Advertisements

ಈ ಊರಿನಲ್ಲಿ ಹುಡುಗಿಯರು ಜೀನ್ಸ್ ತೊಡಂಗಿಲ್ಲ ! ಹುಡುಗ್ರು ಶಾರ್ಟ್ಸ್ ಹಾಕೋ ಆಗಿಲ್ಲ ! ಒಂದು ವೇಳೆ ರೂಲ್ಸ್ ಮೀರಿದ್ರೆ ಏನ್ ಮಾಡ್ತಾರೆ ಗೊತ್ತಾ ?

Kannada Mahiti Uncategorized

ಸಂಸ್ಕೃತಿಯ ಹೆಸರಲ್ಲಿ ಮಾಡುವ ಕೆಲವೊಂದು ನಿಯಮಗಳಿಂದ ಬಹುತೇಕರು ತೊಂದರೆಗೆ ಒಳಗಾಗುತ್ತಾರೆ. ಅದರಲ್ಲೂ ನಾವು ತೊಡುವ ಬಟ್ಟೆಗಳ ವಿಚಾರವಾಗಿ ನಿಯಮಗಳನ್ನ ಹೇರಿದಾಗ ತೊಂದರೆ ಪಡುವವರೇ ಹೆಚ್ಚು. ಹೌದು, ಬಟ್ಟೆಗಳ ವಿಚಾರದಲ್ಲಿ ಇಂತಹದೊಂದು ನಿಯಮ ಮಾಡಿರುವ ವಿಚಾರ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗುತ್ತಿದೆ. ಅದೇನೆಂದರೆ ಈ ಊರಿನಲ್ಲಿ ಹೆಣ್ಣುಮಕ್ಕಳು ಜೀನ್ಸ್ ಬಟ್ಟೆಗಳನ್ನ ಹಾಕಂಗಿಲ್ಲ. ಜೊತೆಗೆ ಗಂಡಸರು ಸಹ ಶಾರ್ಟ್ಸ್ ಬಟ್ಟೆಗಳನ್ನ ತೊಡುವಂತಿಲ್ಲ. ಒಂದು ವೇಳೆ ಯಾರೇ ಆಗಲಿ ಈ ನಿಯಮಗಳನ್ನ ಬ್ರೇಕ್ ಮಾಡಿದಲ್ಲಿ ಅಂತಹವರನ್ನ ಊರಿನಿಂದಲೇ ಹೊರಹಾಕಲಾಗುತ್ತದೆ.

Advertisements

ಹೌದು, ಇಂತಹದೊಂದು ನಿಯಮ ಮಾಡಿರುವುದು ಉತ್ತರಪ್ರದೇಶದ ಮಝಾಫರ್ ಎಂಬ ಟೌನಿಗೆ ಹತ್ತಿರದಲ್ಲಿರುವ ಖಪ್ ಎಂಬ ಗ್ರಾಮದಲ್ಲಿ. ಈ ಊರಿನ ಪಂಚಾಯತ್ ಮಾಡಿರುವ ನಿಯಮಗಳನ್ನ ಯಾರಾದ್ರೂ ಉಲ್ಲಂಘನೆ ಮಾಡಿದಲ್ಲಿ ಅವರನ್ನ ಊರಿನಿಂದ ಬಹಿಷ್ಕಾರ ಹಾಕಲಾಗುತ್ತದೆ. ಇನ್ನು ಇಂತಹ ನಿಯಮಗಳನ್ನ ಮಾಡಿರುವುದಕ್ಕೆ ಅಲ್ಲಿನ ಪಂಚಾಯತ್ ಕೊಡುವ ಉತ್ತರ ನಾವು ನಮ್ಮ ಸಂಸ್ಕೃತಿ ಬಿಂಬಿತವಾದ ಭಾರತೀಯ ಉಡುಗೆಗಳನ್ನೇ ತೊಡಬೇಕೆಂಬುದು. ಜೀನ್ಸ್, ಶಾರ್ಟ್ಸ್ ನಂತಹ ಪಾಶ್ಚಿಮಾತ್ಯ ಸಂಸ್ಕೃತಿಯನ್ನ ಬಿಂಬಿಸುವ ಬಟ್ಟೆಗಳನ್ನ ತೊಡಬಾರದೆಂಬುದು ಅವರು ಕೊಡುವ ಕಾರಣ.

ನಮ್ಮ ಸಂಸ್ಕೃತಿಯನ್ನ ಬಿಂಬಿಸುವ ಭಾರತೀಯ ಉಡುಗೆಗಳನ್ನೇ ತೊಡಬೇಕೆಂಬುದು ತಪ್ಪೇನು ಇಲ್ಲ. ಆದರೆ ಅದನ್ನ ಬಲವಂತವಾಗಿ ಹೇರುವುದು ತಪ್ಪಾಗಬಹುದೇನೋ..ಏಕೆಂದರೆ ಅಂತಹವರನ್ನ ಊರಿನಿಂದಲೇ ಬಹಿಷ್ಕಾರ ಮಾಡಲಾಗುತ್ತದೆ ಎಂದು ಹೇಳಲಾಗಿದೆ. ಇನ್ನು ಜೀನ್ಸ್, ಶಾರ್ಟ್ಸ್ ತೊಡುತ್ತಿದ್ದವರಿಗೆ ಇದರಿಂದ ಬಹಳ ತೊಂದರೆಯಾಗಿದೆಯಂತೆ. ಇನ್ನು ನಿಷೇಧ ಹೇರಿರುವ ಕಾರಣ ಜೀನ್ಸ್ ಬಳಸುತ್ತಿದ್ದವರೆಲ್ಲಾ ಗಾಗ್ರಾ ಅಥ್ವಾ ಸಲ್ವಾರ್ ತೊಡಬೇಕಾಗಿದೆ ಎಂದು ಹೇಳಲಾಗಿದೆ. ಇನ್ನು ಕಾಲೇಜಿಗೆ ಹಾಗೂ ಕೆಳಸಗಳಿಗೆ ಹೋಗುವವರು ಹೆಚ್ಚಾಗಿ ಜೀನ್ಸ್ ತೊಡುವವರೇ ಹೆಚ್ಚು. ಬಲವಂತದ ಈ ನಿಯಮಗಳಿಂದ ತುಂಬಾ ತೊಂದರೆಯಾಗುತ್ತಿದೆ ಎಂದು ಹೇಳಲಾಗಿದೆ.