Advertisements

ಹೆಣ್ಮಕ್ಕಳ ನಿದ್ದೆ ಕದ್ದಿರುವ ಗಟ್ಟಿಮೇಳ ಸೀರಿಯಲ್ ನಟ ಧ್ರುವ ನಿಜಜೀವನದ ಬಗ್ಗೆ ಯಾರಿಗೂ ಗೊತ್ತಿಲ್ಲದ ಸತ್ಯ !

Entertainment

ಸ್ನೇಹಿತರೇ, ಕನ್ನಡದ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗಟ್ಟಿಮೇಳ ಮತ್ತು ಜೊತೆ ಜೊತೆಯಲಿ ಸೀರಿಯಲ್ ಗಳು ದಿನದಿಂದ ದಿನಕ್ಕೆ ಹೆಚೆಚ್ಚು ವೀಕ್ಷಕರನ್ನ ಆಕರ್ಷಿಸುತ್ತಾ ಟಾಪ್ TRP ರೇಟಿಂಗ್ಸ್ ನ್ನ ಪಡೆದುಕೊಂಡಿವೆ. ಇನ್ನು ಗಟ್ಟಿಮೇಳ ಸೀರಿಯಲ್ ನಲ್ಲಿ ಅಭಿನಯಿಸುತ್ತಿರುವ ಪ್ರತಿಯೊಂದು ಪಾತ್ರಗಳು, ಅದರ ಪಾತ್ರದಾರಿಗಳು ಅದ್ಭುತವಾಗಿ ನಟಿಸುತ್ತಿದ್ದು ಜನಮನ್ನಣೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಧ್ರುವ ಪಾತ್ರಧಾರಿಯಾಗಿ ನಟಿಸುತ್ತಿರುವ ನಟ ಕೂಡ ಹೆಚ್ಚು ಜನಮನ್ನಣೆಗೆ ಪಾತ್ರರಾಗಿದ್ದಾರೆ. ಇನ್ನು ಇವರ ನಿಜಜೀವನದ ಹೆಸರು ರಂಜನ್ ಎಂದು.

ಇನ್ನು ನೋಡಲು ಹ್ಯಾಂಡ್ಸಮ್ ಆಗಿರುವ ನಟ ರಂಜನ್ ಹುಟ್ಟಿದ್ದು ಮಂಡ್ಯದಲ್ಲಿ. ತಮ್ಮ ವಿಧ್ಯಭ್ಯಾಸದ ಬಳಿಕ ಅವರಿಗೆ ನಾನು ನಟನಾಗಬೇಕು ಎಂಬ ಆಸೆ ಮೂಡಿತಂತೆ. ಹಾಗಾಗಿ ನಟನೆಯನ್ನ ಕಲಿತೇ ಸಿನಿಮಾ ರಂಗ ಪ್ರವೇಶ ಮಾಡಬೇಕು ಎಂದು ನಿರ್ಧಾರ ಮಾಡಿದ ರಂಜನ್ ನಟ ನಿರ್ದೇಶಕ ನಾಗಾಭರಣವರು ನಡೆಸುತ್ತಿರುವ ಅಭಿನಯ ತರಭೇತಿ ಶಾಲೆಗೆ ೨೦೧೭ರಲ್ಲಿ ಸೇರಿಕೊಳ್ಳುತ್ತಾರೆ. ಇನ್ನು ನಟನೆಯ ತರಭೇತಿ ಮುಗಿದ ಬಳಿಕ ಅವಕಾಶಗಳಿಗಾಗಿ ಓಡಾಡಿದ ರಂಜಾನ್ ಸಿಕ್ಕ ಚಿಕ್ಕ ಪುಟ್ಟ ಪಾತ್ರಗಳಲ್ಲಿ ಅಭಿನಯಿಸುತ್ತಾರೆ.

Advertisements

ಇನ್ನು ಹಲವಾರು ಚಿತ್ರಗಳಲ್ಲಿ ಸಹಕಲಾವಿದನಾಗಿ ಅಭಿನಯಿಸಿದ ಬಳಿಕ ರಂಜನ್ ಅವರಿಗೆ ಇಷ್ಟದೇವತೆ ಎಂಬ ಸೀರಿಯಲ್ ನಲ್ಲಿ ವಿಲನ್ ಆಗಿ ಅಭಿನಯಿಸುವ ಅವಕಾಶ ಒದಗಿ ಬರುತ್ತದೆ. ಇನ್ನು ಈ ಧಾರವಾಹಿ ಬಳಿಕ ಅವರು ಕಾಣಿಸಿಕೊಂಡಿದ್ದೆ ಗಟ್ಟಿಮೇಳ ಸೀರಿಯಲ್ ನಲ್ಲಿ. ಧ್ರುವ ಪಾತ್ರಧಾರಿಯಾಗಿ ಅಭಿನಯಿಸಿದ ರಂಜನ್ ಗಟ್ಟಿಮೇಳ ಧಾರಾವಾಹಿಯಿಂದ ತುಂಬಾ ಫೇಮಸ್ ಆಗಿದ್ದು ನಾನೀಗ ಎಲ್ಲಿಯೇ ಹೋದರೂ ಗುರುತಿಸುತ್ತಾರೆ ಎಂದು ಅವರು ಹೇಳುತ್ತಾರೆ. ಇನ್ನು ಈಗ ಸಿನಿಮಾಗಳಲ್ಲಿ ನಟಿಸಲು ಅವಕಾಶಗಳು ಹುಡುಕಿಕೊಂಡು ಬರುತ್ತಿದೆಯಂತೆ ರಂಜನ್ ಗೆ. ಇನ್ನು ಇದೆಲ್ಲಾ ಸಾಕಾರಗೊಳ್ಳಲು ಸಾಧ್ಯವಾಗಿದ್ದು ಗಟ್ಟಿಮೇಳ ಧಾರಾವಾಹಿಯಿಂದ ಎಂದು ರಂಜನ್ ಹೇಳಿದ್ದಾರೆ.

ಇನ್ನು ನಟನೆಯ ಜೊತೆಗೆ ಜಿಮ್ ತರಭೇತಿದಾರ ಕೂಡ ಆಗಿರುವ ರಂಜನ್ ಗೆ ಸ್ಯಾಂಡಲ್ವುಡ್ ನ ನಾಯಕ ನಟರಲ್ಲಿ ಪುನೀತ್ ರಾಜ್ ಕುಮಾರ್ ಅವರೆಂದರೆ ಇವರಿಗೆ ತುಂಬಾ ಇಷ್ಟವಂತೆ. ಪುನೀತ್ ಅವರ ವ್ಯಕ್ತಿತ್ವ ಹಾಗೂ ಸರಳತೆಯಿಂದ ಅವರು ನನಗೆ ಸ್ಫೂರ್ತಿ ಎಂದು ರಂಜನ್ ಹೇಳಿದ್ದಾರೆ. ಕಿರುತೆರೆ ಮೂಲಕ ಜನರ ಮನಸನ್ನ ಗೆದ್ದಿರುವ ನಟ ರಂಜನ್ ಸಿನಿಮಾದಲ್ಲಿ ಹೀರೊ ಆಗಿ ಮಿಂಚಲಿ ಎಂಬುದೇ ನಮ್ಮೆಲ್ಲರ ಆಶಯ. ಸ್ನೇಹಿತರೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ನಿಮ್ಮ ಮೆಚ್ಚಿನ ಧಾರವಾಹಿ ಯಾವುದೆಂದು ಕಾಮೆಂಟ್ ನಲ್ಲಿ ತಿಳಿಸಿ..