Advertisements

ಘಾಟಿ ಸುಬ್ರಮಣ್ಯ ಗರ್ಭಗುಡಿಯಲ್ಲಿ ಕನ್ನಡಿ ಯಾಕೆ ಇಟ್ಟಿದ್ದಾರೆ ಗೊತ್ತಾ?

Temples

ಪ್ರಿಯ ಓದುಗರೆ ಸರ್ಪಗಳ ರಾಜ ಸುಬ್ರಹ್ಮಣ್ಯ ಸ್ವಾಮಿ ಒಂದೆಡೆ ನೆಲೆಸಿದರೆ, ಮತ್ತೊಂದೆಡೆ ದೇವಿಯರು ನೆಲೆಸಿರುತ್ತಾರೆ. ಆದರೆ ಈ ಪುಣ್ಯಕ್ಷೇತ್ರದಲ್ಲಿ ಸುಬ್ರಹ್ಮಣ್ಯ ಸ್ವಾಮಿ ಮತ್ತು ಲಕ್ಷ್ಮೀನಾರಾಯಣರು ಒಂದೇ ಕಡೆ ನೆಲೆಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆಯಲ್ಲಿ ಆದಿ ಸುಬ್ರಹ್ಮಣ್ಯ ನೆಲೆಸಿದರೆ, ಮಧ್ಯ ಸುಬ್ರಹ್ಮಣ್ಯ ಇರುವುದು ಬೆಂಗಳೂರಿನ ಘಾಟಿಯಲ್ಲಿ. ಇನ್ನು ಅಂತ್ಯ ಸುಬ್ರಹ್ಮಣ್ಯ ಇರೋದು ತುಮಕೂರ ಜಿಲ್ಲೆಯ ನಾಗಲಮಡಿಕೆಯಲ್ಲಿ. ಹೀಗೆ ಈ ಪುಣ್ಯಕ್ಷೇತ್ರಗಳು ಭಕ್ತರ ಆರಾಧ್ಯ ದ ಸ್ಥಳಗಳಾಗಿವೆ. ಈ ಕ್ಷೇತ್ರಗಳಲ್ಲಿ ಸರ್ಪದೋಷ ನಿವಾರಣೆ ಪೂಜೆ ಮಾಡಿಸಿದರೆ ಸರ್ಪ ದೋಷ ಪೂರ್ಣ ವಾಸಿಯಾಗುತ್ತದೆ ಎಂದು ನಂಬಿಕೆ ಇದೆ.
ಅದರಲ್ಲಿಯೂ ಮದ್ಯ ಸುಬ್ರಹ್ಮಣ್ಯಸ್ವಾಮಿ ನೆಲೆಸಿದ ಬೆಂಗಳೂರಿನ ಘಾಟಿಸುಬ್ರಹ್ಮಣ್ಯ ಹಲವಾರು ವಿಶೇಷತೆಗಳನ್ನು ಹೊಂದಿದೆ. ಇಲ್ಲಿ ಸುಬ್ರಹ್ಮಣ್ಯ ಸ್ವಾಮಿ ಜೊತೆಗೆ ಲಕ್ಷ್ಮೀನಾರಾಯಣರು ಒಂದೇ ಕಡೆ ನೆಲೆಸಿದ್ದು ವಿಶಿಷ್ಟವಾಗಿದೆ.

Advertisements

ಈ ಮೂರ್ತಿಗಳು ನೋಡಲು ಕೂಡ ಅಷ್ಟೇ ಭವ್ಯವಾಗಿವೆ. ಪೂರ್ವಾಭಿಮುಖವಾಗಿ ಸುಬ್ರಹ್ಮಣ್ಯ ಇದ್ದರೆ ಪಶ್ಚಿಮಾಭಿಮುಖವಾಗಿ ಲಕ್ಷ್ಮಿನರಸಿಂಹ ದೇವಿ ನಡೆಸಿದ್ದಾರೆ. ಸುಬ್ರಹ್ಮಣ್ಯ ಬೆನ್ನಮೇಲೆ ಲಕ್ಷ್ಮಿನರಸಿಂಹ ನೆಲೆಸಿದ್ದು ಅತಿವಿಶೇಷ. ಈ ಗರ್ಭಗುಡಿಯಲ್ಲಿ ಒಂದು ಕನ್ನಡಿಯನ್ನು ಹಾಕಲಾಗಿದೆ. ಇ ದೇವಸ್ಥಾನವನ್ನು 600 ವರ್ಷಗಳ ಹಿಂದೆ ಬಳ್ಳಾರಿ ಜಿಲ್ಲೆಯ ಸೊಲ್ಲರು ಸಂಸ್ಥಾನದ ಘೋರ್ಪಡೆ ರಾಜ ಇದನ್ನು ಪುನುರುಜ್ಜೀವನ ಮಾಡಿದ್ದಾರೆ ಎನ್ನಲಾಗಿದೆ. ಈ ದೇವಸ್ಥಾನಕ್ಕೆ ಹೋದಾಗ ಮೊದಲು ಗರ್ಭಗುಡಿಯಲ್ಲಿ ಸ’ರ್ಪ ರೂಪಿಯಾದ ಸುಬ್ರಹ್ಮಣ್ಯ ಸ್ವಾಮಿ ದರ್ಶನವಾಗುತ್ತದೆ. ಕನ್ನಡಿಯಲ್ಲಿ ಲಕ್ಷ್ಮೀನರಸಿಂಹ ರ ದರ್ಶನವಾಗುತ್ತದೆ.

ಇದು ಏಕಶಿಲೆಯಲ್ಲಿ ಸಾಲಿಗ್ರಾಮ ದಿಂದ ಕೂಡಿದ ಮೂರ್ತಿಯಾಗಿದೆ. ಹಾಗೆ ದೇವಸ್ಥಾನಕ್ಕೂ ಇಲ್ಲಿ ಭಾರೀ ಮಹತ್ವವಿದೆ. ಸರ್ಪ ಸಂಖ್ಯೆ ಕ್ಷೀಣಿಸುತ್ತಿರುವಾಗ ಘಾಟಿ ಸುಬ್ರಹ್ಮಣ್ಯ ಸ್ವಾಮಿ ಬಂದು ಈ ಸ್ಥಳದಲ್ಲಿ ತಪಸ್ಸು ಮಾಡಿದ್ದನಂತೆ. ಆಗ ಲಕ್ಷ್ಮಿನರಸಿಂಹ ರೂ ಪ್ರತ್ಯಕ್ಷವಾಗಿ ಸರ್ಪಗಳಿಗೆ ರಕ್ಷಣೆ ನೀಡುವುದಾಗಿ ಮಾತು ಕೊಡುತ್ತಾರಂತೆ. ಅದರಂತೆ ಇಂದೇ ನೆಲೆಸಿದ್ದರು ಎಂದು ಪುರಾಣಗಳು ಹೇಳುತ್ತವೆ. ನಂತರ ನಂಬಿದ ಭಕ್ತರ ದೋ’ಷಗ’ಳನ್ನು ನಿವಾರಿಸುವ ಸುಬ್ರಹ್ಮಣ್ಯಸ್ವಾಮಿ ನೆಲೆಸಿದ ಪ್ರದೇಶ ವಾಯಿತು. ನಂಬಿ ಬಂದ ಭಕ್ತರ ಕಲ್ಯಾಣಕ್ಕೆ, ಸಂತಾನ ಪ್ರಾಪ್ತಿಗೆ, ನಾಗದೋ’ಷ, ಅರ್ಧ ನಾಗದೋ’ಷ, ಜಾತಕ ನಾಗದೋಷ’ ಗಳನ್ನು ಕಳೆದು ಸುಖಿ ಇಂದ ಜೀವನ ಸಾಗಿಸಲು ಆಶೀರ್ವದಿಸುತ್ತಿದ್ದನೇ ಘಾಟಿ ಸುಬ್ರಹ್ಮಣ್ಯ ಸ್ವಾಮಿ. ಈ ಕ್ಷೇತ್ರ ಬೆಂಗಳೂರಿನಿಂದ 55 ಕಿಲೋ ಮೀಟರ್ ದೂರದಲ್ಲಿದ್ದು ಹೋಗಲು ವಾಹನಗಳ ಸೌಕರ್ಯವಿದೆ. ನೀವು ಒಮ್ಮೆ ಭೇಟಿ ನೀಡಿ ಪುನೀತರಾಗಿ..