Advertisements

ಖ್ಯಾತ ಸೀರಿಯಲ್ ಗಟ್ಟಿಮೇಳದ ನಟ ನಟಿಯರ ವಿದ್ಯಾಭ್ಯಾಸ ! ಎಷ್ಟು ಓದಿದ್ದಾರೆ ನೋಡಿ ನಿಮ್ಮ ನೆಚ್ಚಿನ ಕಲಾವಿದರು ?

Entertainment

ಮನರಂಜನೆಗೆ ಸಂಬಂಧಪಟ್ಟ ಕಾಲಕ್ಕೆ ತಕ್ಕಂತೆ ಹಾಗೆ ವೀಕ್ಷಕರ ಆಯ್ಕೆ ಬದಲಾಗುತ್ತಿದೆ. ಹೌದು, ಮೊದಲೆಲ್ಲಾ ಹೆಚ್ಚಾಗಿ ಸಿನಿಮಾಗಳನ್ನೇ ನೋಡುತ್ತಿದ್ದರು. ಆದರೆ ಸೀರಿಯಲ್ ಗಳನ್ನ ಅಷ್ಟಾಗಿ ಯಾರು ನೋಡುತ್ತಿರಲಿಲ್ಲ. ಆದರೆ ಈಗ ಆಗಿಲ್ಲ. ಸಿನಿಮಾಗಳಿಗಿಂತ ಕಿರುತೆರೆಯಲ್ಲಿ ಮೂಡಿಬರುವ ಧಾರಾವಾಹಿಗಳನ್ನೇ ಹೆಚ್ಚು ವೀಕ್ಷಣೆ ಮಾಡಲು ಜನ ಇಷ್ಟಪಡುತ್ತಿದ್ದಾರೆ. ಹೊಸ ಚಿತ್ರಗಳನ್ನ ಟಿವಿಯಲ್ಲಿ ಹಾಕಿದಾಗ ಎಷ್ಟು TRP ಬರುತ್ತಿತ್ತೋ ಅಷ್ಟೇ TRP ಈಗ ಸೀರಿಯಲ್ ಗಳ ಮೂಲಕ ಬರುತ್ತಿದೆ.

Advertisements

ಇದೆ ಕಾರಣದಿಂದಲೇ ಧಾರಾವಾಹಿಗಳ ಮೇಕಿಂಗ್ ಕೂಡ ಸಿನಿಮಾಗಳಂತಯೇ ಮಾಡುತ್ತಿದ್ದು ವೀಕ್ಷಕರ ಮನಸನ್ನ ತನ್ನತ್ತ ಸೆಳೆಯುವಲ್ಲಿ ಸೀರಿಯಲ್ ಗಳು ಯಶಸ್ವಿಯಾಗಿವೆ. ಇನ್ನು ಕನ್ನಡದ ಖಾಸಗಿ ವಾಹಿನಿಯಲ್ಲಿ ಮೂಡಿಬರುತ್ತಿರುವ ಗಟ್ಟಿಮೇಳ ಧಾರವಾಹಿ ಟಾಪ್ ಟಿಆರ್ ಪಿ ರೇಟಿಂಗ್ಸ್ ನಲ್ಲಿ ಪ್ರಸಾರವಾಗುತ್ತಿರುವ ಅತೀ ಹೆಚ್ಚು ವೀಕ್ಷಕರನ್ನು ಸೆಳೆದಿರುವ ಧಾರವಾಹಿ. ಕರ್ನಾಟಕದ ಮನೆ ಮನೆಗಳಲ್ಲಿ ಮಾತಾಗಿರುವ ಗಟ್ಟಿಮೇಳ ವೀಕ್ಷಕರಿಂಗೆ ತುಂಬಾ ಅಚ್ಚುಮೆಚ್ಚಿನದ್ದಾಗಿದೆ. ಇನ್ನು ಈ ಸೀರಿಯಲ್ ನಲ್ಲಿ ಅದ್ಭುತವಾಗಿ ನಟಿಸಿರುವ ನಟ ನಟಿಯರಿಗೂ ಕೂಡ ಅಭಿಮಾನಿಗಳಿದ್ದಾರೆ. ಇನ್ನು ತಮ್ಮ ಮೆಚ್ಚಿನ ನಟ ನಟಿಯರು ಎಷ್ಟು ಓದಿದ್ದಾರೆ ಎಂಬುದರ ಬಗ್ಗೆ ಅವರ ಅಭಿಮಾನಿಗಳಿಗೆ ಕುತೂಹಲ ಇದ್ದೆ ಇರುತ್ತದೆ..

ಅಂಜಲಿ ಪಾತ್ರ ಮಾಡುತ್ತಿರುವ ನಟಿ ಅಂಜಲಿ ೮ನೇ ತರಗತಿಯಲ್ಲಿ ಓದುತ್ತಿದ್ದರೆ, ಸಾಹಿತ್ಯ ಪಾತ್ರ ಮಾಡಿರುವ ಶರಣ್ಯ ಶೆಟ್ಟಿ ಬಿಬಿಎಂ ಓದಿಕೊಂಡಿದ್ದಾರೆ. ಧ್ರುವ ಪಾತ್ರ ನಿರ್ವಹಿಸುತ್ತಿರುವ ನಟ ರಂಜನ್ ಡಿಗ್ರಿ ಮಾಡಿದ್ದಾರೆ. ಇನ್ನು ಆದ್ಯಾ ಪಾತ್ರ ಮಾಡುತ್ತಿರುವ ಅನ್ವಿತಾ ಸಾಗರ್ ಬಿಕಾಂ ಪದವಿ ಮುಗಿಸಿದ್ದಾರೆ. ವಿಕ್ರಾಂತ್ ಪಾತ್ರದಲ್ಲಿ ಮಿಂಚಿರುವ ನಟ ಅಭಿಷೇಕ್ ದಾಸ್ ಕೂಡ ಪದವಿಯನ್ನ ಮಾಡಿಕೊಂಡಿದ್ದಾರೆ. ಆರತಿ ಪಾತ್ರ ಮಾಡುತ್ತಿರುವ ನಟಿ ಅಶ್ವಿನಿ ಫ್ಯಾಶನ್ ಡಿಸೈನರ್ ಕೋರ್ಸ್ ಮಾಡಿದ್ದಾರೆ.ಇನ್ನು ಅಧಿತಿ ಪಾತ್ರ ಮಾಡುತ್ತಿರುವ ಪರಿಮಳ ಆಚಾರ್ ಬಿಎಸ್ಸಿ ಮುಗಿಸಿದ್ದಾರೆ. ಇನ್ನು ಹಿರಿಯ ನಟಿ, ಹಾಸ್ಯ ಚಕ್ರವರ್ತಿ ನರಸಿಂಹರಾಜುರವರ ಪುತ್ರಿ ಸುಧಾ ನರಸಿಂಹರಾಜು ಪರಿಮಳ ಪಾತ್ರ ಮಾಡುತ್ತಿದ್ದು ಅವರು ಪಿಯುಸಿ ಮಾಡಿಕೊಂಡಿದ್ದಾರೆ.

ಇನ್ನು ಗಟ್ಟಿಮೇಳ ಧಾರಾವಾಹಿಯ ನಾಯಕ ನಟ ವೇದಾಂತ್ ಪಾತ್ರದಲ್ಲಿ ವೀಕ್ಷಕರ ಮನಸನ್ನ ಗೆದ್ದಿರುವ ರಕ್ಷ್ ಪದವಿ ಮುಗಿಸಿದ್ದಾರೆ. ಇನ್ನು ನಾಯಕಿ ನಟಿಯಾಗಿ ಅಮೂಲ್ಯ ಪಾತ್ರದಲ್ಲಿ ಮಿಂಚುತ್ತಿರುವ ನಿಶಾ ಮಿಲನ ಅವರು ವಾಣಿಜ್ಯ ವಿಭಾಗದಲ್ಲಿ ಪದವಿ ಮಾಡಿದ್ದಾರೆ. ಹಾಗಾದ್ರೆ ಗಟ್ಟಿಮೇಳ ಧಾರಾವಾಹಿಯ ಎಲ್ಲಾ ನಟ ನಟಿಯರಲ್ಲಿ ನಿಮ್ಮ ನೆಚ್ಚಿನ ಪಾತ್ರ ಯಾರು ಎಂಬುದನ್ನ ಕಾಮೆಂಟ್ ಮಾಡಿ ತಿಳಿಸಿ..