Advertisements

ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರವನ್ನು ಕಿತ್ಕೊಂಡು ಹೋದ ಕಳ್ಳರು.. ನಂತರ ಅದೇ ಸ್ಪೀಡ್ ನಲ್ಲಿ ಹೋದ ಈ ಮಹಿಳೆ ಆ ಕಳ್ಳರಿಗೆ ಮಾಡಿದ್ದೇನು ಗೊತ್ತಾ?

Inspire Kannada Mahiti

ನಮಸ್ತೆ ಸ್ನೇಹಿತರೆ, ಒಬ್ಬ ಮಹಿಳೆ ದೈರ್ಯ ಮಾಡಿದರೆ ಏನು ಬೇಕಾದರೂ ಮಾಡಬಹುದು ಅನ್ನೊದಕ್ಕೆ ಉದಾಹರಣೆ ಈ ಘ’ಟನೆ.. ಒಬ್ಬ ಸಾಮಾನ್ಯ ಮಹಿಳೆ ಮಾಡಿದ ಕೆಲಸದಿಂದ ಆಕೆ ಎಲ್ಲಿಲ್ಲದ ಪ್ರಸಿಧ್ಧಿ ಗಳಿಸಿದ್ದಾಳೆ. ಆಕೆಯ ಬಗ್ಗೆ ಆಕೆಯ ದೈರ್ಯದ ಬಗ್ಗೆ ಜನ ಕತೆ ಕತೆಯಾಗಿ ಹೇಳಿಕೊಳ್ಳುತ್ತಿದ್ದಾರೆ.. ಮಹಿಳೆಯರಿಗೆ ಆದರ್ಶವಾಗಿ ನಿಂತಿರುವ ಅವರು ಮಾಡಿದ ಕೆಲಸ ಏನು ಗೊತ್ತಾ? ಇವರ ಹೆಸರು ಸ್ವಾಮ್ಯ. ವಯಸ್ಸು 28 ವರ್ಷ ಕೇರಳದ ಕೊಲ್ಲಂ ಜಿಲ್ಲೆಯ ತೆವಳಕಾರಂ ಪಟ್ಟಣದಲ್ಲಿ ಕುಟುಂಬದ ಜೊತೆ ವಾಸಿಸುತ್ತಿದ್ದಾರೆ ಸೌಮ್ಯ.. ಇವರ ಗಂಡ ಸಾಧಾರಣ ಟೈಲರ್. ಇವರಿಬ್ಬರಿಗೆ ಇಬ್ಬರು ಮಕ್ಕಳು. ಸೌಮ್ಯ ಒಂದು ಶಾಪ್ ನಲ್ಲಿ ಸೇಲ್ಸ್ ಮಾಡುವ ಕೆಲಸ ಮಾಡುತ್ತಿದ್ದಾರೆ..

Advertisements

ಆ ದಿನ ಕೂಡ ಎಂದಿನಂತೆ ಕೆಲಸ ಮುಗಿಸಿಕೊಂಡು ಸಾಯಂಕಾಲ ತನ್ನ ಸ್ಕೂಟಿಯಲ್ಲಿ ಮನೆಗೆ ಹೋಗುತ್ತಿದ್ದರು ಸೌಮ್ಯ. ಆದರೆ ಆಕೆಗೆ ಗೊತ್ತಿಲ್ಲದೇ ಆಕೆಯ ಹಿಂದೆ ಒಂದು ಬೈಕ್ ನಲ್ಲಿ ಇಬ್ಬರು ಹುಡುಗರು ಆಕೆಯನ್ನು ಫಾಲೋ ಮಾಡುತ್ತಿದ್ದರು.. ಸೌಮ್ಯ ಅವರ ಹತ್ತಿರ ಬಂದ ಬೈಕ್ ನವರು ಸೌಮ್ಯ ಕುತ್ತಿಗೆಗೆ ಕೈ ಹಾಕಿ ಆಕೆಯ ತಾಳಿ ಚೈನ್ ಕಿತ್ತುಕೊಂಡು ಅದೇ ವೇಗವಾಗಿ ಬೈಕ್ ನಲ್ಲಿ ಮುಂದೆ ಸಾಗಿದರು ಕ’ಳ್ಳರು. ಇದೆಲ್ಲ ಕೆಲವೇ ಕ್ಷಣಗಳಲ್ಲಿ ನಡೆದು ಹೋದ ಕಾರಣ ಒಂದು ಕ್ಷಣ ಶಾ’ಕ್ ಆದ ಸೌಮ್ಯ ತಕ್ಷಣ ಚೇತರಿಸಿಕೊಂಡು ಕಳ್ಳ ಕಳ್ಳ ಎಂದು ಜೋರಾಗಿ ಕೂಗಾಡುತ್ತಾ ತನ್ನ ಸ್ಕೂಟಿಯಲ್ಲಿ ಚೈನ್ ಕಳ್ಳರನ್ನು ಫಾಲೋ ಮಾಡಿದರು..

ಸುಮಾರು 4 ಕಿಲೋಮೀಟರ್ ಕ’ಳ್ಳರನ್ನು ಎಡಬಿಡದೆ ಫಾಲೋ ಮಾಡುತ್ತಾ ಮುನ್ನುಗ್ಗಿದ್ದರು ಸೌಮ್ಯ ಅವರು. ನಂತರ ಸ್ಪೀಡ್ ಹೆಚ್ಚಿಸಕೊಂಡ ಸೌಮ್ಯ ಅವರು ಓವರ್ ಸ್ಪೀಡ್ ನಲ್ಲಿ ಹೋಗಿ ಕ’ಳ್ಳರ ಬೈಕನ್ನು ಚೇಸ್ ಮಾಡಿ ಅವರ ಮುಂದೆ ಹೋಗಿ ಸ್ಕೂಟಿ ನಿಲ್ಲಿಸಿದರು.. ಕ’ಳ್ಳರ ಬೈಕ್ ಸೌಮ್ಯ ಅವರ ಬೈಕಿಗೆ ಡಿ’ಕ್ಕಿ ಹೊಡೆಯಿತು. ಆದರೂ ಹೆದರದ ಸೌಮ್ಯ ರಸ್ತೆಯ ಬದಿಯಲ್ಲಿ ಬಿದ್ದಿದ್ದ ಕಲ್ಲುಗಳನ್ನು ಕಳ್ಳರ ಕಡೆಗೆ ಎಸೆಯುತ್ತಾರೆ.. ಅಷ್ಟರೊಳಗೆ ಜನ ಸೇರಿದರು.. ಆಗ ಕಳ್ಳರಿಂದ ತಮ್ಮ ಚೈನ್ ಕಿತ್ತುಕೊಂಡು ಸೌಮ್ಯ ಅವರು ನಿಟ್ಟುಸಿರು ಬಿಟ್ಟರು.

ಇದರಿಂದ ಆಶ್ಚರ್ಯ ಚಕಿತರಾದ ಜನ ಕಳ್ಳರ ಬೈಕ್ ಚೇಸ್ ಮಾಡುವ ದೈರ್ಯ ನಿಮಗೆ ಎಲ್ಲಿಂದ ಬಂತು ಎಂದು ಸೌಮ್ಯ ಅವರನ್ನು ಕೇಳಿದಾಗ.. ನಾನು ತಾಳಿಗೆ ತುಂಬಾ ಗೌರವ ಕೊಡುತ್ತೇನೆ ಅದೇ ನನ್ನ ಪ್ರಾಣ, ಅದನ್ನು ಯಾರಾದರೂ ಕಿತ್ತುಕೊಂಡರೆ ಸುಮ್ಮನೆ ಇರ್ತೀನಾ.. ಅದಕ್ಕೆ ಅವರನ್ನು ಚೇಸ್ ಮಾಡುವ ದೈರ್ಯ ಮಾಡಿದೆ ಎಂದು ಹೇಳಿದರು ಸೌಮ್ಯ. ಈ ಘ’ಟನೆ ನಂತರ ಕೊಲ್ಲಂ ಜಿಲ್ಲೆಯಲ್ಲಿ ಸರಗ’ಳ್ಳತನ ಕಡಿಮೆ ಹಾಗಿದೆಯಂತೆ.. ತನ್ನ ತಾಳಿಗೆ ಕೈ ಹಾಕಿದವನಿಗೆ ತಕ್ಕ ಪಾಠ ಕಲಿಸಿದ ಸೌಮ್ಯ ಅವರ ಬಗ್ಗೆ ನೀವು ಏನು ಹೇಳಲು ಇಷ್ಟಪಡುತ್ತೀರಾ.