Advertisements

ನಾಯಿಯ ಜೊತೆ ಮದುವೆಯಾದ 18 ವರ್ಷದ ಹುಡುಗಿ.. ನಂತರ ಆಗಿದ್ದೇನು ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ಈ ಪ್ರಪಂಚದಲ್ಲಿ ದಿನನಿತ್ಯ ಅದೆಷ್ಟೋ ವಿಚಿತ್ರಗಳು ನಡೆಯುತ್ತವೆ.. ಅದೆಷ್ಟೋ ಅನಿರೀಕ್ಷಿತ ಸಂಗತಿಗಳು ನಮ್ಮ ಪ್ರೇರೇಪಿಸುವಂತೆ ಮಾಡುತ್ತವೆ. ಈ ಸಂಗತಿಗಳನ್ನು ಕೇಳಿದಾಗ ನಮ್ಮ ಮನಸ್ಸಿನಲ್ಲಿ ಹೀಗೂ ಉಂಟೆ ಎಂಬ ಭಾವನೆ ಕಂಡಿತ ಬರುತ್ತದೆ.. ನಾವು ತಿಳಿಸುವ ಈ ವಿಚಿತ್ರ ಸಂಗತಿ ಕೇಳಿದರೆ ನಿಜಕ್ಕೂ ನಿಮಗೆ ಆಶ್ಚರ್ಯವೆನಿಸುತ್ತದೆ. ಜಾರ್ಖಂಡ್ ರಾಜ್ಯದ ಮಂಗಳಿಮುಂಡ ಎಂಬ 18ರ ಯುವತಿ ಒಂದು ನಾಯಿಯನ್ನು ಮದುವೆಯಾದ ವಿಚಿತ್ರ ಘ’ಟನೆ ಈ ಹಿಂದೆ ನಡೆದಿದೆ.. ಒಬ್ಬ ಯುವತಿ ಒಬ್ಬ ಪುರುಷನನ್ನು ಮದುವೆಯಾಗುವುದು ಸಾಮಾನ್ಯ ಸಂಗತಿ ಆದರೆ ಈ ಮಂಗಳಿ ಎಂಬ ಯುವತಿ ಒಂದು ನಾಯಿಯ ಜೊತೆ ಮದುವೆಯಾಗಿದ್ದಾಳೆ.

Advertisements

ಸಾಮಾನ್ಯವಾಗಿ ನಾಯಿ ಅಂದರೆ ಹೆಣ್ಣು ಮಕ್ಕಳಿಗೆ ತುಂಬಾ ಪ್ರೀತಿ, ನಾಯಿಯ ತುಂಟಾಟಗಳು ಚೇಷ್ಟೆಗಳನ್ನು ಕಂಡು ಕೆಲವು ಯುವತಿಯರು ನಾಯಿಯನ್ನು ತುಂಬಾ ಪ್ರೀತಿಸುತ್ತಾರೆ ಮತ್ತು ಮುದ್ದು ಮಾಡುತ್ತಾರೆ.. ಹಾಗೆಂದು ಯಾರು ಕೂಡ ನಾಯಿಯನ್ನು ಮದುವೆ ಆಗುವ ಮಟ್ಟಕ್ಕೆ ಯೋಚನೆ ಮಾಡುವುದಿಲ್ಲ. ಆದರೆ ಈ ಯುವತಿ ಮಾತ್ರ ನಾಯಿಯ ಜೊತೆಗೆ ಮದುವೆಯಾಗಿದ್ದಾಳೆ.. ಆಕೆ ಆ ನಾಯಿಯ ಮೇಲಿನ ಯಾವುದೇ ಪ್ರೀತಿ ಮಮಕಾರದಿಂದ ಮದುವೆಯಾಗಿಲ್ಲ. ಇದಕ್ಕೆ ಬೇರೆ ಕಾರಣವೇ ಇದೆ. ಜಾರ್ಖಂಡ್ ರಾಜ್ಯದ ಗ್ರಾಮ ಒಂದರಲ್ಲಿ ಸಾಮಾನ್ಯ ಮದುವೆಗಳಂತೆ ಈ ಮದುವೆಯೂ ಅದ್ದೂರಿಯಾಗಿ ನಡೆದಿದೆ..

ನಾಯಿ ಜೊತೆ ಈಕೆ ಹಸೆಮಣೆ ಏರಿದ್ದಾಳೆ. ಈ ಬರ್ಜರಿ ಮದುವೆಗೆ ಒಂದು ದೊಡ್ಡ ಕಾರಣವಿದೆ.. ಹೌದು ಮಂಗಳಿಮುಂಡ ಈ ಯುವತಿಯ ಜಾತಕದಲ್ಲಿ ದೋ’ಷ ಒಂದಿತ್ತು. ನಾಯಿಯ ಜೊತೆ ಮದುವೆ ಮಾಡಿದರೆ ಆ ದೋಷ ಹೋಗುವುದಾಗಿ ಅಲ್ಲಿನ ಜ್ಯೋತಿಷಿ ಒಬ್ಬರು ಹೇಳಿದ್ದರು.. ಅದರಂತೆ ಮಂಗಳಿ ಪೋಷಕರು ಆ ಯುವತಿಗೆ ಆ ದೋಷ ಕಂಟಕ ಕಳೆಯಲು ಬೀದಿ ನಾಯಿಯ ಜೊತೆ ಮದುವೆ ಮಾಡುತ್ತಾರೆ. ಇದಾದ ಕೆಲವು ದಿನಗಳ ನಂತರ ಆ ಯುವತಿಯ ನಿಜವಾದ ಮದುವೆ ನಡೆಯುತ್ತದೆ..

ಅದೇ ಗ್ರಾಮದ ಯುವಕನೊಬ್ಬನಿಗೆ ಆ ಯುವತಿಯನ್ನು ಕೊಟ್ಟು ಸಂಪ್ರದಾಯ ಬದ್ದವಾಗಿ ಮದುವೆ ಮಾಡಿದ್ದಾರೆ ಅವರ ಪೋಷಕರು. ನಾವು ಕೇವಲ ಯುವತಿಯ ದೋ’ಷ ಕಳೆಯಲು ಕಂ’ಟಕ ಪರಿಹಾರವಾಗಿ ನೆಮ್ಮದಿ ದಾಂಪತ್ಯ ಜೀವನ ಸಿಗಲೆಂದು ಮೊದಲು ನಾಯಿಯ ಜೊತೆ ಮದುವೆ ಮಾಡಿ.. ನಂತರ ನಿಜವಾದ ಮದುವೆ ಒಬ್ಬ ಹುಡುಗನೊಂದಿಗೆ ಮಾಡಿದೆವು. ಇದೆಲ್ಲ ನಮ್ಮ ಮಗಳು ಮತ್ತು ಅಳಿಯನ ಒಳಿತಿಗಾಗಿ ಮಾಡಿದೆವು ಎಂದು ಹೇಳುತ್ತಾರೆ. ಇದರ ಬಗ್ಗೆ ನೀವೇನು ಹೇಳ್ತೀರಾ..