಮಾಡರ್ನ್ ಡ್ರೆಸ್ ಗಳನ್ನ ತೊಡುತ್ತೇನೆ. ನಾನು ಬದಲಾಗಿದ್ದೇನೆ ಎಂದು ನಿಮಗೆಲ್ಲರಿಗೂ ಅನ್ನಿಸಬಹುದು. ಆದರೆ ನನ್ನ ಬಗ್ಗೆ ಪೋಷಕರಿಗೆ ತಿಳಿದಿದೆ. ನನ್ನ ಊಟ ತಿಂಡಿಯ ಬಗ್ಗೆ ಆಗಿರಬಹುದು, ನಾನು ಎಲ್ಲಿಗೆಲ್ಲಾ ಹೋಗುತ್ತೇನೆ, ಏನೆಲ್ಲಾ ಮಾಡುತ್ತೇನೆ ಎಂಬುದರ ಬಗ್ಗೆ ನನ್ನ ಕುಟುಂಬದವರಿಗೆ ಗೊತ್ತಿದೆ. ನನ್ನ ಪ್ರತಿಯೊಂದು ಫೋಟೋಗಳನ್ನು ನನ್ನ ಕುಟುಂಬದವರಿಗೆ ತೋರಿಸುತ್ತೇನೆ. ಏಕೆಂದರೆ ನಾನು ಯಾವುದೇ ತಪ್ಪು ಮಾಡುತ್ತಿಲ್ಲ ಎನ್ನುವುದರ ಬಗ್ಗೆ ನಂಗೆ ಗೊತ್ತಿದೆ. ನನ್ನ ಬಿಲ್ ಗೆ ನೀವು ಯಾರು ಕೂಡ ಹಣ ಕೊಡುತ್ತಿಲ್ಲ. ನನ್ನ ಬಗ್ಗೆ ನೀವು ತಲೆ ಕೆಡಿಸಿಕೊಳ್ಳೂವ ಅವಶ್ಯಕತೆ ಇಲ್ಲ. ನಾನು ನನ್ನ ಪ್ರೊಫೆಷನ್ ಗೆ ಎಷ್ಟು ಗೌರವ ನೀಡುತ್ತೇನೋ ಹಾಗೆಯೆ ಒಳ್ಳೆಯ ದಾರಿಯಲ್ಲೇ ಹಣ ಸಂಪಾದನೆ ಮಾಡುತ್ತಿದ್ದೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯವನ್ನ ಹಂಚಿಕೊಂಡಿದ್ದಾರೆ ನಟಿ ಅನ್ವಿತಾ ಸಾಗರ್.