Advertisements

ಸಾಮಾನ್ಯ ಟೀಚರ್ ಆಗಿ ಕೆಲಸ ಮಾಡುತ್ತಿದ್ದ ಇವರು ಸ್ಟಾರ್ ನಟಿಯರಾಗಿದ್ದು ಹೇಗೆ ಗೊತ್ತಾ? ನೋಡಿ..

Cinema

ನಮಸ್ತೆ ಸ್ನೇಹಿತರೆ, ಜೀವನ ಅನ್ನುವುದು ಒಂದು ರೀತಿಯ ವಿಚಿತ್ರ.. ಯಾವ ಸಮಯದಲ್ಲಿ ಏನಾಗುತ್ತದೆ ಎಂದು ಊಹೆ ಮಾಡಲು ಸಾಧ್ಯವಾಗುವುದಿಲ್ಲ. ಆಗೆ ಪ್ರತಿಯೊಬ್ಬರ ಜೀವನದಲ್ಲಿ ಒಂದಲ್ಲ ಒಂದು ಯುಟರ್ನ್ ಸಿಗುತ್ತದೆ. ಸಾಮಾನ್ಯ ಶಿಕ್ಷಕಿಯರಾಗಿ ಕೆಲಸ ಮಾಡಿ ಸಾವಿರಗಳಲ್ಲಿ ಸಂಬಳ ಪಡೆಯುತ್ತಿದ್ದ ಇವರು ಸ್ಟಾರ್ ನಟಿಯರಾಗಿ ಬೆಳೆದಿದ್ದಾರೆ. ಇನ್ನೂ ಕೆಲವು ಶಿಕ್ಷಕಿಯರು ಕೋಟಿ ರೂಪಾಯಿಗಳಲ್ಲಿ ಸಂಬಳ ಪಡೆಯುತ್ತಿದ್ದಾರೆ.. ಮೈಸೂರಿನಲ್ಲಿ ಹುಟ್ಟಿ ಬೆಳೆದು ಇಂಗ್ಲೀಷ್ ವಿಭಾಗದಲ್ಲಿ ಎಮ್.ಎ ಮುಗಿಸಿದ ಮೇಲೆ ಇಂಟರ್ ವ್ಯೂ ನಲ್ಲಿ ಆಯ್ಕೆಯಾಗಿದ್ದು..

Advertisements

ಮುಂಬೈನಲ್ಲಿ ದಿರುಬಾಯಿ ಇಂಟರ್ನ್ಯಾಷನಲ್ ಸ್ಕೂಲ್ ಗೆ ಸಚಿನ್, ಶಾರುಖ್, ಅಂಬಾನಿಯವರಿಂದ ಹಿಡಿದು ಬಾಲಿವುಡ್ ನ ಟಾಪ್ ನಟರ ಮಕ್ಕಳು ಈ ನಟಿಯ ವಿದ್ಯಾರ್ಥಿಗಳಾಗಿದ್ದಾರು. ಆ ನಟಿ ಮತ್ಯಾರು ಅಲ್ಲ ಸಿಲ್ಲಿ ಲಲ್ಲಿ ಸೀರಿಯಲ್ ನಲ್ಲಿ ಲಲ್ಲಿ ಪಾತ್ರ ಮಾಡುತ್ತಿರುವ ಅಕ್ಷತಾ ಅವರು.. ಟೀಚರ್ ಕೆಲಸಕ್ಕೆ ರಾಜಿನಾಮೆ ಕೊಟ್ಟು ಈಗ ನಟನೆಗೆ ಇಳಿದು ಈ ಸೀರಿಯಲ್ ಮೂಲಕ ಒಳ್ಳೆಯ ಹೆಸರು ಗಳಿಸಿ ಸ್ಟಾರ್ ನಟಿಯಾಗಿ ಬೆಳೆಯುವತ್ತ ಹೆಜ್ಜೆ ಇಡುತ್ತಿದ್ದಾರೆ. ಶ್ರೀ ವ್ಯಾಸ ಕಾಲೇಜಿನಲ್ಲಿ ಇಂಗ್ಲಿಷ್ ಟೀಚರ್ ಆಗಿ ಕೆಲಸ ಮಾಡುತ್ತಿದ್ದವರು ನಟನೆ ಶುರುಮಾಡಿ, ನಂತರ ಮಲಯಾಳಂ ಚಿತ್ರರಂಗ ಹಾಗು ಕಿರುತೆರೆಯಲ್ಲಿ ಸೆಂಶೇಷನ್ ಕ್ರಿಯೇಟ್ ಮಾಡಿದ ನಟಿ ರಚನ ನಾರಾಯಣ ಕುಟ್ಟಿ..

ಸಾಮಾನ್ಯ ಟೀಚರ್ ಆಗಿದ್ದ ಇವರು ಈಗ ಹಲಾವರು ಸಿನಿಮಾಗಳಲ್ಲಿ ನಟಿಸಿ ದೊಡ್ಡ ಹೆಸರು ಮಾಡಿದ್ದಾರೆ. ಶಾಲೆಯಲ್ಲಿ ನೆಚ್ಚಿನ ಟೀಚರ್ ಆಗಿದ್ದ ಇವರು ಈಗ ನೆಚ್ಚಿನ ನಟಿಯಾಗಿದ್ದಾರೆ. ಎಮ್ ಎಸ್ ಡಬ್ಲ್ಯೂ ಮಾಡಿ ರಿಶಿ ವ್ಯಾಲಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದವರು ನಟಿ ನಂದಿತ ದಾಸ್.. ಕನ್ನಡ ಸಿನಿಮಾ ಒಂದರಲ್ಲಿ ನಟಿಸಿದ ಇವರು ನಾರ್ಮಲ್ ಟೀಚರ್ ಆಗಿ ಜೀವನ ಆರಂಭಿಸಿ ಈಗ ಹತ್ತು ಬಾಷೆಗಳಲ್ಲಿ ನಟಿಸಿದ್ದಾರೆ ಅಂದರೆ ಆಶ್ಚರ್ಯ ಆಗುತ್ತದೆ. ನಟನೆಗೆ ಪ್ರಮುಖ್ಯತೆ ಇರುವ ಪಾತ್ರಗಳನ್ನು ಮಾತ್ರ ಮಾಡುವ ನಂದಿತಾ ದಾಸ್ ಅವರು ಭಾರತದ ಅಪರೂಪದ ನಟಿಯಾಗಿ ಗುರುತಿಸಿಕೊಂಡಿದ್ದಾರೆ..

ತಮ್ಮ ಇಂಜಿನಿಯರಿಂಗ್ ವ್ಯಾಸಂಗ ಮುಗಿಸಿದ ಮೇಲೆ ಯೋಗ ಮೇಲೆ ಹೆಚ್ಚು ಆಸಕ್ತಿ ಒಂದಿದ್ದ ಅನುಷ್ಕಾ ಶೆಟ್ಟಿ ಮಂಗಳೂರು ಮತ್ತು ಬೆಂಗಳೂರಿನಲ್ಲಿ ಯೋಗ ಟೀಚರ್ ಆಗಿ ಕೆಲಸ ಮಾಡುತ್ತಿದ್ದಾರೆ. ಆನಂತರ ಪೂರಿ ಜಗನ್ನಾಥ್ ಕಣ್ಣಿಗೆ ಬಿದ್ದ ಅನುಷ್ಕಾ ಶೆಟ್ಟಿಗೆ ಸಿನಿಮಾದಲ್ಲಿ ಅವಕಾಶ ಸಿಕ್ಕಿತು.. ನಂತರ ದಕ್ಷಿಣ ಭಾರತದ ಟಾಪ್ ನಟಿಯಾಗಿ ಬೆಳೆದಿದ್ದಾರೆ. ಈಗೆ ಟೀಚರ್ ಆಗಿ ಜೀವನ ಆರಂಭಿಸಿ ನಂತರ ತಮ್ಮ ಗುರಿಯ ಬೆನ್ನಟ್ಟಿದ ಇವರು ಈಗ ಸ್ಟಾರ್ ಗಳಾಗಿ ಬೆಳೆದು ನಿಂತಿದ್ದಾರೆ.