Advertisements

ಸ’ತ್ತು ಹೋಗುತ್ತಿದ್ದ ಕುದುರೆಗೆ ಮೇಕೆ ಮಾಡಿದ್ದೇನು? ಈ ಕುದುರೆ ಮತ್ತು ಮೇಕೆ ನಡುವೆ ನಡೆದ ಘಟನೆ ಕೇಳಿದರೆ ನಮ್ಮೆಲ್ಲರಿಗೂ ಒಂದು ಜೀವನದ ಪಾಠ..

Inspire Kannada Mahiti

ನಮಸ್ತೆ ಸ್ನೇಹಿತರೆ, ಒಂದೂರಲ್ಲಿ ಒಬ್ಬ ವ್ಯಕ್ತಿ, ಒಂದು ಕುದುರೆ ಮತ್ತು ಮೇಕೆಯನ್ನು ಸಾಕಿಕೊಂಡಿದ್ದ.. ಒಂದು ದಿನ ಅವನ ಕುದುರೆಗೆ ಖಾ’ಯಿಲೆ ಬಂದು ಮಲಗಿ ಬಿಟ್ಟಿತು.‌. ಆಗ ಡಾಕ್ಟರ್ ಅನ್ನು ಕರೆಸಿ ಆ ಕುದುರೆಯ ಆರೋಗ್ಯ ಚೆಕಪ್ ಮಾಡಿಸಿದ ನಂತರ ಡಾಕ್ಟರ್ ಈ ಕುದುರೆಗೆ ಮೂರು ದಿ‌ನ ಚಿಕಿತ್ಸೆ ಕೊಡುತ್ತೇನೆ.. ಗುಣಮುಖವಾದರೆ ಒಳ್ಳೆಯದು, ಆಗಲಿಲ್ಲವೆಂದರೆ ಕುದುರೆಗೆ ವಿ’ಷ ಹಾಕಿ ಸಾ’ಯಿ’ಸಿಬಿಡೋಣ ಎಂದು ಹೇಳುತ್ತಾರೆ.. ಇದನ್ನು ಕೇಳಿದ ಮೇಕೆ ಮಿತ್ರನ ಪರಿಸ್ಥಿತಿ ನೋಡಿ ಅದಕ್ಕೆ ತುಂಬಾ ದುಃಖವಾಗುತ್ತದೆ. ಡಾಕ್ಟರ್ ಬಂದು ಮೊದಲನೆ ದಿನ ಚಿಕಿತ್ಸೆ ಕೊಡುತ್ತಾರೆ.

Advertisements

ಆದರೆ ಕುದುರೆ ಎದ್ದೇಳಲಿಲ್ಲ. ಆಗ ಮೇಕೆ ಕುದುರೆ ಹತ್ತಿರ ಹೋಗಿ ಈ ರೀತಿ ಹೇಳಿತು.. ಏ ಎದ್ದೇಳು ಮಾರಾಯ್ಯ ಇಲ್ಲ ಅಂದರೆ ಸಾ’ಯಿ’ಸಿ ಬಿಡ್ತಾರೆ, ಆಮೇಲೆ ಎಷ್ಟೇ ಬಡ್ಕೊಂಡ್ರು ನಿನ್ನ ಜೀವ ವಾಪಸ್ ಬರೋದಿಲ್ಲ. ಎರಡನೆ ದಿನವೂ ಚಿಕಿತ್ಸೆ ಕೊಡುತ್ತಾರೆ.. ಆದರು ಸಹ ಕುದುರೆ ಎದ್ದೇಳಲಿಲ್ಲ. ಡಾಕ್ಟರ್ ಮೂರನೇ ದಿನವೂ ಔಷದಿ ಹಾಕಿ ಹೋದ.. ಆಗ ಮೇಕೆ ಕುದುರೆಗೆ ಇದು ನಿನ್ನ ಕೊನೆಯ ದಿನ ನಾಳೆ ನಿನ್ನನ್ನು ಸಾ’ಯಿ’ಸುತ್ತಾರೆ ದಯವಿಟ್ಟು ಎದ್ದೇಳು, ನೀನು ಸ್ವಲ್ಪ ಅಲುಗಾಡಿದರು ಸಹ ನಿನ್ನ ಜೀವ ಉಳಿಯುತ್ತದೆ. ಪ್ರಯತ್ನ ಮಾಡು ಎಂದು ಗೋಳಾಡಿತು.. ಆಗ ಕುದುರೆ ಸ್ವಲ್ಪ ಅಲುಗಾಡಿತು.

ಆಗೆ ಗೆಳೆಯ ಮತ್ತೊಮ್ಮೆ ಪ್ರಯತ್ನಿಸು ಎಂದು ಹುರಿದುಂಬಿಸಿದಾಗ ಕುದುರೆ ಸ್ವಲ್ಪ ಸ್ವಲ್ಪವೇ ಎದ್ದೇಳಲು ಶುರುಮಾಡಿತು.. ಕೊನೆಗೆ ಕುದುರೆ ಪೂರ್ತಿಯಾಗಿ ಎದ್ದು ನಿಂತಿತು. ಮೇಕೆಗೆ ಎಲ್ಲಿಲ್ಲದ ಸಂತೋಷ.. ತನ್ನ ಮಿತ್ರ ತನ್ನ ಜೀವ ಉಳಿಸಿಕೊಂಡನೆಂದು. ಕೆಲ ಹೊತ್ತಿನ ನಂತರ ಆ ಕೋಣೆಗೆ ಯಜಮಾನ ಬಂದ.. ಕುದುರೆ ಎದ್ದು ನಿಂತಿದ್ದನು ನೋಡಿ, ಅವನ ಕುಷಿ ಮುಗಿಲ ಮುಟ್ಟಿತು. ಮನೆಯವರನ್ನೆಲ್ಲಾ ಕರೆದ. ಎಲ್ಲಾರು ಬನ್ನಿ ನನ್ನ ಕುದುರೆಗೆ ಗುಣಮುಖವಾಗಿದೆ, ನನಗೆ ತುಂಬಾ ಖುಷಿಯಾಗಿದೆ..

ಇವತ್ತು ಎಲ್ಲರಿಗೂ ಪುಲ್ ಪಾರ್ಟಿ, ಇದೇ ಕುಷಿಯಲ್ಲಿ ಮಾಂ’ಸದ ಊಟ ಮಾಡಿ ಸಂಬ್ರಮ ಮಾಡೋಣ.. ಅದಕ್ಕೆ ಮೇಕೆಯನ್ನು ಕ’ಡಿಯೋಣ ಎಂದು ಹೇಳಿದ. ಇದನ್ನು ಕೇಳಿ ಶಾಕ್ ಆದ ಮೇಕೆ.. ನೀತಿ ಕಥೆ ಏನೆಂದರೆ ಪಾಪು ಪುಣ್ಯ, ಪುಣ್ಯ ಪಲ. ಒಬ್ಬರಿಗೆ ಒಳ್ಳೆಯದನ್ನು ಮಾಡಿದರೆ ನಮಗೆ ಒಳ್ಳೆಯದೇ ಆಗುತ್ತೆ ಅನ್ನೋದು ನಮ್ಮ ತಾತನ ಕಾಲಕ್ಕೆ ಮುಗಿದು ಹೋಯಿತು. ಅದಕ್ಕೆ ನಿಮ್ಮ ಕೆಲಸ ನೀವು ನೋಡುಕೊಂಡು ಇದ್ದುಬಿಡಿ.. ಈಗಿನ ಜಗತ್ತಿನಲ್ಲಿ ಇದೇ ತತ್ವವನ್ನು ಪಾಲಿಸಬೇಕು. ಇದಕ್ಕೆ ನಿವೇನು ಹೇಳ್ತೀರಾ..